Site icon Vistara News

Samantha | ಸಮಂತಾ ನಟನೆಯ ʻಯಶೋದಾʼ ಟ್ರೈಲರ್‌ ಬಿಡುಗಡೆಗೊಳಿಸಿದ ನಟ ರಕ್ಷಿತ್‌ ಶೆಟ್ಟಿ!

Samantha

ಬೆಂಗಳೂರು: ನಟಿ ಸಮಂತಾ ‌ನಟನೆಯ (Samantha) ʻಯಶೋದಾʼ ಸಿನಿಮಾದ ಟ್ರೈಲರ್‌ ಬಿಡುಗಡೆಗೊಂಡಿದೆ. ಕನ್ನಡದ ಟ್ರೈಲರ್‌ ಅನ್ನು ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಬಿಡುಗಡೆಗೊಳಿಸಿದ್ದಾರೆ. ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ತೆಲುಗಿನಲ್ಲಿ ವಿಜಯ್ ದೇವರಕೊಂಡ, ತಮಿಳಿನಲ್ಲಿ ಸೂರ್ಯ, ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಮತ್ತು ಹಿಂದಿಯಲ್ಲಿ ವರುಣ್ ಧವನ್ ಬಿಡುಗಡೆ ಮಾಡಿದ್ದಾರೆ.

ಟ್ರೈಲರ್‌ ನೋಡುವಾಗ ಆಕ್ಷನ್‌ ಥ್ರಿಲರ್‌ ಆಗಿದ್ದು, ಹಿನ್ನೆಲೆ ಸಂಗೀತದ ಬಗ್ಗೆ ಪ್ರೇಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ದೃಶ್ಯ ನೋಡುವಾಗ ಕುತೂಹಲಕ್ಕೆ ಎಡೆ ಮಾಡಿಕೊಡುವಂತಿದೆ. ಶ್ರೀದೇವಿ ಪ್ರೊಡಕ್ಷನ್‌ನ 14ನೇ ಸಿನಿಮಾ ಇದಾಗಿದ್ದು, ಹರಿ ಮತ್ತು ಹರೀಶ್‌ ನಿರ್ದೇಶನ ಮಾಡಿದ್ದಾರೆ. ಶಿವಲೆಂಕಾ ಕೃಷ್ಣ ಪ್ರಸಾದ್‌ ನಿರ್ಮಿಸಿದ್ದಾರೆ. ನವೆಂಬರ್ 11ರಂದು ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ | Samantha | ಸಮಂತಾ ನಟನೆಯ ಯಶೋದಾ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ

ಯಶೋದಾ ಚಿತ್ರದಲ್ಲಿ ವರಲಕ್ಷ್ಮೀ ಶರತ್‌ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮಾ, ಸಂಪತ್ ರಾಜ್, ಶತ್ರು, ಮಧುರಿಮಾ, ಕಲ್ಪಿಕಾ ಗಣೇಶ್, ದಿವ್ಯಾ ಶ್ರೀಪಾದ, ಪ್ರಿಯಾಂಕಾ ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಮಣಿಶರ್ಮ ಹಿನ್ನೆಲೆ ಸಂಗೀತವಿದ್ದು, ಎಂ. ಸುಕುಮಾರ್‌ ಛಾಯಾಗ್ರಹಣ ಮಾಡಿದ್ದಾರೆ. ತೆಲುಗು ಚಿತ್ರದ ಅವತರಣಿಕೆಯು ಸೆನ್ಸಾರ್ ಆಗಿತ್ತು. ರಾಮಜೋಗಯ್ಯ ಶಾಸ್ತ್ರಿ ಅವರ ಸಾಹಿತ್ಯ ಈ ಚಿತ್ರಕ್ಕಿದೆ.

ಇದನ್ನೂ ಓದಿ| Samantha | ಸಮಂತಾ ನಟನೆಯ ಯಶೋದಾ ಟ್ರೈಲರ್‌ ಬಿಡುಗಡೆಗೊಳಿಸಲಿದ್ದಾರೆ ಸಿಂಪಲ್‌ ಸ್ಟಾರ್‌!

Exit mobile version