Site icon Vistara News

Samantha: ಸಮಂತಾ-ನಾಗಚೈತನ್ಯ ಒಟ್ಟಿಗೆ ನಟಿಸಿದ ಸಿನಿಮಾಗೆ 13 ವರ್ಷ: ಚೈ ಪೋಸ್ಟ್‌ ಮಾಡಿದ್ದೇನು?

Samantha's Ye Maaya Chesave turns 13, Chay's post

ಬೆಂಗಳೂರು: ಸಮಂತಾ ರುತ್ ಪ್ರಭು (Samantha) ಅವರ ಚೊಚ್ಚಲ ಚಿತ್ರ, ʻʻಏ ಮಾಯ ಚೇಸಾವೆʼ (Ye Maaya Chesave), ಫೆಬ್ರವರಿ 26 ರಂದು ಬಿಡುಗಡೆಯಾಗಿ 13 ವರ್ಷಗಳನ್ನು ಪೂರೈಸಿದೆ. ಇದರೊಂದಿಗೆ, ನಟಿ ಸಮಂತಾ ಚಿತ್ರರಂಗದಲ್ಲಿ 13 ವರ್ಷಗಳನ್ನು ಪೂರೈಸಿದ್ದಾರೆ. ಇದೀಗ ಸಮಂತಾ ಅವರು ಭಾರತದಲ್ಲಿ ಹೆಚ್ಚು ಬೇಡಿಕೆಯಿರುವ ನಟಿಯರಲ್ಲಿ ಒಬ್ಬರು. ಕಾರ್ಯಕ್ರಮದ ಸೆಟ್‌ಗಳಲ್ಲಿ ಸಿಟಾಡೆಲ್ ತಂಡದೊಂದಿಗೆ ನಟಿ ಈ ಮೈಲಿಗಲ್ಲನ್ನು ಆಚರಿಸಿದರು. ಗೌತಮ್ ಮೆನನ್ ಅವರ ʻಏ ಮಾಯ ಚೇಸಾವೆಯಲ್ಲಿ ಸಮಂತಾ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಂಡ ನಾಗ ಚೈತನ್ಯ, ಈ ಸಂದರ್ಭದಲ್ಲಿ ಇನ್‌ಸ್ಟಾದಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

13 ವರ್ಷಗಳನ್ನು ಪೂರೈಸಿದ ಸಮಂತಾ

13 ವರ್ಷಗಳ ಹಿಂದೆ ಫೆಬ್ರವರಿ 26ರಂದು ಸಮಂತಾ ಮತ್ತು ನಾಗ ಚೈತನ್ಯ ಅಭಿನಯದ ʻಏ ಮಾಯ ಚೇಸಾವೆ ʼ ಬಿಡುಗಡೆಯಾಯಿತು. ನಟಿ ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು ಹೂವುಗಳ ಫೋಟೊವನ್ನು ಹಂಚಿಕೊಂಡ ಸಮಂತಾ ಇನ್‌ಸ್ಟಾದಲ್ಲಿ ʻʻನಿಮ್ಮೆಲ್ಲರ ಪ್ರೀತಿಗಾಗಿ ಧನ್ಯವಾದ. ಪ್ರತಿ ದಿನವೂ ಹೊಸ ದಿನ ಮತ್ತು ಅದು ತರುವ ಎಲ್ಲಾ ಒಳ್ಳೆಯ ವಿಷಯಗಳಿಗೆ ನಾನು ಆಭಾರಿ” ಎಂದು ಬರೆದುಕೊಂಡಿದ್ದಾರೆ. ಅವರು ಪ್ರಸ್ತುತ ನೈನಿತಾಲ್‌ನಲ್ಲಿ ರಾಜ್ ಮತ್ತು ಡಿಕೆ ಅವರ ಸಿಟಾಡೆಲ್ ಚಿತ್ರೀಕರಣದಲ್ಲಿದ್ದಾರೆ. ನಟಿ ಸಿಟಾಡೆಲ್ ಸಿರೀಸ್‌ ತಂಡದೊಂದಿಗೆ ವಿಶೇಷ ಸಂದರ್ಭವನ್ನು ಆಚರಿಸಿದರು.

ಇದನ್ನೂ ಓದಿ: Samantha Ruth Prabhu: ವೀಕೆಂಡ್‌ನಲ್ಲಿ ಕುದುರೆ ಸವಾರಿ ಆನಂದಿಸುತ್ತಿರುವ ಫೋಟೊ ಹಂಚಿಕೊಂಡ ನಟಿ ಸಮಂತಾ

ಸಮಂತಾ ಪೋಸ್ಟ್‌

ಪೋಸ್ಟ್‌ ಹಂಚಿಕೊಂಡ ನಾಗಚೈತನ್ಯ!

ಗೌತಮ್ ವಾಸುದೇವ್ ಮೆನನ್ ಅವರ ʻಏ ಮಾಯ ಚೇಸಾವೆʼ ಚಿತ್ರದಲ್ಲಿ ನಾಗ ಚೈತನ್ಯ ಎದುರು ಸಮಂತಾ ಜೋಡಿಯಾಗಿದ್ದರು. ವಿಶೇಷ ಸಂದರ್ಭವನ್ನು ಆಚರಿಸುತ್ತಾ, ನಾಗ ಚೈತನ್ಯ ಅವರು ಚಿತ್ರದ ಒಂದೆರಡು ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ.

Exit mobile version