Site icon Vistara News

Samantha | ಹೆಚ್ಚಿನ ಚಿಕಿತ್ಸೆಗೆ ದಕ್ಷಿಣ ಕೊರಿಯಾಗೆ ತೆರಳಿದ್ದಾರಂತೆ ಸಮಂತಾ!

Samantha

ಬೆಂಗಳೂರು : ಟಾಲಿವುಡ್‌ ನಟಿ ಸಮಂತಾ ರುತ್‌ ಪ್ರಭು (Samantha ) ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವುದರ ಬಗ್ಗೆ ತಮ್ಮ ನೋವನ್ನು ಇನ್‌ಸ್ಟಾ ಮೂಲಕ ಹಂಚಿಕೊಂಡಿದ್ದರು. ಇದಾದ ನಂತರ ಅವರು ʻಯಶೋದಾʼ ಸಿನಿಮಾದ ಕೆಲಸದಲ್ಲಿ ತೊಡಗಿಸಿಕೊಂಡರು. ಇದೀಗ ಸಮಂತಾ ಅವರ ಕಾಯಿಲೆ ಉಲ್ಬಣವಾಗಿದ್ದು, ಅವರನ್ನು ದಕ್ಷಿಣ ಕೊರಿಯಾಗೆ ಶಿಫ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ.

ಸಮಂತಾ ನಟನೆಯ ʻಯಶೋದಾʼ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಕಂಡಿದೆ. ತಮಗೆ ಇದ್ದ ಮೈಯೋಸಿಟಿಸ್ ಕಾಯಿಲೆಯ ನಡುವೆಯೂ ಸಮಂತಾ ಅವರು ಸಿನಿಮಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಈ ರೋಗದ ವಿರುದ್ಧ ಹೋರಾಡುತ್ತಿರುವುದಾಗಿ ಹಾಗೂ ಶೀಘ್ರದಲ್ಲಿಯೇ ಗುಣಮುಖರಾಗುವ ವಿಶ್ವಾಸವನ್ನೂ ಅವರು ಸೋಷಿಯಲ್‌ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದರು. ಇದೀಗ ಸಮಂತಾ ಅವರು ಹೆಚ್ಚಿನ ಚಿಕಿತ್ಸೆಗೆ ದಕ್ಷಿಣ ಕೊರಿಯಾಗೆ ಶಿಫ್ಟ್‌ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಹಿಂದೆ  ಅಮೆರಿಕಾದಲ್ಲಿ ಚಿಕಿತ್ಸೆ ಪಡೆದರು ಎಂದು ಹೇಳಲಾಗಿತ್ತು. ಅಲ್ಲಿಂದ ಬಂದ ನಂತರ ಅವರು ಭಾರತದಲ್ಲೇ ಔಷಧಿ ಪಡೆದಿದ್ದರು. ಇದೀಗ ದಕ್ಷಿಣ ಕೊರಿಯಾಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ನಟಿ ಯಾವುದೇ ಸ್ಪಷ್ಟನೆ ನೀಡಿಲ್ಲ.

ಇದನ್ನೂ ಓದಿ | Actress Samantha | ಜಿಮ್ ಕೋಚ್‌ ಜುನೈದ್ ಶೇಖ್‌ ತಬ್ಬಿಕೊಂಡ ಸಮಂತಾ: ನಟಿ ಹೇಳಿದ್ದೇನು?

ಕೆಲವು ದಿನಗಳ ಹಿಂದೆ ಸಮಂತಾ ಅವರ ಆರೋಗ್ಯ ತೀರಾ ಹದಗೆಟ್ಟಿದೆ. ಹೀಗಾಗಿ ಅವರನ್ನು ಅಪೋಲೊ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸುದ್ದಿ ಹರಿದಾಡಿತ್ತು. ಹಲವು ಸಿನಿಮಾಗಳಿಗೆ ಈಗಾಗಲೇ ಸಮಂತಾ ನಟಿಸುತ್ತಿರುವುದು ಕನ್‌ಫರ್ಮ್‌ ಆಗಿದೆ. ವಿಜಯ್‌ ದೇವರಕೊಂಡ ಜತೆ ಆರಂಭವಾದ ʻಖುಷಿ ʼಸಿನಿಮಾ ಕೂಡ ಅರ್ಧಕ್ಕೆ ನಿಂತಿದೆ. ಈಗಾಗಲೇ ಚಿತ್ರತಂಡ ಸಿನಿಮಾದ ಪೋಸ್ಟರ್‌ ಕೂಡ ಹಂಚಿಕೊಂಡಿದೆ.

ಇದನ್ನೂ ಓದಿ | Samantha | ಸಮಂತಾ ಅಭಿನಯದ ʻಯಶೋದಾʼ ಸಿನಿಮಾಗೆ ಕೋರ್ಟ್‌ ತಡೆಯಾಜ್ಞೆ ನೀಡಿದ್ಯಾಕೆ?

Exit mobile version