Site icon Vistara News

Samyuktha Hegde: ಬಟ್ಟೆಗೆ ದುಡ್ಡೇನಾದ್ರು ಬೇಕಾ? ಕೇಳಿದ್ರು ನೆಟ್ಟಿಗರು; ಮೈ ಚಳಿ ಬಿಟ್ಟು ಡ್ಯಾನ್ಸ್‌ ಮಾಡಿದ ಸಂಯುಕ್ತಾ-ಕಿಶನ್‌!

Samyuktha Hegde kishen bilagali
ಕಿರಿಕ್‌ ಬೆಡಗಿ (Samyuktha Hegde) ಸಂಯುಕ್ತಾ ಹೆಗ್ಡೆ ತಾವು ಬಿಕಿನಿ ಧರಿಸಿದ ಹಾಟ್‌ ಫೋಟೊಗಳನ್ನು ಆಗಾಗ ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಸಂಯುಕ್ತಾ ಹೆಗ್ಡೆ ಸಖತ್ ಫಿಟ್ ಆಗಿದ್ದಾರೆ. ಡ್ಯಾನ್ಸ್ ಕೂಡ ಅಷ್ಟೇ ಅದ್ಭುತವಾಗಿಯೇ ಮಾಡುತ್ತಾರೆ. ‘ಬಿಗ್ ಬಾಸ್’ ಖ್ಯಾತಿಯ ಕಿಶನ್ ಬಿಳಗಲಿ (kishen bilagali) ಜತೆ ಸಂಯುಕ್ತಾ ಡ್ಯಾನ್ಸ್‌ ಮಾಡಿರುವ ಫೋಟೊ ವೈರಲ್‌ ಆಗಿದೆ.
ರೊಮ್ಯಾಂಟಿಕ್ ಹಾಡಿಗೆ ಇಬ್ಬರು ಕುಣಿದು ಕುಪ್ಪಳಿಸಿದ್ದಾರೆ. ಇದೀಗ ವಿಡಿಯೊ ಕಂಡು ʻʻಮೂರು ಬಿಟ್ಟೋರು ಊರಿಗೆ ದೊಡ್ಡವರುʼʼಎಂದು ನೆಟ್ಟಿಗರು ನೆಗೆಟಿವ್‌ ಕಮೆಂಟ್‌ ಮಾಡಿದ್ದಾರೆ.

ಡ್ಯಾನ್ಸ್‌ ವಿಡಿಯೊ

ಜಂಗ್ಲಿ ಸಿನಿಮಾದ ʻನೀನೆಂದರೆ ನನ್ನೊಳಗೆʼ ಎಂಬ ಹಾಡಿಗೆ ಕಿಶನ್ ಜತೆ ನಟಿ ಸೊಂಟ ಬಳುಕಿಸಿದ್ದಾರೆ. ಇಬ್ಬರು ಬಿಳಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ.

ಇದನ್ನೂ ಓದಿ: Samyuktha Hegde: ಟಾಪ್‌ ಲೆಸ್‌ ಆದ ಸಂಯುಕ್ತಾ ಹೆಗ್ಡೆ; ಪಡ್ಡೆ ಹುಡುಗರ ನಿದ್ದೆಗೆಡಿಸಿದ ಕಿರಿಕ್‌ ಬೆಡಗಿ!

ರಿಯಾಲಿಟಿ ಶೋಗಳಲ್ಲಿನ ಡ್ಯಾನ್ಸ್ ಮೂಲಕ ಮೋಡಿ ಮಾಡಿರುವ ಕಿಶನ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.
ಸಂಯುಕ್ತಾ ಕನ್ನಡದಲ್ಲಿ ‘ತುರ್ತು ನಿರ್ಗಮನ’ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಸದ್ಯ ‘ಕ್ರೀಮ್‌’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.
Exit mobile version