ಬೆಂಗಳೂರು: ಬೆಳದಿಂಗಳ ಬಾಲೆ, ಗೌರಿ ಗಣೇಶ, ನಾ ನಿನ್ನ ಬಿಡಲಾರೆ, ಬಯಲುದಾರಿ ಸೇರಿದಂತೆ ಸುಮಾರು 300ಕ್ಕೂ ಅಧಿಕ ಚಲನಚಿತ್ರಗಳಲ್ಲಿ ಅತ್ಯಂತ ಮನೋಜ್ಞವಾಗಿ (anant nag kannada movies list) ಅಭಿನಯಿಸಿರುವ ಹಿರಿಯ ನಟ ಅನಂತ್ ನಾಗ್ ಅವರಿಗೆ ಸೆಪ್ಟೆಂಬರ್ 4ರಂದು ಜನುಮದಿನದ ಸಂಭ್ರಮ. ಸ್ಯಾಂಡಲ್‌ವುಡ್‌ನ ಲೆಜೆಂಡ್ ಎಂದು ಕರೆಸಿಕೊಳ್ಳುವ ಅನಂತ್ ನಾಗ್ (Anant Nag Birthday) ಮಾಡದಿರುವ ಪಾತ್ರವಿಲ್ಲ. ಗಂಭೀರ ಪಾತ್ರವೇ ಆಗಲಿ ಅಥವಾ ಕಾಮಿಡಿ ಜಾನರ್ ಆಗಿರಲಿ ಅನಂತ್ ನಾಗ್ ಸಲೀಸಾಗಿ ಮಾಡಿಬಿಡುತ್ತಾರೆ. ಆ್ಯಕ್ಷನ್ ಪ್ರಧಾನ ಸಿನಿಮಾಗಳಲ್ಲೂ ಅನಂತ್ ನಾಗ್ (anant nag upcoming movies) ಮಿಂಚಿದ್ದುಂಟು. ಇಂತಹ ಮಹಾನ್ ನಟನ ಜನ್ಮದಿನದಂದು ಗಣ್ಯರು ಶುಭಹಾರೈಸಿದ್ದಾರೆ. ಕನ್ನಡ ಸಿನಿಮಾ ರಂಗಕ್ಕೆ ಸೇವೆ ಸಲ್ಲಿಸುತ್ತಿರುವ ಅನಂತ್ ನಾಗ್ ಅವರಿಗೆ ಜಗತ್ತಿನ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿಗೆದ್ದಾರೆ.
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಅನಂತ್‌ನಾಗ್
ಅನಂತ್ ನಾಗ್ ಅವರು ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅನೇಕರು ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ಹಲವು ಕಡೆಗಳಲ್ಲಿ ಅವರನ್ನು ಕರೆದು ಸನ್ಮಾನಿಸುವ ಕೆಲಸ ಕೂಡ ಆಗುತ್ತಿದೆ. ಅನಂತ್ ನಾಗ್ ಅವರು ಸದ್ಯ ಒಂದೆರಡು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ.
ಡೈಲಾಗ್ ಕಿಂಗ್..!
ಒಂದೊಂದು ಪೇಜ್ ಡೈಲಾಗ್ ಇದ್ದರೂ ಸರಳವಾಗಿ, ಸಲೀಸಾಗಿ ಹೇಳಿಬಿಡುತ್ತಿದ್ದರು ಅನಂತ್ ನಾಗ್. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ‘ ಇದಕ್ಕೊಂದು ಉದಾಹರಣೆ. ಅದರಲ್ಲೂ 80, 90ರ ದಶಕದಲ್ಲಿ ಅನಂತ್ ನಾಗ್ ಅವರ ಜತೆಗೆ ಸಿನಿಮಾ ಮಾಡಲು ನಿರ್ದೇಶಕರು ಮುಗಿಬೀಳುತ್ತಿದ್ದರು. ಪೋಷಕ ಪಾತ್ರವೇ ಇರಲಿ, ನಾಯಕನ ಪಾತ್ರವೇ ಆಗಿರಲಿ ಅನಂತ್ ನಾಗ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದರು. ಇನ್ನು ಯಾವುದೇ ಸಿನಿಮಾ ಬಂದರೂ ಕುಟುಂಬ ಸಮೇತ ಕೂತು ನೋಡಲು ಮುಜುಗರ ಇರುತ್ತಿರಲಿಲ್ಲ. ಹೀಗಾಗಿ ಅನಂತ್ ನಾಗ್ ಅವರ ಸಿನಿಮಾಗಳು ಕನ್ನಡ ನಾಡಿನ ಮನೆಮಾತಾಗಿದ್ದವು.
ಇದನ್ನೂ ಓದಿ: Anant Nag: ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಅನಂತ್‌ನಾಗ್; ಶಿವಣ್ಣ, ರಿಷಬ್ ಸ್ಪೆಷಲ್ ವಿಶ್
ಸಾಲು ಸಾಲು ಹಿಟ್..!
ನಟ ಅನಂತ್ ನಾಗ್ 5 ದಶಕ ಅಂದರೆ ಬರೊಬ್ಬರಿ ಅರ್ಧ ಶತಮಾನಗಳ ಕಾಲ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸೇವೆ ಸಲ್ಲಿಸಿದ್ದಾರೆ. ಈ ಸೇವೆಯಲ್ಲಿ ಸಾಲುಸಾಲು ಹಿಟ್ ಸಿನಿಮಾ ನೀಡಿದ್ದ ಅನಂತ್ ನಾಗ್ ಯಾವುದೇ ಪಾತ್ರವಾದರೂ ಸೈ ಎನಿಸಿಕೊಳ್ಳುತ್ತಿದ್ದರು. ಗೌರಿ ಗಣೇಶ, ಗಣೇಶನ ಮದುವೆ, ಯಾರಿಗೂ ಹೇಳಬೇಡಿ, ಮನೇಲಿ ಇಲಿ ಬೀದಿಲಿ ಹುಲಿ, ಒಂದು ಸಿನಿಮಾ ಕಥೆ, ಬೆಂಕಿಯ ಬಲೆ, ಅರುಣರಾಗ, ಅನುಪಮಾ, ಮುದುಡಿದ ತಾವರೆ ಅರಳಿತು, ನಾ ನಿನ್ನ ಬಿಡಲಾರೆ ಹೀಗೆ ನಟ ಅನಂತ್ ನಾಗ್ ಅಭಿನಯಿಸಿರುವ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು.
ಅನಂತ್ ನಾಗ್ ಅವರ ಸಹಜ ಅಭಿನಯವನ್ನ ಇಷ್ಟಪಡದ ಪ್ರೇಕ್ಷಕನೇ ಇಲ್ಲ. ಅದರಲ್ಲೂ ಬೇರೆ ಬೇರೆ ಭಾಷೆಯಲ್ಲೂ ಅಭಿಮಾನಿಗಳ ಮನಗೆದ್ದವರು ನಟ ಅನಂತ್ ನಾಗ್. ಗಣ್ಯರು ನಟ ಅನಂತ್ ನಾಗ್ ಅವರಿಗೆ ಶುಭ ಕೋರಿದ್ದು, ಇನ್ನೂ ಹಲವು ದಶಕಗಳ ಕಾಲ ಚಂದನವನಕ್ಕೆ ಅನಂತ್ ನಾಗ್ ಸೇವೆ ಸಲ್ಲಿಸಲಿ ಎಂಬುದೇ ಕೋಟಿ ಕೋಟಿ ಕನ್ನಡಿಗರ ಆಶಯ.