ಬೆಂಗಳೂರು: ಸ್ಯಾಂಡಲ್‌ವುಡ್ ನಿರ್ದೇಶಕ, ಸಹಾಯಕ ನಿರ್ದೇಶಕ ಮತ್ತು ಸಂಭಾಷಣೆ ಬರಹಗಾರರಾಗಿ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದ ವಿ ಆರ್ ಭಾಸ್ಕರ್ (V R Bhaskar) ಮೈಸೂರಿನಲ್ಲಿ ಗುರುವಾರ (ಸೆ.14) ವಿಧಿವಶರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದ ಭಾಸ್ಕರ್ ಅವರು ಡಾ. ವಿಷ್ಣುವರ್ಧನ್ (Dr Vishnuvardhan) ಅವರ ಜತೆ ಒಡನಾಟ ಹೊಂದಿದ್ದರು. ನಟನಾಗಿಯೂ ಅವರು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು.
ಭಾಸ್ಕರ್ ಅವರನ್ನು ಕೆಲವು ದಿನಗಳ ಹಿಂದೆ ನಗರದ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ‘ರುದ್ರನಾಗ’ ಸಿನಿಮಾಗೆ ಸಹ ನಿರ್ದೇಶಕರಾಗಿ ವಿ.ಆರ್. ಭಾಸ್ಕರ್ ಅವರು ಕೆಲಸ ಮಾಡಿದ್ದರು. ಅವರ ಕೆಲಸವನ್ನು ಮೆಚ್ಚಿದ ವಿಷ್ಣುವರ್ಧನ್ ಅವರು ಅನೇಕ ಅವಕಾಶಗಳನ್ನು ಕೊಡಿಸಿದ್ದರು. ರುದ್ರ ನಾಗ, ಕರ್ತವ್ಯ, ನನ್ನ ಶತ್ರು, ರುದ್ರವೀಣೆ, ದಾದಾ, ಆರಾಧನೆ, ಕರುಳಿನ ಕುಡಿ, ಕದಂಬ, ಸುಪ್ರಭಾತ, ಲಯನ್ ಜಗಪತಿ ರಾವ್, ಹೃದಯವಂತ, ಆಪ್ತಮಿತ್ರ, ಆಪ್ತ ರಕ್ಷಕ, ಗಾಡ್ ಫಾದರ್ ಮತ್ತು ಡಾ.ಕೃಷ್ಣ ಹೀಗೆ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದರು.
ಇದನ್ನೂ ಓದಿ: Minister D Sudhakar : ಸಚಿವ ಸುಧಾಕರ್ ವಿರುದ್ಧ ಮುಗಿಬಿದ್ದ ಬಿಜೆಪಿ ನಿಯೋಗ; ಸಂತ್ರಸ್ತೆ ಭೇಟಿ, ನ್ಯಾಯಕ್ಕೆ ಗುಡುಗು
ಕೆಲವೇ ದಿನಗಳ ಹಿಂದೆ ಪತ್ನಿ ಮತ್ತು ಮಗನನ್ನು ಕೂಡ ಅವರು ಅನಾರೋಗ್ಯದಿಂದ ಕಳೆದುಕೊಂಡಿದ್ದರು. ಮೈಸೂರಿನಲ್ಲೇ ವಿ.ಆರ್. ವಿ.ಆರ್. ಭಾಸ್ಕರ್ ಅವರು ಮೂಲತಃ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನವರು. ಚಿಕ್ಕ ವಯಸ್ಸಿನಿಂದಲೂ ಸಿನಿಮಾ ಬಗ್ಗೆ ಅವರು ಆಸಕ್ತಿ ಹೊಂದಿದ್ದರು. ಭಾಸ್ಕರ್ ಅಂತ್ಯಕ್ರಿಯೆ ನಡೆಯಲಿದೆ. ಭಾಸ್ಕರ್ ಅವರ ತಾಯಿ ಹರಿಶ್ಚಂದ್ರ ಘಾಟ್‌ನಲ್ಲಿ ಅಂತಿಮ ವಿಧಿವಿಧಾನಗಳನ್ನು ನಡೆಸಲಿದ್ದಾರೆ.