Site icon Vistara News

Hoysala Movie | ಡಾಲಿ ಧನಂಜಯ ಅಭಿನಯದ ಹೊಯ್ಸಳ ಸೆಟ್‌ಗೆ ಸ್ಯಾಂಡಲ್‌ವುಡ್‌ ಪದ್ಮಾವತಿ ರಮ್ಯಾ ಪ್ರತ್ಯಕ್ಷ

Haysala Movie

ಬೆಂಗಳೂರು: ಡಾಲಿ ಧನಂಜಯ್‌ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನೆಮಾತಾಗುತ್ತಿದ್ದಾರೆ. ಇತ್ತೀಚಿನ ಅವರ ಬೈರಾಗಿ ಸಿನಿಮಾದ ಅಭಿನಯಕ್ಕೂ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿದೆ. ʻಜಮಾಲಿ ಗುಡ್ಡʼ ಸಿನಿಮಾದ ಪೋಸ್ಟರ್‌ ಹಂಚಿಕೊಂಡು ಅವರು ಸಖತ್‌ ಸುದ್ದಿಯಲ್ಲಿದ್ದಾರೆ. ಇದೀಗ ʻಹೊಯ್ಸಳʼ (Hoysala Movie) ಚಿತ್ರದ ಶೂಟಿಂಗ್‌ನಲ್ಲಿ ತೊಡಗಿದ್ದು, ಆ ಸೆಟ್‌ಗೆ ಸ್ಯಾಂಡಲ್‌ವುಡ್‌ ಕ್ವೀನ್‌ ನಟಿ ರಮ್ಯಾ ಭೇಟಿ ನೀಡಿ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ | ಡಾಲಿಯ Haysala Movie ಸೆಟ್‌ಗೆ ಭೇಟಿ ನೀಡಿದ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರ್ತಿ

ಡಾಲಿ ಧನಂಜಯ್​ ನಟಿಸುತ್ತಿರುವ ಹೊಯ್ಸಳ ಚಿತ್ರದ ಬಗ್ಗೆ ಫ್ಯಾನ್ಸ್​ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಮ್ಯಾ ಪ್ರತಿಭಾವಂತ ಕಲಾವಿದರಿಗೆ ಪ್ರೋತ್ಸಾಹ ನೀಡುತಿದ್ದಾರೆ. ಅನೇಕ ಸಿನಿಮಾಗಳ ಬಗ್ಗೆ ಆಸಕ್ತಿ ತೋರಿಸುತ್ತಿದ್ದು ಈಗ ಡಾಲಿ ಧನಂಜಯ್ ನಟನೆಯ ‘ಹೊಯ್ಸಳ’ ಚಿತ್ರದ ಶೂಟಿಂಗ್​ ಸೆಟ್​ಗೆ ಅವರು ಭೇಟಿ ನೀಡಿದ್ದಾರೆ. ಚಿತ್ರೀಕರಣದ ವೇಳೆ ರಮ್ಯಾ ಸೆಟ್‌ಗೆ ಭೇಟಿ ನೀಡಿರುವ ವಿಡಿಯೊ ಇದೀಗ ವೈರಲ್​ ಆಗಿದೆ.

ಕರುನಾಡ ಕುವರಿ ವೇದಾ ಕೃಷ್ಣಮೂರ್ತಿ ಭಾರತ ಮಹಿಳೆಯರ ತಂಡದ ಹಿರಿಯ ಸದಸ್ಯೆ. ಇವರು ಈ ಹಿಂದೆ ಹೊಯ್ಸಳ ಸಿನಿಮಾದ ಸೆಟ್‌ಗೆ ಭೇಟಿ ಕೊಟ್ಟು ಚಿತ್ರ ತಂಡದ ಸದಸ್ಯರಿಗೆ ಶುಭ ಹಾರೈಸಿದ್ದರು. ನಿರ್ದೇಶಕ ವಿಜಯ್‌ ನಾಗೇಂದ್ರ ಈ ಹಿಂದೆ ಗಣೇಶ್‌ ಅಭಿನಯದ ಗೀತಾ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅಜನೀಶ್‌ ಲೋಕನಾಥ್‌ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಇದನ್ನೂ ಓದಿ | Once Upon a Time In Jamaligudda | ಅವಳಿ ನಗರಗಳ ಹೆಸರಿನಲ್ಲಿ ಇಬ್ಬರು ಕೈದಿಗಳ ಅನಾವರಣ!

Exit mobile version