Site icon Vistara News

Pm Modi: ಪ್ರಧಾನಿ ಮೋದಿ ಔತಣಕೂಟದಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್ಸ್: ಫೋಟೊಗಳು ಇಲ್ಲಿವೆ!

Pm Modi

ಫೆ.12, ಭಾನುವಾರ ಸಂಜೆ 8.30ರ ನಂತರ ನಡೆದ ಔತಣಕೂಟದಲ್ಲಿ ನಟ ಯಶ್, ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕರಾದ ವಿಜಯ್ ಕಿರಗಂದೂರು ಮತ್ತು ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಶ್ರದ್ಧಾ ಜೈನ್ ಅವರು ಭಾಗಿಯಾಗಿದ್ದರು. ನಟ ಪುನೀತ್ ರಾಜ್ ಕುಮಾರ್ ಅವರ ಜನಪ್ರಿಯತೆಯನ್ನು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಸ್ಮರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡ ಚಿತ್ರೋದ್ಯಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಾಡಿನ ಸಾಂಸ್ಕೃತಿಕ ಪರಂಪರೆಗೆ ಕನ್ನಡ ಚಿತ್ರೋದ್ಯಮವು ಒತ್ತು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹಾಡಿಹೊಗಳಿದ್ದಾರೆ. 

ಕೆಜಿಎಫ್, ಕಾಂತಾರ ಚಿತ್ರಗಳನ್ನ ನೋಡಿ ಮೆಚ್ಚಿಕೊಂಡು, ಭಾರತೀಯ‌ ಚಿತ್ರರಂಗದ‌ ಕುರಿತು ಚರ್ಚೆ ನಡೆಸಿದ್ದಾರೆ. ನಮ್ಮ‌ ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಏನು ಮಾಡಬೇಕು ಹಾಗೂ ಹಾಲಿವುಡ್ ಬೆಳೆದ ರೀತಿ, ನಮ್ಮ ಚಿತ್ರರಂಗವೂ ಬೆಳೆಯಬೇಕು ಎಂದು ಮೋದಿ ತಿಳಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಬಗ್ಗೆಯೂ ಮೆಚ್ಚಿಕೊಂಡ ಮೋದಿ, ಯುವ ನಿರ್ಮಾಪಕ ವಿಜಯ್ ಕಿರಗಂದೂರು ಜತೆಗೆ ಇದ್ದ ಸಂತಸದ ಕ್ಷಣ. ಸಿನಿಮಾ ಕುರಿತು ಮಾತುಕತೆ ಆಗಿದ್ದೂ, ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎನ್ನಲಾಗಿದೆ.

ಮಾಜಿ ರೆಡಿಯೋ ಜಾಕಿ ಶ್ರದ್ಧಾ ಜೈನ್ ಕೂಡ ಈ ಸಂದರ್ಭದಲ್ಲಿ ಇದ್ದರು.

Exit mobile version