ಬೆಂಗಳೂರು: ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star darshan) ಅವರ 47ನೇ ಜನುಮದಿನ ಸಂಭ್ರಮ. ಡಿ ಬಾಸ್ ಫ್ಯಾನ್ಸ್ ಈಗಾಗಲೇ ದರ್ಶನ್ ಅವರ ಮನೆ ಮುಂದೆ ಜಮಾಯಿಸಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ನೂರಾರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದರ್ಶನ್ ಅಭಿನಯಿಸಿರುವ ಎಲ್ಲಾ ಸಿನಿಮಾಗಳ ಹೆಸರನ್ನು ಸ್ಕೂಟಿ ಮೇಲೆ ವಿಶೇಷ ಚೇತನ ಅಭಿಮಾನಿಯೊಬ್ಬರು ಹಾಕಿಸಿದ್ದಾರೆ. ದರ್ಶನ್ ಭಾವಚಿತ್ರದ ಟೀಶರ್ಟ್‌ವನ್ನು ಕೊಂಡುಕೊಳ್ಳುತ್ತಿದ್ದಾರೆ ಫ್ಯಾನ್ಸ್. ಈಗಾಗಲೇ ಬ್ಯಾರಿಕೇಡ್‌ಗಳನ್ನು ಹಾಕಿ, ಸರದಿ ಸಾಲಿನಲ್ಲಿ ನಿಂತು ನೆಚ್ಚಿನ ನಟನಿಗೆ ವಿಶ್ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಈಗಾಗಲೇ ಕೇಕ್, ಹಾರಗಳನ್ನು ತರದಂತೆ ದರ್ಶನ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸುವುದಕ್ಕೆ ಸುಮಾರು 200 ಬೌನ್ಸರ್‌ಗಳನ್ನು ಕರೆಸಲಾಗಿದೆ. ಹಾಗೇ 200ಕ್ಕೂ ಅಧಿಕ ಮಂದಿ ವಾಲೆಂಟಿಯರ್ಸ್ ಇದ್ದಾರೆ. ಇವರ ಜೊತೆ 300 ಮಂದಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಹೀಗಾಗಿ ಒಟ್ಟು 700 ರಿಂದ 800 ಸಿಬ್ಬಂದಿ ಅಭಿಮಾನಿಗಳನ್ನು ನಿಯಂತ್ರಿಸಲಿದ್ದಾರೆ.
ಇದನ್ನೂ ಓದಿ: Devil Teaser: ಕ್ರೇಜಿ ಡೈಲಾಗ್ ಮೂಲಕ ‘ಡೆವಿಲ್’ ಆಗಿ ಎಂಟ್ರಿ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್!
ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಒಂದು ಅಂದಾಜಿನ ಪ್ರಕಾರ, ರಾಜ್ಯಾದ್ಯಂತ ಸುಮಾರು 60 ರಿಂದ 70 ಸಾವಿರ ಮಂದಿ ಈ ಹುಟ್ಟುಹಬ್ಬದ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಹೀಗಾಗಿ ಅವರೆಲ್ಲರಿಗೂ ಮೈದಾನದಲ್ಲಿ ಪೆಂಡಾಲ್ ಹಾಕಿಸಿ ಊಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಊಟದ ವ್ಯವಸ್ಥೆ ಜೊತೆಗೆ ಪಾನಕ, ಮಜ್ಜಿಗೆ, ನೀರು ಕೊಡುವುದಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದೇ ದಿನ ರಕ್ತದಾನ ಶಿಬಿರ ಕೂಡ ನಡೆಯಲಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಚುನಾವಣೆ ಬಾಂಡ್; ಪಾರದರ್ಶಕತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ದರ್ಶನ್ ಚಿತ್ರರಂಗಕ್ಕೆ ಬಂದು 25 ವರ್ಷ
ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಅವರು ಸಿನಿರಂಗಕ್ಕೆ ಪದಾರ್ಪಣೆ ಮಾಡಿ 25 ವರ್ಷಗಳು ಕಳೆದಿವೆ. ಅದ್ಧೂರಿಯಾಗಿ ಈ ಕಾರ್ಯಕ್ರಮ ಫೆಬ್ರವರಿ 17ರರಂದು ನಡೆಯಲಿದೆ. ಶ್ರೀ ಆದಿಚುಂಚನಗಿರಿ ಶ್ರೀಗಳು, ಶ್ರೀ ಸುತ್ತೂರು ಶ್ರೀಗಳು, ಹಾಗೂ ಸಂಸದೆ, ಚಿತ್ರನಟಿ ಸುಮಲತಾ ಅಂಬರೀಶ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಲಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನದ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ದರ್ಶನ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಜತೆಗೆ ವಿ.ಹರಿಕೃಷ್ಣ ಸಂಗೀತ ಸಂಜೆ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ಇರಲಿವೆ. ಇವೆಲ್ಲ ಕಾರ್ಯಗಳ ಉಸ್ತುವಾರಿಯನ್ನು ದರ್ಶನ್ ಅವರ ಆತ್ಮೀಯರಾದ ಎಸ್.ಸಚ್ಚಿದಾನಂದ ಇಂಡುವಾಳು ವಹಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.