Site icon Vistara News

Actor Darshan: ಆರೋಪಿ ದರ್ಶನ್​ಗೆ 10ಕ್ಕೂ ಹೆಚ್ಚು ದೊನ್ನೆ ಬಿರಿಯಾನಿ ತರಿಸಿದ್ದ ಪೊಲೀಸರು!

Actor Darshan 10 Biryani For Sent To Police Custody

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ (Actor Darshan) ಹಾಗೂ ಅವರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ರೇಣುಕಾಸ್ವಾಮಿ ಕೊಲೆಯಾದ ಗೋಡಾನ್‌ಗೆ ಆರೋಪಿಗಳನ್ನು ಕರೆತರುವ ಸಾಧ್ಯತೆ ಇದೆ ಎನ್ನಲಾಗಿದೆ. ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳನ್ನು ಸ್ಥಳ ಮಹಜರ್‌ಗೆ ಕತೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ. ಜತೆಗೆ ಪೊಲೀಸರು ದೊನ್ನೆ ಬಿರಿಯಾನಿ (Donne Biriyani) ತರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಾತ್ರಿ ಠಾಣೆಗೆ ಹೊರಗಡೆಯಿಂದ 10ಕ್ಕೂ ಹೆಚ್ಚು ದೊನ್ನೆ ಬಿರಿಯಾನಿ ಬಾಕ್ಸ್​ಗಳು ಬಂದಿದ್ದವು. ಇದೀಗ ಈ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ಪಟ್ಟಣಗೆರೆ ಗೋಡಾನ್‌ನಲ್ಲಿ ಸ್ಥಳ ಮಹಜರ್ ಸಾಧ್ಯತೆ!

ರೇಣುಕಾ ಸ್ವಾಮಿ ಎಂಬುವವರನ್ನು ಹತ್ಯೆ ಮಾಡಿದ ಆರೋಪದಲ್ಲಿ ದರ್ಶನ್​, ಪವಿತ್ರಾ ಗೌಡ, ವಿ. ವಿನಯ್, ಆರ್. ನಾಗರಾಜು, ಎಸ್​. ಪ್ರದೋಶ್​, ಎಂ. ಲಕ್ಷ್ಮಣ್​, ಕೆ. ಪವನ್, ನಂದೀಶ್​, ದೀಪಕ್​ ಕುಮಾರ್, ಕಾರ್ತಿಕ್​, ನಿಖಿಲ್ ನಾಯಕ್​, ರಾಘವೇಂದ್ರ ಅಲಿಯಾಸ್​ ರಾಘು, ಕೇಶವಮೂರ್ತಿ ಪೊಲೀಸರ ಅತಿಥಿ ಆಗಿದ್ದಾರೆ. ಎಲ್ಲರನ್ನೂ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ. ಇಂದು ರೇಣುಕಾಸ್ವಾಮಿ ಕೊಲೆಯಾದ ಗೋಡಾನ್‌ಗೆ ಆರೋಪಿಗಳನ್ನ ಕರೆತರುವ ಸಾಧ್ಯತೆ ಇದೆ ಎನ್ನಲಾಗಿದೆ. ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳನ್ನ ಸ್ಥಳ ಮಹಜರ್ ಗೆ ಕರೆತರುವ ಸಾಧ್ಯತೆ ಇದೆ. ಸದ್ಯ ಪೊಲೀಸರು ಈ ಗೋಡಾನ್‌ವನ್ನು ಸೀಜ್ ಮಾಡಿದ್ದಾರೆ. ಈ ಗೋಡಾನ್ ಸುತ್ತಮುತ್ತ ಹೆಚ್ಚಾಗಿ ಸಾರ್ವಜನಿಕರು ಓಡಾಟ ಕೂಡ ಇಲ್ಲ ಎನ್ನಲಾಗಿದೆ. ಈ ಗೋಡಾನ್‌ ಪಟ್ಟಣಗೆರೆ ಜಯಣ್ಣ ಅವರಿಗೆ ಸೇರಿತ್ತು. ಸದ್ಯ ಬಾಡಿಗೆಗೆ ನೀಡಲಾಗಿತ್ತು. ನಿನ್ನೆಯಿಂದಲೂ ಪೊಲೀಸರ ವಶದಲ್ಲಿತ್ತು ಈ ಗೋಡಾನ್.

ಇದನ್ನೂ ಓದಿ: Actor Darshan : ದರ್ಶನ್‌ ಪರ ವಹಿಸಿ ಸಿಎಂ, ಗೃಹ ಸಚಿವರಿಗೆ ಮನವಿ ಮಾಡಿದ್ರಾ ರಾಜಕೀಯ ನಾಯಕರು?

ದೊನ್ನೆ ಬಿರಿಯಾನಿ ದಚ್ಚು ಗ್ಯಾಂಗ್‌ಗೆ!

ದರ್ಶನ್‌ ಹಾಗೂ ಅವರ ಗ್ಯಾಂಗ್‌ವನ್ನು 6 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಒಪ್ಪಿಸಲಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್​ ಠಾಣೆಯಲ್ಲಿ ದರ್ಶನ್ (Darshan) ಹಾಗೂ ಅವರ ಸಹಚರರು ಇದ್ದರು. ಠಾಣೆಗೆ ಹೊರಗಡೆಯಿಂದ 10ಕ್ಕೂ ಹೆಚ್ಚು ದೊನ್ನೆ ಬಿರಿಯಾನಿ ಬಾಕ್ಸ್​ಗಳು ಬಂದಿದ್ದವು. ಪೊಲೀಸರು ದೊನ್ನೆ ಬಿರಿಯಾನಿ (Donne Biriyani) ತರಿಸಿದ್ದಾರೆ ಎನ್ನಲಾಗಿತ್ತು.

ಲಾಕಪ್​ನಲ್ಲಿ ಸೊಳ್ಳೆ ಕಡಿತಕ್ಕೆ ಬೆಚ್ಚಿ ರಾತ್ರಿಯೆಲ್ಲ ಎದ್ದು ಕುಳಿತಿದ್ದ ನಟ ದರ್ಶನ್​!

ತನ್ನದೇ ಅಭಿಮಾನಿ ರೇಣುಕಾ ಸ್ವಾಮಿ ಎಂಬುವರನ್ನು ಕ್ರೂರವಾಗಿ ಕೊಲೆ ಮಾಡಿರುವ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ (Actor Darshan Arrested)​, ಸೊಳ್ಳೆ ಕಡಿತಕ್ಕೆ ಬೆಚ್ಚಿ ರಾತ್ರಿಯೆಲ್ಲ ಎಚ್ಚರವಿದ್ದರು. ಕೊಲೆಯಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ದರ್ಶನ್ ಮತ್ತು ಆತನ ಸಹಚರಿಗೆ ಕಾಮಾಕ್ಷಿಪಾಳ್ಯ ಪೊಲೀಸರು ಬೇರೆ ಬೇರೆ ಲಾಕಪ್​ನಲ್ಲಿ ಮಲಗಲು ವ್ಯವಸ್ಥೆ ಮಾಡಿದ್ದರು. ಆದರೆ, ಇದುವರೆಗೆ ಜೇಬುಗಳ್ಳರ, ಮನೆಗಳ್ಳರ ಮತ್ತು ಸಣ್ಣಪುಟ್ಟ ಹೊಡೆದಾಟಗಳಲ್ಲಿ ಜೈಲು ಸೇರುತ್ತಿದ್ದವರ ರಕ್ತ ಹೀರಿ ಅಭ್ಯಾಸವಿದ್ದ ಸೊಳ್ಳೆಗಳು ದರ್ಶನ್​ಗೂ ಕಾಟ ಕೊಟ್ಟವು. ಪೊಲೀಸರು ‘ಸೆಲೆಬ್ರಿಟಿ ದರ್ಶನ್​ಗೆ’ ಕಾರ್ಪೆಟ್​, ದಿಂಬು ಎಲ್ಲ ಕೊಟ್ಟು ಮಲಗಲು ವ್ಯವಸ್ಥೆ ಮಾಡಿದ್ದರೂ ಸೊಳ್ಳೆಗಳು ಅವೆಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಬೆಡ್​ಶೀಟ್​ ಒಳಗಿನಿಂದ ತೂರಿಕೊಂಡು ಹೋಗಿ ಕಚ್ಚಿದವು.

ಕೊಲೆ ಆರೋಪ ಎದುರಿಸುತ್ತಿರುವ ದರ್ಶನ್ ಹಾಗೂ ಉಳಿದ 11 ಜನ ಆರೋಪಿಗಳು ಲಾಕ್ ಅಪ್ ನಲ್ಲೇ ಉಳಿಯಬೇಕಾಯಿತು. ದರ್ಶನ್‌, ರಾಘವೇಂದ್ರ ಮತ್ತು ವಿನಯ್ ಗೆ ಒಂದು ಲಾಕ್ ಅಪ್ ನಲ್ಲಿ ಮಲಗಲು ವ್ಯವಸ್ಥೆ ಮಾಡಿದ್ದರೆ, ಇತರ ಆರೋಪಿಗಳಿಗೆ ಮತ್ತೊಂದು ಲಾಕ್ ಅಪ್​ನಲ್ಲಿ ಮಲಗಲು ಹೇಳಿದ್ದರು. ರಾತ್ರಿ ಆರೋಪಿಗಳಿಗೆ ಖಾಸಗಿ ಹೋಟೆಲ್ ನಿಂದ ದೊನ್ನೆ ಬಿರಿಯಾನಿ‌ ವ್ಯವಸ್ಥೆ ಮಾಡಲಾಗಿತ್ತು. ಚೆನ್ನಾಗಿ ತಿಂದಿದ್ದ ಅವರು ಪೊಲೀಸರೇ ಒದಗಿಸಿದ್ದ ಹಾಸಿಗೆ ಪರಿಕರಗಳು, ಬೆಡ್ ಶೀಟ್, ತಲೆ ದಿಂಬು ಬಳಸಿ ಮಲಗಿದ್ದರು. ಆದರೆ, ಸೊಳ್ಳೆಗಳು ಅವರ ರಕ್ಷಣಾ ಕೋಟೆಯನ್ನು ಭೇದಿಸಿ ಬಂದು ಕಚ್ಚಿದ್ದವು.

Exit mobile version