ಬೆಂಗಳೂರು: ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ (Darshan) ಅವರು ‘ಡೆವಿಲ್: ದಿ ಹೀರೊ’ ಸಿನಿಮಾದ ಕೆಲಸಗಳ ನಡುವೆ ಬಿಡುವು ಪಡೆದ ದುಬೈಗೆ ತೆರಳಿದ್ದಾರೆ. ಅಲ್ಲಿ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಜತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ದುಬೈನಲ್ಲಿರುವ ಅಭಿಮಾನಿಗಳು ಸೆಲೆಬ್ರೇಷನ್ ಮಾಡಿದ್ದು, ನಟ ದರ್ಶನ್ ಪತ್ನಿ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಫೋಟೋ, ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿವೆ.ಈ ಬಾರಿ ನಿರ್ಮಾಪಕಿ ಶೈಲಜಾ ನಾಗ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರಿ ಫೋಟೊ ಹಾಕಿದ್ದರು. ಅದರ ಸ್ಕ್ರೀನ್‌ಶಾಟ್ ಅನ್ನು ವಿಜಯಲಕ್ಷ್ಮೀ ದರ್ಶನ್ ತಮ್ಮ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದಾರೆ.ವಿಜಯಲಕ್ಷ್ಮೀ ಆ ಫೋಟೋ ಹಂಚಿಕೊಂಡ ಎರಡು ಗಂಟೆಯ ಬಳಿಕ ಪವಿತ್ರಾ ಗೌಡ ಕರ್ಮದ ಬಗ್ಗೆ ದರ್ಶನ್ ಮಾತನಾಡಿರುವ ಸ್ಟೇಟಸ್ ಹಾಕಿದ್ದಾರೆ. ಈ ವಿಚಾರಕ್ಕೆ ಅವರ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ.
ಇನ್ನೊಂದೆಡೆ ಸೋಶಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡ ಅವರು ಕೋಪ ಹೊರಹಾಕಿದ್ರಾ ಎಂಬ ಪ್ರಶ್ನೆ ಮೂಡಿದೆ. ಯಾಕೆಂದರೆ, ದರ್ಶನ್ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ಕರ್ಮದ ಬಗ್ಗೆ ಮಾತಾಡಿರುವ ವೈರಲ್ ವಿಡಿಯೊವನ್ನು ಈಗ ಪವಿತ್ರಾ ಗೌಡ (Pavithra Gowda) ಶೇರ್ ಮಾಡಿ ‘ಕರ್ಮ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಈಗ ವಿವಾಹ ವಾರ್ಷಿಕೋತ್ಸವವನ್ನು ಗ್ರ್ಯಾಂಡ್ ಆಗಿ ಮಾಡಿದ್ದಾರೆ. ದುಬೈನಲ್ಲಿರುವ ಅಭಿಮಾನಿಗಳು ಸೆಲೆಬ್ರೇಷನ್ ಮಾಡಿದ್ದು, ನಟ ದರ್ಶನ್ ಪತ್ನಿ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: Actor Darshan: ಮೇ 10ಕ್ಕೆ ಗುಡ್‌ನ್ಯೂಸ್ ಕೊಡ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್! ಏನದು?
ವೈರಲ್ ವಿಡಿಯೊ ಏನು?
ಕರ್ಮ ಎನ್ನುವುದು ಬ್ಯಾಗೇಜ್ ಥರ. ಏನನ್ನ ನೀವೂ ಅದರಲ್ಲಿ ಫಿಲ್ ಮಾಡ್ತೀರ ಅದೇ ನಿಮಗೆ ಸಿಗುತ್ತೆ. ನಾವೆಲ್ಲಾ ಚಿಕ್ಕವರಿರುವಾಗ ನಮ್ಮ ಅಜ್ಜಿ, ತಾತ ಹೇಳ್ತಾ ಇದ್ದರು. ಈಗ ಕರ್ಮ ಮಾಡ್ತಾ ಇದ್ದೀಯಾ ಮುಂದಿನ ಜನ್ಮಕ್ಕೆ ಕ್ಯಾರಿ ಆಗುತ್ತೆ ಅಂತ. ಆಗೆಲ್ಲಾ ಮುಂದಿನ ಜನ್ಮಕ್ಕೆ ಕ್ಯಾರಿ ಆಗ್ತಾ ಇತ್ತು. ಈಗ ಅಲ್ಲೆ ಡ್ರಾ ಅಲ್ಲೇ ಬಹುಮಾನ’ ಎಂಬ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಪವಿತ್ರಾ ಗೌಡ ಕರ್ಮದ ಬಗ್ಗೆ ದರ್ಶನ್ ಮಾತನಾಡಿರುವ ಸ್ಟೇಟಸ್ ಹಾಕಿದ್ದಾರೆ. ಈ ವಿಚಾರಕ್ಕೆ ಅವರ ಅಭಿಮಾನಿಗಳು ಕೋಪವಾಗಿದ್ದಾರೆ. ಆದರೆ ಇಲ್ಲಿ ಪವಿತ್ರಾ ಗೌಡ ಯಾರಿಗೆ ಕರ್ಮದ ಪಾಠ ಮಾಡಿದ್ರು ಗೊತ್ತಿಲ್ಲ. ಪಕ್ಕಾ ಇದು ವಿಜಯಲಕ್ಷ್ಮೀ ಅವರಿಗೆ ಎಂದು ಕಮೆಂಟ್ ಮಾಡಿದ್ದಾರೆ.
ಮಾಡೆಲ್ ಪವಿತ್ರ ಗೌಡ ಅವರು ಕೆಲವು ದಿನಗಳ ಹಿಂದೆಯಷ್ಟೇ ನಟ ದರ್ಶನ್ (Darshan Thoogudeepa) ಜತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದರು. ಇದಾದ ಮೇಲೆ ಆ ಪೋಸ್ಟ್ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಖಡಕ್ ಆಗಿಯೇ ಪ್ರತಿಕ್ರಿಯಿಸಿದ್ದರು.
ವಿಜಯಲಕ್ಷ್ಮಿ ಬರೆದುಕೊಂಡಿದ್ದೇನು?
ವಿಜಯಲಕ್ಷ್ಮಿ ಈ ಬಗ್ಗೆ ಪೋಸ್ಟ್ ಮಾಡಿ ʻʻಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುವ ಮೊದಲು ಈ ಮಹಿಳೆಗೆ ಸೆನ್ಸ್ ಮೊದಲು ಇರಬೇಕು. ಇದೀಗ ಆಕೆಯ ಕ್ಯಾರೆಕ್ಟರ್ ಹಾಗೂ ನೈತಿಕ ನಿಲುವಿನ ಬಗ್ಗೆ ತೋರಿಸುತ್ತಿದೆ. ವಿವಾಹಿತನೆಂದು ತಿಳಿದರೂ ಕೂಡ ತಮ್ಮ ವೈಯಕ್ತಿಕ ಅಗತ್ಯತೆಯಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಈ ಎಲ್ಲ ಫೋಟಗಳು ಪವಿತ್ರಾ ಮತ್ತು ಸಂಜಯ್ ಸಿಂಗ್ ಅವರ ಮಗಳು ಖುಷಿ ಗೌಡ ಅವರದ್ದು. ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಧ್ವನಿ ಎತ್ತಲು ಸೋಷಿಯಲ್ ಮೀಡಿಯಾವನ್ನು ಬಖಸುವುದಿಲ್ಲ. ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಇಡೀ ಸಮಾಜಕ್ಕೆ ವಿಭಿನ್ನ ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಅಂದರೆ ಸಂಜಯಸಿಂಗ್ , ಖುಷಿಗೌಡ, ಪವಿತ್ರ ಗೌಡ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದುʼʼಎಂದು ಬರೆದುಕೊಂಡಿದ್ದರು.