Site icon Vistara News

Actor Darshan Arrested : ದರ್ಶನ್​ನ ಅನ್​ಫಾಲೋ ಮಾಡಿ ಡಿಪಿ ಡಿಲೀಟ್‌ ಮಾಡಿದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ!

Actor Darshan Arrested Vijayalakshmi Darshan Unfollow Darshan On Instagram

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಅರೆಸ್ಟ್ (Actor Darshan Arrested) ಆಗಿದ್ದರೂ ಅವರ ಪತ್ನಿ ವಿಜಯಲಕ್ಷ್ಮಿ ಇದುವರೆಗೆ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ. ಪವಿತ್ರಾ ಗೌಡ ವಿಚಾರದಲ್ಲಿ ಆಗಾಗ ಸೋಶಿಯಲ್ ಮೀಡಿಯಾಗಳ ಮೂಲಕ ಯುದ್ಧ ಸಾರುತ್ತಿದ್ದ ವಿಜಯಲಕ್ಷ್ಮಿ ಅವರು ಈ ಬಾರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಘಟನೆ ಬಳಿಕ ವಿಜಯಲಕ್ಷ್ಮಿ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಹೀಗಿರುವಾಗಲೇ ವಿಜಯಲಕ್ಷ್ಮಿ ಅವರು ಇನ್​ಸ್ಟಾಗ್ರಾಮ್​ ಪ್ರೊಫೈಲ್‌​ ಫೋಟೊ ಡಿಲೀಟ್ ಮಾಡಿದ್ದಾರೆ. ಇಷ್ಟೇ ಅಲ್ಲ ನಟ ದರ್ಶನ್ ಅವರನ್ನು ಅನ್​ಫಾಲೋ ಮಾಡಿದ್ದಾರೆ.

ಪವಿತ್ರಾ ಗೌಡ ವಿಚಾರದಲ್ಲಿ ವಿಜಯಲಕ್ಷ್ಮಿ ಈ ಹಿಂದೆ ಸಾಕಷ್ಟು ಬಾರಿ ಸೋಷಿಯಲ್​ ಮೀಡಿಯಾ ವಾರ್ ನಡೆಸಿದ್ದರು. ಪವಿತ್ರಾ ವಿರುದ್ಧ ನಾನಾ ರೀತಿಯ ಹೇಳಿಕೆಗಳನ್ನು ನೀಡಿದ್ದರು. ದರ್ಶನ್​ ಕೊಲೆ ಆರೋಪದಲ್ಲಿ ಸಿಕ್ಕಿ ಹಾಕಿಕೊಂಡಿರುವುದ ಪವಿತ್ರಾ ಅವರ ವಿಚಾರದಲ್ಲಿ. ಹೀಗಾಗಿ ಅವರಿಗೆ ಸಹಜವಾಗಿಯೇ ಅಸಮಾಧಾನ ಉಂಟಾಗಿರುತ್ತದೆ. ಕೆಲ ತಿಂಗಳ ಹಿಂದೆ ಪವಿತ್ರಾ ಗೌಡ ಅವರು ದರ್ಶನ್ ಜತೆ ಇರೋ ಫೋಟೋ ಹಂಚಿಕೊಂಡಿದ್ದರು. ‘10 ವರ್ಷಗಳ ಸಂಬಂಧ’ ಎಂದು ಟ್ಯಾಗ್​ಲೈನ್ ನೀಡಿದ್ದರು. ಇದನ್ನು ವಿಜಯಲಕ್ಷ್ಮಿ ಖಂಡಿಸಿದ್ದರು. ಇದೀಗ ಇನ್​ಸ್ಟಾಗ್ರಾಮ್​ನಲ್ಲಿ ದರ್ಶನ್ ಸೇರಿ ಎಲ್ಲರನ್ನೂ ವಿಜಯಲಕ್ಷ್ಮಿ ಅನ್​ಫಾಲೋ ಮಾಡಿದ್ದಾರೆ. ಈ ಮೊದಲು ಅವರು ದರ್ಶನ್​ನ ಫಾಲೋ ಮಾಡುತ್ತಿದ್ದರು. ಇನ್ನು, ಇನ್​ಸ್ಟಾಗ್ರಾಮ್ ಡಿಪಿಯನ್ನು ಕೂಡ ತೆಗೆದು ಹಾಕಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: Nandamuri Balakrishna: ಇಂದು ತೆಲುಗು ಸೂಪರ್‌ಸ್ಟಾರ್ ಬಾಲಯ್ಯ ಬರ್ತ್‌ಡೇ; ಹೊಸ ಸಿನಿಮಾ ಅನೌನ್ಸ್‌!

ಲಾಕಪ್​ನಲ್ಲಿ ಸೊಳ್ಳೆ ಕಡಿತಕ್ಕೆ ಬೆಚ್ಚಿ ರಾತ್ರಿಯೆಲ್ಲ ಎದ್ದು ಕುಳಿತಿದ್ದ ನಟ ದರ್ಶನ್​!

ತನ್ನದೇ ಅಭಿಮಾನಿ ರೇಣುಕಾ ಸ್ವಾಮಿ ಎಂಬುವರನ್ನು ಕ್ರೂರವಾಗಿ ಕೊಲೆ ಮಾಡಿರುವ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ (Actor Darshan Arrested)​, ಸೊಳ್ಳೆ ಕಡಿತಕ್ಕೆ ಬೆಚ್ಚಿ ರಾತ್ರಿಯೆಲ್ಲ ಎಚ್ಚರವಿದ್ದರು. ಕೊಲೆಯಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ದರ್ಶನ್ ಮತ್ತು ಆತನ ಸಹಚರಿಗೆ ಕಾಮಾಕ್ಷಿಪಾಳ್ಯ ಪೊಲೀಸರು ಬೇರೆ ಬೇರೆ ಲಾಕಪ್​ನಲ್ಲಿ ಮಲಗಲು ವ್ಯವಸ್ಥೆ ಮಾಡಿದ್ದರು. ಆದರೆ, ಇದುವರೆಗೆ ಜೇಬುಗಳ್ಳರ, ಮನೆಗಳ್ಳರ ಮತ್ತು ಸಣ್ಣಪುಟ್ಟ ಹೊಡೆದಾಟಗಳಲ್ಲಿ ಜೈಲು ಸೇರುತ್ತಿದ್ದವರ ರಕ್ತ ಹೀರಿ ಅಭ್ಯಾಸವಿದ್ದ ಸೊಳ್ಳೆಗಳು ದರ್ಶನ್​ಗೂ ಕಾಟ ಕೊಟ್ಟವು. ಪೊಲೀಸರು ‘ಸೆಲೆಬ್ರಿಟಿ ದರ್ಶನ್​ಗೆ’ ಕಾರ್ಪೆಟ್​, ದಿಂಬು ಎಲ್ಲ ಕೊಟ್ಟು ಮಲಗಲು ವ್ಯವಸ್ಥೆ ಮಾಡಿದ್ದರೂ ಸೊಳ್ಳೆಗಳು ಅವೆಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಬೆಡ್​ಶೀಟ್​ ಒಳಗಿನಿಂದ ತೂರಿಕೊಂಡು ಹೋಗಿ ಕಚ್ಚಿದವು.

ಕೊಲೆ ಆರೋಪ ಎದುರಿಸುತ್ತಿರುವ ದರ್ಶನ್ ಹಾಗೂ ಉಳಿದ 11 ಜನ ಆರೋಪಿಗಳು ಲಾಕ್ ಅಪ್ ನಲ್ಲೇ ಉಳಿಯಬೇಕಾಯಿತು. ದರ್ಶನ್‌, ರಾಘವೇಂದ್ರ ಮತ್ತು ವಿನಯ್ ಗೆ ಒಂದು ಲಾಕ್ ಅಪ್ ನಲ್ಲಿ ಮಲಗಲು ವ್ಯವಸ್ಥೆ ಮಾಡಿದ್ದರೆ, ಇತರ ಆರೋಪಿಗಳಿಗೆ ಮತ್ತೊಂದು ಲಾಕ್ ಅಪ್​ನಲ್ಲಿ ಮಲಗಲು ಹೇಳಿದ್ದರು. ರಾತ್ರಿ ಆರೋಪಿಗಳಿಗೆ ಖಾಸಗಿ ಹೋಟೆಲ್ ನಿಂದ ದೊನ್ನೆ ಬಿರಿಯಾನಿ‌ ವ್ಯವಸ್ಥೆ ಮಾಡಲಾಗಿತ್ತು. ಚೆನ್ನಾಗಿ ತಿಂದಿದ್ದ ಅವರು ಪೊಲೀಸರೇ ಒದಗಿಸಿದ್ದ ಹಾಸಿಗೆ ಪರಿಕರಗಳು, ಬೆಡ್ ಶೀಟ್, ತಲೆ ದಿಂಬು ಬಳಸಿ ಮಲಗಿದ್ದರು. ಆದರೆ, ಸೊಳ್ಳೆಗಳು ಅವರ ರಕ್ಷಣಾ ಕೋಟೆಯನ್ನು ಭೇದಿಸಿ ಬಂದು ಕಚ್ಚಿದ್ದವು.

ಇಂದಿನಿಂದ ಆರು ದಿನಗಳ ಕಾಲ ತನಿಖೆ

ಬುಧವಾರದಿಂದ ಆರಂಭಗೊಂಡಂತೆ ದರ್ಶನ್ ಗ್ಯಾಂಗ್​​ಗೆ ಆರು ದಿನಗಳ ಕಾಲ ಪೊಲೀಸ್ ವಿಚಾರಣೆ ನಡೆಯಲಿದೆ. ಕೊಲೆ ಕೇಸ್ ಸಂಬಂಧ ಪೊಲೀಸರು ಸಾಕ್ಷ್ಯಗಳನ್ನು ಒಟ್ಟು ಮಾಡಲಿದ್ದಾರೆ. ಆರಂಭದಲ್ಲಿ ಆರೋಪಿಗಳ ಎಲೆಕ್ಟ್ರಾನಿಕ್ ಡಿವೈಸ್​​ಗಳ ತಲಾಷೆ ನಡೆಯಲಿದೆ. ಜತೆಗೆ ಅಪಹರಿಸಿಕೊಂಡು ಬಂದು ಕೂಡಿ ಹಾಕಿದ ಜಾಗ, ಕೊಲೆ ಮಾಡಿ ಎಸೆದ ಜಾಗವನ್ನು ಮಹಜರು ಮಾಡಲಿದ್ದಾರೆ.

Exit mobile version