ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಅವರನ್ನು (Actor Darshan) ಆರು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆರೋಪ ಸಾಬೀತಾದರೆ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈಗಾಗಲೇ ಕೆಲ ಸೆಲೆಬ್ರಿಟಿಗಳು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್ ಇದೀಗ ವಿಸ್ತಾರ ಜತೆ ಈ ಪ್ರಕರಣ ಕುರಿತು ಮಾತನಾಡಿದ್ದಾರೆ.
ಎನ್ ಎಂ ಸುರೇಶ್ ಮಾತನಾಡಿ ʻʻರೇಣುಕಾ ಅವರ ತಂದೆ ತಾಯಿಯನ್ನು ನೋಡಿದರೆ ಕರುಳು ಚುರ್ ಅನ್ನುತ್ತೆ. ಯಾರೇ ತಪ್ಪು ಮಾಡಲಿ, ಕಾನೂನು ಶಿಕ್ಷೆ ಕೊಡುತ್ತದೆ. ಸತ್ಯಾಸತ್ಯತೆ ಬಯಲಿಗೆ ಎಳೆಯುತ್ತೇವೆ ಎಂದು ಕಮಿಷನರ್ ಹೇಳಿದ್ದಾರೆ. ತಪ್ಪಿಗೆ ಶಿಕ್ಷೆ ಆಗುತ್ತೆ . ಕಾನೂನಿಗೆ ಮರೆಮಾಚುವ ಕೆಲಸ ಮಾಡೋಕೆ ಆಗೊಲ್ಲ. ಈ ಹಿಂದೆ ಈ ಥರ ಘಟನೆ ಆದಾಗ ಎಚ್ಚೆತ್ತುಕೊಳ್ಬೇಕಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡೋಕೆ ನಾಚಿಕೆ ಆಗುತ್ತೆ. ದೊಡ್ಡ ಮಟ್ಟದಲ್ಲಿ ಬೆಳೆದ ನಟನಿಗೆ ಜವಾಬ್ದಾರಿ ಇರಬೇಕಿತ್ತು. ರಾಷ್ಟ್ರಮಟ್ಟದಲ್ಲಿ ಈ ಘಟನೆಯಿಂದ ಎಲ್ಲರೂ ತಲೆ ತಗ್ಗಿಸುವಂತಾಗಿದೆ. ಆದರ್ಶವಾಗಿ ಇರಬೇಕಾದ ವ್ಯಕ್ತಿ ಹೀಗೆ ಮಾಡಿದಾಗ ಏನು ಹೇಳ್ಬೇಕು ಗೊತ್ತಾಗ್ತಿಲ್ಲ. ಆಸ್ತಿ ಅಂತಸ್ತು ಹಣ ಬಂದ್ಮೇಲೆ ತಲೆ ನಿಲ್ಲೋಲ್ಲ. ರಾಜ್ಯ ಪೊಲೀಸರಿಗೆ ನನ್ನದೊಂದು ಸಲಾಂʼʼ ಎಂದರು.
ಇದನ್ನೂ ಓದಿ: Actor Darshan: ಲಾರಿಗೆ ತಲೆಯನ್ನು ಬಡಿದು ಸಿನಿಮಾ ಶೈಲಿಯಲ್ಲೇ ರೇಣುಕಾ ಸ್ವಾಮಿ ಕೊಲೆ ಮಾಡಿದ್ದ ದರ್ಶನ್ ಗ್ಯಾಂಗ್!
ಬ್ಯಾನ್ ವಿಚಾರವಾಗಿ ಮಾತನಾಡಿ ʻʻಬ್ಯಾನ್ ಮಾಡಲಿ ಏನೇ ಮಾಡಲಿ ಸತ್ತ ಆ ವ್ಯಕ್ತಿಯ ಕುಟುಂಬಕ್ಕೆ ನ್ಯಾಯ ಸಿಗುತ್ತಾ..? ಸದ್ಯಕ್ಕೆ ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ದರ್ಶನ್ ಅವರ ಫ್ಯಾನ್ಸ್ ಬ್ಯಾನ್ ಮಾಡಿ ಅಂತಿದ್ದಾರೆ. ನಾನು ಕೂಡ ಅವರ ದೊಡ್ಡ ಅಭಿಮಾನಿ. ವಾಣಿಜ್ಯ ಮಂಡಳಿ ಮಾತೃಸಂಸ್ಥೆ ಅದಕ್ಕೆ ಗೌರವ ಕೊಡುವುದು ಮೊದಲು ಆಗಲಿ. ಡಾ. ರಾಜ್ ಕುಮಾರ್ ಕಾಲದಿಂದ ವಾಣಿಜ್ಯ ಮಂಡಳಿಗೆ ಕಲಾವಿದರು, ನಿರ್ಮಾಪಕ ನಿರ್ದೇಶಕರು ಗೌರವ ಕೊಟ್ಟಿದ್ದಾರೆʼʼಎಂದರು.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ಎಂ ಸುರೇಶ್ ಅವರು ಆರೋಪ ಸಾಬೀತಾದರೆ ಅವರ ಮೇಲೆ ನಿಷೇಧ ಹೇರುವುದಾಗಿಯೂ ಹೇಳಿದ್ದಾರೆ ಎನ್ನಲಾಗಿದೆ. ಜತೆಗೆ ಈ ವಿಚಾರದಲ್ಲಿ ಕಲಾವಿದರ ಸಂಘದವರು ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.ದ ರ್ಶನ್ ಸಿನಿಮಾಗಳಿಗೆ ಬೇಡಿಕೆ ಇದೆ. ಅವರು ಸಿನಿಮಾಗಳಿಂದ ಅನೇಕರಿಗೆ ಕೆಲಸ ಸಿಗುತ್ತಿದೆ. ಇವರನ್ನು ಬ್ಯಾನ್ ಮಾಡಬೇಕು ಎಂದಾಗ ಅದನ್ನು ಬೆಂಬಲಿಸುವವರು ಕಡಿಮೆ ಎನ್ನುವ ಮಾತಿದೆ.