Site icon Vistara News

Actor Darshan: ದರ್ಶನ್ ಚಿತ್ರರಂಗಕ್ಕೆ ಬಂದು 25 ವರ್ಷ; ಹೇಗಿರಲಿದೆ  ‘ಬೆಳ್ಳಿ ಪರ್ವ’ ಆಚರಣೆ?

Actor Darshan came to the film industry at 25 years How will the 'Belli Parva' celebration

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Actor Darshan) ಅವರು ಸಿನಿರಂಗಕ್ಕೆ ಪದಾರ್ಪಣೆ ಮಾಡಿ 25 ವರ್ಷಗಳು ಕಳೆದಿವೆ. ದರ್ಶನ್ ಅವರ ನೆಚ್ಚಿನ ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಹಿತೈಷಿಗಳು  ‘ಬೆಳ್ಳಿ ಪರ್ವ’ ಆಚರಣೆಗೆ ಮುಂದಾಗಿದ್ದಾರೆ. ಅದ್ಧೂರಿಯಾಗಿ ಈ ಕಾರ್ಯಕ್ರಮ ಫೆಬ್ರವರಿ 17ರರಂದು ನಡೆಯಲಿದೆ. ಶ್ರೀ ಆದಿಚುಂಚನಗಿರಿ ಶ್ರೀಗಳು, ಶ್ರೀ ಸುತ್ತೂರು ಶ್ರೀಗಳು, ಹಾಗೂ ಸಂಸದೆ, ಚಿತ್ರನಟಿ ಸುಮಲತಾ ಅಂಬರೀಶ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಲಿದೆ.

ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಆಚರಿಸಲಾಗುತ್ತಿದೆ. ಫೆಬ್ರವರಿ 17ರ ಸಂಜೆ 5ಕ್ಕೆ ಈ ಕಾರ್ಯಕ್ರಮ ಆರಂಭ ಆಗಲಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನದ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ದರ್ಶನ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಜತೆಗೆ ವಿ.ಹರಿಕೃಷ್ಣ ಸಂಗೀತ ಸಂಜೆ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ಇರಲಿವೆ. ಇವೆಲ್ಲ ಕಾರ್ಯಗಳ ಉಸ್ತುವಾರಿಯನ್ನು ದರ್ಶನ್ ಅವರ ಆತ್ಮೀಯರಾದ ಎಸ್.ಸಚ್ಚಿದಾನಂದ ಇಂಡುವಾಳು ವಹಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ದರ್ಶನ್‌ ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದರು. 2001 ರಲ್ಲಿ ಬಿಡುಗಡೆಯಾದ ʻಮೆಜೆಸ್ಟಿಕ್ʼ ಚಿತ್ರದ ಮೂಲಕ ನಾಯಕ ನಟನಾಗಿ ಪದಾರ್ಪಣೆ ಮಾಡಿದರು. ಕರಿಯಾ (2003) ,ನಮ್ಮ ಪ್ರೀತಿಯ ರಾಮು (2003),ಕಲಾಸಿಪಾಳ್ಯ (2005),ಗಜ (2008), ಸಾರಥಿ (2011) ಮತ್ತು ಬುಲ್ ಬುಲ್ (2013) ನಂತಹ ವಾಣಿಜ್ಯಿಕವಾಗಿ ಯಶಸ್ವಿಯಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಾರಥಿ ಮತ್ತು ಸಂಗೊಳ್ಳಿ  ರಾಯಣ್ಣ  (2012) ಚಿತ್ರದಲ್ಲಿನ ಅಭಿನಯಕ್ಕಾಗಿ   ವಿಮರ್ಶಕರಿಂದ ಪ್ರಶಂಸೆಯನ್ನು ಪಡೆದರು.  ‘ವಲ್ಲರಸು’ ಚಿತ್ರದಲ್ಲಿ ಅವರು ನಟಿಸಿದರು. ಇದು ತಮಿಳು ಸಿನಿಮಾ. ನಂತರ ಕೆಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದರು.

ಇದನ್ನೂ ಓದಿ: Darshan Thoogudeepa: ವೈಯಕ್ತಿಕ ಫೋಟೊ; ದರ್ಶನ್ ಪತ್ನಿಗೆ ಪವಿತ್ರಾ ಗೌಡ‌ ವಾರ್ನಿಂಗ್!

25ನೇ ವರ್ಷಕ್ಕೆ ದರ್ಶನ್ ಅವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅವರ ನಟನೆಯ ‘ಕಾಟೇರ’ ಚಿತ್ರ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ದರ್ಶನ್ ಸಿನಿಕರಿಯರ್‌ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದ್ದ ಕಾಟೇರ ಬಾಕ್ಸಾಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಪ್ಯಾನ್ ಇಂಡಿಯಾ ಚಿತ್ರಗಳ ಅಬ್ಬರದ ನಡುವೆಯೂ ನಮ್ಮ ನೆಲದ ಕಥೆಗೆ ಪ್ರೇಕ್ಷಕ ಜೈಕಾರ ಹಾಕಿದ್ದರು. ರಾಕ್ಲೈನ್ ವೆಂಕಟೇಶ್ ನಿರ್ಮಿಸಿರುವ ಈ ಸಿನಿಮಾವನ್ನು ಒಟಿಟಿಗೆ ಜೀ 5 ವಹಿವಾಟು ಮುಗಿಸಿತ್ತು. ನಿರ್ಮಾಪಕರು ಹಾಗೂ ಓಟಿಟಿ ವೇದಿಕೆ ಜೊತೆ ಮಾಡಿಕೊಂಡ ಒಡಂಬಡಿಕೆಯಂತೆ ‘ಕಾಟೇರ’ ಈಗಾಗಲೇ ಪ್ರೀಮಿಯರ್ ಆಗುತ್ತಿದೆ.

Exit mobile version