ಬೆಂಗಳೂರು: ದರ್ಶನ್ ಗ್ಯಾಂಗ್ನ ಅಮಾನುಷ ಕೃತ್ಯಕ್ಕೆ ಬಲಿಯಾದ ರೇಣುಕಾ ಸ್ವಾಮಿಯನ್ನು ಕೂಡಿ ಹಾಕಿದ್ದ ರಾಜರಾಜೇಶ್ವರಿ ನಗರದ ಶೆಡ್ ನಲ್ಲಿ ಪೊಲೀಸರು ತಲಾಷೆ ನಡೆಸಲಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ದೊಡ್ಡ ಸಾಕ್ಷಿಗಳು ಅಲ್ಲಿ ದೊರೆಯಲಿವೆ. ಈಗಾಗಲೇ (Actor Darshan ) ಪೊಲೀಸರು ಈ ಅಪರಾಧಕ್ಕೆ ಬಳಕೆಯಾದಂತಹ ಎರಡು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ಕಾರಿನಲ್ಲಿ ಮದ್ಯದ ಬಾಟಲಿ ಹಾಗೂ ಮಹಿಳೆಯರ ವ್ಯಾನಿಟಿ ಬ್ಯಾಗ್ ಸಿಕ್ಕಿದೆ ಎನ್ನಲಾಗಿದೆ. ಈ ಬ್ಯಾಗ್ ಪವಿತ್ರಾ ಗೌಡ ಅವರಿಗೆ ಸೇರಿದ್ದು ಎನ್ನಲಾಗಿದೆ.
ಮಾಧ್ಯಮವೊಂದರಲ್ಲಿ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಹಾಗೂ ಜೀಪ್ ಕಂಪನಿಯ ರಾಂಗ್ಲರ್ ರುಬಿಕಾನ್ ಕಾರು, ರೇಣುಕಾ ಸ್ವಾಮಿಯನ್ನು ಕೂಡಿ ಹಾಕಿದ್ದ ರಾಜರಾಜೇಶ್ವರಿ ನಗರದ ಶೆಡ್ಗೆ ಹೋಗುತ್ತಿರುವುದು ಪತ್ತೆಯಾಗಿದೆ. ಈ ಎರಡೂ ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಪೊಲೀಸರು. ಈ ಜೀಪ್‌ವನ್ನು ದರ್ಶನ್ ಬೆಂಗಳೂರಿನಲ್ಲಿ ಓಡಾಡಲು ಇದನ್ನೇ ಬಳಸಿಕೊಳ್ಳುತ್ತಿದ್ದರು.cಕೊಲೆಯಾದ ರಾತ್ರಿ ಇದೇ ಕಾರಿನಲ್ಲಿ ರಾಜರಾಜೇಶ್ವರಿ ನಗರದ ಶೆಡ್ಗೆ ಆಗಮಿಸಿದ್ದರು ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಸ್ಕಾರ್ಪಿಯೋ ಕಾರಿನಲ್ಲಿ ಆರೋಪಿಗಳು ರೇಣುಕಾ ಸ್ವಾಮಿಯ ಶವವನ್ನು ಕೊಂಡೊಯ್ದು ಸುಮನಹಳ್ಳಿ ಮೋರಿಗೆ ಎಸದಿದ್ದರು ಎನ್ನಲಾಗುತ್ತಿದೆ. ಇನ್ನು ಜೀಪ್ ದರ್ಶನ್ ಆಪ್ತ ವಿನಯ್ ಹೆಸರಿನಲ್ಲಿ ನೊಂದಣಿ ಆಗಿದೆ. ಸ್ಕಾರ್ಪಿಯೋ ಕಾರು ದರ್ಶನ್ರ ಮತ್ತೊಬ್ಬ ಆಪ್ತ ಪ್ರದೋಶ್ ಹೆಸರಿನಲ್ಲಿ ನೊಂದಣಿ ಆಗಿದೆ. ವಿನಯ್ ಹಾಗೂ ಪ್ರದೋಶ್ ಇಬ್ಬರೂ ಸಹ ಈಗ ಪೊಲೀಸರ ವಶದಲ್ಲಿಯೇ ಇದ್ದಾರೆ.
ಇದನ್ನೂ ಓದಿ: Actor Darshan: ದರ್ಶನ್ ಅರೆಸ್ಟ್ ಆದ ಬೆನ್ನಲ್ಲೇ ಕರ್ಮ ಫಲ ಎಂದು ಜಗ್ಗೇಶ್ ಟ್ವೀಟ್!
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy murder case) ಬಂಧನವಾಗಿರುವ ನಟ ದರ್ಶನ್ (Actor Darshan), ಪವಿತ್ರಾ ಗೌಡ ಸೇರಿ 13 ಆರೋಪಿಗಳನ್ನು 6 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಬಳಿಕ ಆರೋಪಿಗಳನ್ನು ಮಂಗಳವಾರ ಸಂಜೆ ಕೋರಮಂಗಲದ 24ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಅವರ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲು ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಕೊಲೆ ಪ್ರಕರಣದಲ್ಲಿ ಬಂಧನವಾದ ಆರೋಪಿಗಳು
1.ನಟ ದರ್ಶನ್
2.ಪವಿತ್ರಾ ಗೌಡ
3.ಕೆ. ಪವನ್-ದರ್ಶನ್ ಮನೆಯಲ್ಲಿ ಇರುವ ದರ್ಶನ್ ಅಪ್ತ, ಕಿಡ್ನ್ಯಾಪ್ ಮಾಡಲು ಹೇಳಿದ್ದವನು, ಪವಿತ್ರಗೂ ಆಪ್ತ
4.ಪ್ರದೋಶ್- ಹೋಟೆಲ್ ಉದ್ಯಮಿ
5.ನಂದೀಶ್- ಹಲ್ಲೆ ಮಾಡಿದ ಮುಖ್ಯ ವ್ಯಕ್ತಿ, ಕಿಡ್ನ್ಯಾಪ್ ಮಾಡಿಕೊಂಡು ಕರೆತಂದವನು
6.ಕೇಶವಮೂರ್ತಿ, ಪ್ರದೂಶ್ ಗೆಳೆಯ ಹಾಗೂ ಉದ್ಯಮಿ
7.ರಾಘವೇಂದ್ರ- ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ
8.ಎಂ.ಲಕ್ಷ್ಮಣ್
9. ದೀಪಕ್ ಕುಮಾರ್
10.ಕಾರ್ತಿಕ್
11.ಆರ್.ನಾಗರಾಜ್, ದರ್ಶನ್ ಆಪ್ತ
12.ವಿ.ವಿನಯ್
13. ನಿಖಿಲ್ ನಾಯಕ್