Site icon Vistara News

Actor Darshan:  ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟ ಚಲನಚಿತ್ರ ವಾಣಿಜ್ಯ ಮಂಡಳಿ

Actor Darshan case Film chamber visit to the renukaswamy house

ಬೆಂಗಳೂರು: ರೇಣುಕಾಸ್ವಾಮಿಯ ಬರ್ಬರ ಹತ್ಯೆಯನ್ನು (Renukaswamy Murder Case) ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಖಂಡಿಸಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಇಂದು (ಜೂ. 15) ಹತ್ಯೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ಭೇಟಿ ನೀಡಿ ಸ್ವಾಂತನ ಹೇಳಲಿದೆ.

ಈಗಾಗಲೇ ಚಿತ್ರದುರ್ಗದತ್ತ ಅಧ್ಯಕ್ಷರು, ಮಾಜಿ ಫಿಲಂ ಚೇಂಬರ್ ಅಧ್ಯಕ್ಷರು ಪ್ರಯಾಣ ಬೆಳೆಸಿದ್ದಾರೆ. ಮಧ್ಯಾಹ್ನ 12.30ರ ವೇಳೆಗೆ ರೇಣುಕಾ ಮನೆ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ. ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಹಲವರು ಹೊರಟಿದ್ದಾರೆ. ಮೊದಲು ರೇಣುಕಾ ಸ್ವಾಮಿ ಮನೆಗೆ ಭೇಟಿ ಕೊಟ್ಟ ಬಳಿಕ ಮಧ್ಯಾಹ್ನ 1.30 ರ ಸಮಯಕ್ಕೆ ಖಾಸಗಿ ಹೋಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಮಾಜಿ ಅಧ್ಯಕ್ಷರುಗಳಾದ ಚಿನ್ನೇಗೌಡ, ಸಾರಾಗೋವಿಂದ್‌ ಜತೆ ಕೆವಿ ಚಂದ್ರಶೇಖರ್ ಸೇರಿದಂತೆ ಹಲವರು ಚಿತ್ರದುರ್ಗಕ್ಕೆ ತೆರಳಿದ್ದಾರೆ.

ಚಿತ್ರರಂಗದಿಂದ ಬ್ಯಾನ್‌ ಆಗ್ತಾರಾ ದರ್ಶನ್? 

ʻʻಆರೋಪಿ ನಟ ದರ್ಶನ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವುದು ಹಾಗೂ ಅಸಹಕಾರ ನೀಡುವುದರ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಆರೋಪ ಸಾಬೀತಾದರೆ ಅಸಹಕಾರ ನೀಡುವ ವಿಚಾರಾಗಿ ನಿರ್ಧಾರ ಮಾಡಲಾಗುತ್ತದೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ್ಯ ಎನ್.ಎಂ ಸುರೇಶ್ (NM Suresh) ಜೂ.13ರಂದು ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

ಇದನ್ನೂ ಓದಿ: Actor Darshan: ಇಂದೇ ಪರಪ್ಪನ ಅಗ್ರಹಾರ ಸೇರ್ತಾರ ದರ್ಶನ್‌, ಪವಿತ್ರಾ ಗೌಡ?

ʻʻರೇಣುಕಾ ಅವರ ತಂದೆ ತಾಯಿಯನ್ನು ನೋಡಿದರೆ ಕರುಳು ಚುರ್ ಅನ್ನುತ್ತೆ. ಯಾರೇ ತಪ್ಪು ಮಾಡಲಿ, ಕಾನೂನು ಶಿಕ್ಷೆ ಕೊಡುತ್ತದೆ. ಸತ್ಯಾಸತ್ಯತೆ ಬಯಲಿಗೆ ಎಳೆಯುತ್ತೇವೆ ಎಂದು ಕಮಿಷನರ್ ಹೇಳಿದ್ದಾರೆ. ತಪ್ಪಿಗೆ ಶಿಕ್ಷೆ ಆಗುತ್ತೆ . ಕಾನೂನಿಗೆ ಮರೆಮಾಚುವ ಕೆಲಸ ಮಾಡೋಕೆ ಆಗೊಲ್ಲ. ಈ ಹಿಂದೆ ಈ ಥರ ಘಟನೆ ಆದಾಗ ಎಚ್ಚೆತ್ತುಕೊಳ್ಬೇಕಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡೋಕೆ ನಾಚಿಕೆ ಆಗುತ್ತೆ. ದೊಡ್ಡ ಮಟ್ಟದಲ್ಲಿ ಬೆಳೆದ ನಟನಿಗೆ ಜವಾಬ್ದಾರಿ ಇರಬೇಕಿತ್ತು. ರಾಷ್ಟ್ರಮಟ್ಟದಲ್ಲಿ ಈ ಘಟನೆಯಿಂದ ಎಲ್ಲರೂ ತಲೆ ತಗ್ಗಿಸುವಂತಾಗಿದೆ. ಆದರ್ಶವಾಗಿ ಇರಬೇಕಾದ ವ್ಯಕ್ತಿ ಹೀಗೆ ಮಾಡಿದಾಗ ಏನು ಹೇಳ್ಬೇಕು ಗೊತ್ತಾಗ್ತಿಲ್ಲ. ಆಸ್ತಿ ಅಂತಸ್ತು ಹಣ ಬಂದ್ಮೇಲೆ ತಲೆ ನಿಲ್ಲೋಲ್ಲ. ರಾಜ್ಯ ಪೊಲೀಸರಿಗೆ ನನ್ನದೊಂದು ಸಲಾಂʼʼ ಎಂದಿದ್ದರು.

 ಚಿತ್ರದುರ್ಗದ ರೇಣುಕಾಸ್ವಾಮಿ (Renuka Swamy murder case) ಕೊಲೆ ಆರೋಪದಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್‌ (Actor Darshan) ಮತ್ತು ಅವರ ಗೆಳತಿ ಪವಿತ್ರಾ ಗೌಡ ಇಂದೇ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌ ಆಗುವ ಸಾಧ್ಯತೆ ಇದೆ. ಹೌದು, ಕೊಲೆ ಪ್ರಕರಣದಲ್ಲಿ ಎ 1 ಮತ್ತು ಎ 2 ಆರೋಪಿಗಳಾಗಿರುವ ದರ್ಶನ್‌ ಮತ್ತು ಪವಿತ್ರಾ ಗೌಡ ಅವರನ್ನು ಇಂದು ಜಡ್ಜ್‌ ಮುಂದೆ ಹಾಜರುಪಡಿಸಲಾಗುತ್ತಿದ್ದು, ಬಹುತೇಕ ಶಿಕ್ಷೆ ಜಾರಿಯಾಗುವ ಸಾಧ್ಯತೆ ಇದೆ. ಹೀಗಾಗಿ ಸದ್ಯ ಇಬ್ಬರೂ ಆತಂಕದಲ್ಲಿಯೇ ಸಮಯ ದೂಡುತ್ತಿದ್ದಾರೆ.

Exit mobile version