ಬೆಂಗಳೂರು: ನಟ ದರ್ಶನ್ (Actor Darshan) ಹಾಗೂ ಟೀಂ ಕೊಲೆ ಪ್ರಕರಣ ಸಂಬಂಧಿಸಿದಂತೆ ಪೊಲೀಸರ ತನಿಖೆ ಇನ್ನಷ್ಟು ಚುರುಕುಗೊಂಡಿದೆ. ರೇಣುಕಾಸ್ವಾಮಿ ಕೆಲಸಕ್ಕೆ ಸೇರಿದ್ದು ಯಾವಾಗ? ಕೆಲಸಕ್ಕೆ ಸೇರಲು ಕೊಟ್ಟ ದಾಖಲೆಗಳ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸರಿಂದ ವಿವರಗಳ ಸಂಗ್ರಹ ಆಗುತ್ತಿದೆ. ಕೆಲಸದ ಅವಧಿಯಲ್ಲೆ ರೇಣುಕಾಸ್ವಾಮಿಯನ್ನು ಆರೋಪಿಗಳು ಕಿಡ್ನಾಪ್ ಮಾಡಿದ್ದು ತನಿಖೆ ವೇಳೆ ತಿಳಿದು ಬಂದಿದೆ. ದರ್ಶನ್, ಪವಿತ್ರಾಗೌಡ ಸೇರಿ ಹತ್ತು ಜನರ ಫಿಂಗರ್ ಪ್ರಿಂಟ್ ಮ್ಯಾಚ್ ಆಗಿದೆ. ಎಫ್ ಎಸ್ ಎಲ್ ಪರೀಕ್ಷೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗಗೊಂಡಿದೆ.
ಚಿತ್ರದುರ್ಗದ ಫಾರ್ಮಸಿಯಲ್ಲಿ ರೇಣುಕಾಸ್ವಾಮಿ ಕೆಲಸ ಮಾಡುತ್ತಿದ್ದ. ಈ ವೇಳೆ ಜೂನ್ 8 ರಂದು ಫಾರ್ಮಸಿಯಿಂದ ಹೊರಗಡೆ ಆರೋಪಿಗಳು ಕರೆಸಿಕೊಂಡು ಕಿಡ್ನಾಪ್ ಮಾಡಿದ್ದರು. ಫಾರ್ಮಸಿಯಲ್ಲಿ ಕೆಲಸಕ್ಕೆ ಸೇರಲು ಕೊಟ್ಟ ದಾಖಲೆಗಳ ಸಂಗ್ರಹ ಆಗಿದೆ. ಬೆಂಗಳೂರಿನಲ್ಲಿರುವ ಫಾರ್ಮಸಿ ಕೇಂದ್ರ ಕಚೇರಿಗೆ ಈ ಬಗ್ಗೆ ಪೊಲೀಸರು ಪತ್ರ ಬರೆದಿದ್ದಾರೆ. ನಗರದ ಸಿಂಗಸಂದ್ರದಲ್ಲಿ ಫಾರ್ಮಸಿ ಕಚೇರಿ ಇದೆ. ಈಗಾಗಲೇ ಮೇಲ್ ಮೂಲಕ ಮಾಹಿತಿ ರವಾನೆ ಆಗಿದೆ. ಇದರಲ್ಲಿ ರೇಣುಕಾಸ್ವಾಮಿ ವೈಯಕ್ತಿಕ ಮಾಹಿತಿ , ರೆಸೂಮ್ಯ್ ಹಾಗೂ ಹತ್ತನೇ ತರಗತಿ ಅಂಕಪಟ್ಟಿ ಹಾಗೂ ಕಂಪನಿ ನೀಡಿದ್ದ ನೇಮಕಾತಿ ಆದೇಶ ಪ್ರತಿ ಇದೆ. ಫಾರ್ಮಸಿ ಕಳುಹಿಸಿದ ದಾಖಲೆಗಳನ್ನ ಈಗಾಗಲೇ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದ ಪ್ರತಿ ವಿಚಾರದ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Actor Darshan: ಪವಿತ್ರಾಗೌಡ ಮುನಿಸು ಶಮನ ಮಾಡೋದೇ ಚಾಲೆಂಜ್ ಆಗಿತ್ತು ದರ್ಶನ್‌ಗೆ!
ಫಿಂಗರ್ ಪ್ರಿಂಟ್ ಮ್ಯಾಚ್
ಕ್ರೈಂ ಸೀನ್ ಫಿಂಗರ್ ಪ್ರಿಂಟ್ ಜತೆ ಹತ್ತಕ್ಕೂ ಹೆಚ್ಚು ಆರೋಪಿಗಳ ಫಿಂಗರ್ ಪ್ರಿಂಟ್ ಮ್ಯಾಚ್ ಆಗಿದೆ ಎಂಬುದು ತನಿಖೆ ವೇಳೆ ತಿಳದು ಬಂದಿದೆ. ದರ್ಶನ್, ಪವಿತ್ರಾಗೌಡ ಸೇರಿ ಹತ್ತು ಜನರ ಫಿಂಗರ್ ಪ್ರಿಂಟ್ ಮ್ಯಾಚ್ ಆಗಿದೆ. ಎಫ್ ಎಸ್ ಎಲ್ ಪರೀಕ್ಷೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಹಲವು ಕಡೆ ಎಫ್ ಎಸ್ ಎಲ್ ತಜ್ಞರನ್ನ ಬಳಸಿ ಫಿಂಗರ್ ಪ್ರಿಂಟ್ ಸಂಗ್ರಹಿಸಲಾಗಿತ್ತು. ಶವ ಬಿಸಾಕಿದ ಜಾಗ, ಶವ ಸಾಗಾಟ ಮಾಡಿದ ವಾಹನ, ಶವ. ಇಟ್ಟಿದ್ದ ಜಾಗ,ಇಲ್ಲೆಲ್ಲ ಫಿಂಗರ್ ಪ್ರಿಂಟ್ ಸಂಗ್ರಹಿಸಲಾಗಿತ್ತು. ಮೃತನ ಬಟ್ಟೆಗಳು, ಹಲ್ಲೆ ಮಾಡಲು ಬಳಸಿದ ವಸ್ತುಗಳು, ಸಾಗಾಟ ಮಾಡಿದ ಕಾರ್, ಆರೋಪಿಗಳ ಬಟ್ಟೆಗಳ ಮೇಲಿನ ಫಿಂಗರ್ ಪ್ರಿಂಟ್ ಸಂಗ್ರಹ ಮಾಡಲಾಗಿತ್ತು. ಆರೋಪಿಗಳ ಬಂಧನದ ಬಳಿಕ ಎಲ್ಲರ ಫಿಂಗರ್ ಪ್ರಿಂಟ್ ಪಡೆದು ಎಫ್ ಎಸ್ ಎಲ್ ಗೆ ರವಾನೆ ಮಾಡಲಾಗಿತ್ತು. ಈ ಫಿಂಗರ್ ಪ್ರಿಂಟ್ ಆರೋಪಿಗಳ ವಿರುದ್ಧ ಪ್ರಮುಖ ಸಾಕ್ಷಿಯಾಗಲಿದೆ.