ಬೆಂಗಳೂರು: ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ನ್ಯಾಯಾಂಗ ಬಂಧನಲ್ಲಿ ಇರುವುದು ಗೊತ್ತೇ ಇದೆ. ದರ್ಶನ್ (Darshan) ಜೊತೆ ಹಲವಾರು ಹಿಟ್ ಸಿನಿಮಾಗಳನ್ನು ಕೊಟ್ಟ ನಟ, ನಿರ್ದೇಶಕ, ನಿರ್ಮಾಪಕ ಓಂ ಪ್ರಕಾಶ್ ರಾವ್ (Om Prakash Rao) ಅವರು 10 ವರ್ಷಗಳಿಂದ ದರ್ಶನ್ ಅವರನ್ನು ಮಾತನಾಡಿಸಿಲ್ಲ. ಓಂ ಪ್ರಕಾಶ್ ರಾವ್ ಅವರು 10 ವರ್ಷಗಳಿಂದ ದರ್ಶನ್ ಜತೆ ಏಕೆ ಅಂತರ ಇಟ್ಟರು? ಹಾಗೇ ದರ್ಶನ್ ಕೊಲೆ ಕೇಸ್ ಬಗ್ಗೆ ಹಲವಾರು ವಿಚಾರಗಳನ್ನು ಮಾಧ್ಯಮವೊಂದಕ್ಕೆ ಹೇಳಿಕೊಂಡಿದ್ದಾರೆ.
ಓಂ ಪ್ರಕಾಶ್ ಮಾತನಾಡಿ ʻʻದರ್ಶನ್ ಅವರಿಗೆ ಇದು ಬೇಕಾಗಿರಲಿಲ್ಲ. ಅವರಿಗಿರುವ ಫಾಲೋವರ್ಸ್‌ಗಳು, ಫೇಮ್, ಪಬ್ಲಿಸಿಟಿ ಎಲ್ಲ ಅಪಾರವಾಗಿತ್ತು. ಇದೀಗ ಸಣ್ಣ ವಿಷಯಕ್ಕೆ ಆರೋಪ ಸ್ಥಾನದಲ್ಲಿ ಇದ್ದಾರೆ ಎಂದಾಗ ಬೇಜಾರಾಯ್ತು. ಆರೋಪಿ ಸ್ಥಾನದಲ್ಲಿ ಇದ್ದಾರೆ ಎಂದರೆ ತುಂಬ ದುಃಖವಾಗಿದೆ. ಸಿನಿಮಾದಲ್ಲಿ ಜಗಳ ಎಂದು ಬಂದಾಗ, ಸಿನಿಮಾಗೋಸ್ಕರ ಅಷ್ಟೇ. ಆದರೆ ವೈಯಕ್ತಿಕವಾಗಿ ತೆಗೋಬಾರದು. ನನಗೆ ತುಂಬ ಗೌರವ ಕೊಟ್ಟ ನಟ ಎಂದರೆ ದರ್ಶನ್ʼʼಎಂದರು.
ಹೇಳಿದ್ದನ್ನ ತಿರುಚಿ ನನ್ನ, ದರ್ಶನ್ ಮಧ್ಯೆ ನಿಖಿತಾ ಮನಸ್ತಾಪ ತಂದ್ರು!
ʻʻಮುಂಚೆ ದರ್ಶನ್ ಹಾಗೂ ನನ್ನ ಸ್ನೇಹ ಚೆನ್ನಾಗಿಯೇ ಇತ್ತು. ನಮಗೆ ಒಂದು ಜ್ಞಾನ ಇರುತ್ತೆ. ಸಡನ್ ಆಗಿ ಯಾರೋ ಹೇಳಿದ್ದು ಕೇಳೋದು ತಪ್ಪು. ಆದರೆ ದರ್ಶನ್ ಯಾರೋ ಹೇಳಿದ್ದನ್ನು ಬೇಗ ಕೇಳುತ್ತಿದ್ದ. ನನ್ನ ದರ್ಶನ್ ಮಧ್ಯೆ ಮನಸ್ತಾಪ ತಂದಿಟ್ಟಿದ್ದು ನಿಖಿತಾ ಎಂಬ ಕಲಾವಿದೆ. ಯಾವುದೋ ಒಂದು ವಿಷಯವನ್ನು ತಿರುಚಿ ಹೇಳಿದ್ದಾರೋ ಗೊತ್ತಿಲ್ಲ. ಎಲ್ಲರೂ ಅವರ ಅವರ ಸೇಫ್ಟಿ ನೋಡ್ಕೋತ್ತಾರೆ ಅನ್ಸತ್ತೆ. ಹಾಗೇ ನನ್ನ ದರ್ಶನ್ ಜತೆ ವೈಮನಸ್ಸು ಆಯ್ತು. ಆ ಬಗ್ಗೆ ತುಂಬ ಸಲ ಬೇಜಾರು ಮಾಡಿಕೊಂಡಿದ್ದು ಇದೆʼʼಎಂದರು.
ಇದನ್ನೂ ಓದಿ: Duniya Vijay: ʻಭೀಮʼ ರಿಲೀಸ್ ಡೇಟ್ ಅನೌನ್ಸ್ ಮಾಡಿದ ದುನಿಯಾ ವಿಜಯ್; ಸ್ಟಾರ್ ಹಿರೋ ಸಿನಿಮಾ ಜತೆ ಕ್ಲ್ಯಾಶ್?
ʻʻದರ್ಶನ್ ಅವರಿಗೆ ತುಂಬ ಫ್ಯಾನ್ಸ್ ಇದ್ದಾರೆ. ಕೆಲವರು ದರ್ಶನ್ ಬಗ್ಗೆ ಮಾತಾಡುತ್ತಿಲ್ಲ. ನೀವು ಮೈಕ್ ಹಿಡಿತ್ತಿದ್ದೀರಾ ಅಷ್ಟೇ ಗನ್ ಏನೂ ತೋರಿಸಿಲ್ಲ. ಆದರೆ ಮಾತನಾಡಬೇಕು. ಆದರೆ ಯಾವುದೇ ಕಲಾವಿದರು ಮಾತನಾಡುತ್ತಿಲ್ಲ. ಕೆಲವರು ದರ್ಶನ್ ಜತೆ ಪ್ರೀತಿಯಲ್ಲಿ ಇದ್ದಾಗ ಹೇಗಿತ್ತು ಒಡನಾಟ ಎಂಬುದು ಮಾತನಾಡಿ. ಇದರಲ್ಲಿ ತಪ್ಪೇನಿಲ್ಲ. ಒಂದು ವಿಷಯ ಏನೆಂದರೆ, ಬ್ಯಾನ್ ಎನ್ನುವ ವರ್ಡ್ ಬಂತು. ಬ್ಯಾನ್ ಏಕೆ ಮಾಡಬೇಕು? ಆಗಿನ ಕಾಲಕ್ಕೆ ನಿಖಿತಾ ಅವರನ್ನೂ ಬ್ಯಾನ್ ಮಾಡಬೇಕು ಎಂಬ ಮಾತುಗಳು ಬಂದಿದ್ದವು. ಯಾರು ರೂಲ್ಸ್ ಮಾಡಿಲ್ಲ. ಮಾತುಕತೆ ಬಂದಿತ್ತು ಅಷ್ಟೇʼʼಎಂದರು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿ 12 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ನಟ ದರ್ಶನ್ (Actor Darshan) ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರಿಂದ (Actor Darshan), ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆಗಿದ್ದಾರೆ. ಪರಪ್ಪನ ಅಗ್ರಹಾರ (Actor Darshan) ಜೈಲಿನ ಬಳಿ ಬಿಗಿ ಬಂಧೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ದರ್ಶನ್ಗೆ ಈಗಾಗಲೇ ವಿಚಾರಣಾಧೀನ ಕೈದಿ ಸಂಖ್ಯೆಯನ್ನು ಸಹ ನೀಡಲಾಗಿದೆ.ದರ್ಶನ್ಗೆ ವಿಚಾರಣಾಧೀನ ಕೈದಿ ಸಂಖ್ಯೆ 6106 ನ್ನು ನೀಡಲಾಗಿದೆ. ಇನ್ನು ನ್ಯಾಯಾಂಗ ಬಂಧನಕ್ಕೆ ಒಳಪಟ್ಟ ಧನರಾಜ್ಗೆ 6107, ವಿನಯ್ಗೆ 6108, ಪ್ರದೂಶ್ಗೆ 6109 ಸಂಖ್ಯೆಗಳನ್ನು ನೀಡಲಾಗಿದೆ.