Site icon Vistara News

Actor Darshan: ʻಡಿ ಬಾಸ್ʼ ಹೊರ ಬಂದ್ಮೇಲೆ ಉತ್ತರ ಸಿಗೋ ರೀತಿಯಲ್ಲೇ ಸಿಗುತ್ತೆ; ಉಮಾಪತಿ ವಿರುದ್ಧ ದಚ್ಚು ಫ್ಯಾನ್ಸ್‌ ಕಿಡಿ!

Actor Darshan case reaction by umapathy d boss Fans violent

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ (Actor Darshan) ಅರೆಸ್ಟ್‌ ಆಗಿದ್ದಾರೆ. ಈ ಮುಂಚೆ ದರ್ಶನ್‌ ಅವರು ಉಪಾತಿಗೆ ʻತಗಡುʼ ಎಂದಿದ್ದಕ್ಕೆ ಉಮಾಪತಿ ಪರೋಕ್ಷವಾಗಿ ಪೋಸ್ಟ್‌ ಮೂಲಕ ತಿರುಗೇಟು ಕೊಟ್ಟಿದ್ದರು. “ತಾಳ್ಮೆ ಕೆಲವೊಮ್ಮೆ ಶಕ್ತಿ” ಎಂದು ವಿಡಿಯೊ ಪೋಸ್ಟ್ ಮಾಡಿದ್ದರು. ಅಷ್ಟೇ ಅಲ್ಲ ಮಾಧ್ಯಮಗಳಿಗೆ ಕೊಲೆ ಕೇಸ್‌ ವಿಚಾರವಾಗಿ ʻʻʻನಮ್ಮ ಚಟ, ಚಟ್ಟ ಹತ್ತಿಸುವರೆಗೂ ಇರಬಾರದು. ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆʼʼಎಂದಿದ್ದರು. ಇದೀಗ ಉಮಾಪತಿ ವಿರುದ್ಧ ತೂಗುದೀಪ ಟೀಮ್ ಕಿಡಿಕಾರಿದೆ. ʻಡಿ ಬಾಸ್ ಹೊರಬಂದಮೇಲೆ ಉತ್ತರ ಸಿಗುವ ರೂಪದಲ್ಲೇ ಸಿಗತ್ತೆʼ ಎಂದು ಖಡಕ್‌ ಆಗಿ ಬರೆದು ಪೋಸ್ಟ್‌ ಶೇರ್‌ ಮಾಡಿಕೊಂಡಿದೆ.

ತೂಗುದೀಪ ಡಿ ಟೀಮ್‌-ಆರ್‌ ಈ ರೀತಿ ಪೋಸ್ಟ್‌ ಮಾಡಿದೆ ʻʻಉಮಾಪತಿ ಅವರೇ ನೀವು ಆಡಿರುವ ಮಾತುಗಳಿಗೆ ಡಿ ಬಾಸ್ ರವರು ಹೊರ ಬಂದಮೇಲೆ ಉತ್ತರ ಸಿಗುವ ರೀತಿಯಲ್ಲೇ ಸಿಗುತ್ತೆ.. ಅದು ಆಗಿರಲಿ ಬಿಡಿ! 2021 ಫೆಬ್ರವರಿ 15 ಮಡಿಕೇರಿಯಲ್ಲಿ ರಾತ್ರಿ ಸರಿ ಸುಮಾರು 10 ರಿಂದ 11ರ ಸಮಯ, ರಾಬರ್ಟ್ ಚಿತ್ರದ ಟ್ರೈಲರ್ ಅನ್ನು ತಮ್ಮ ನೆಚ್ಚಿನ ಸೆಲೆಬ್ರಿಟಿಗಳಿಗಾಗಿ ಮುಂಚಿತವಾಗಿ ಡಿ ಬಾಸ್ ರವರು ಬಿಡುಗಡೆಯನ್ನು ನಿಮ್ಮ ಕೈನಿಂದಲೇ ಮಾಡಿಸ್ತಾರೆ, ಅದು ಕೂಡ ದೊಡ್ಡ ಪರದೆ ಮೇಲೆ… ಮಾಡುವ ಮುನ್ನ ನಮ್ಮ ನಿರ್ಮಾಪಕರ ಈ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು, ಟ್ರೈಲರ್ ಬಿಡುಗಡೆ ಮಾಡಲು ಒಂದು ಷರತ್ತು ಹಾಕುತ್ತಾರೆ, ಆ ಷರತ್ತು ಏನು ಅಂತ ನಿಮಗೆ ಮರೆತು ಹೋಗಿರಬಹುದು.

ಆದರೆ ನಾವು ಆ ಷರತ್ತು ಮರೆತಿಲ್ಲ, ಟ್ರೈಲರ್ ಬಿಡುಗಡೆ ಮಾಡ್ಬೇಕು ಅಂದ್ರೆ ನಮ್ಮ ನಿರ್ಮಾಪಕರ ಕೈಗೆ ನಿಮ್ಮ ಕೈಲಿ ಎಷ್ಟು ಹಣ ಕೊಡೋಕೆ ಆಗುತ್ತೋ ಅಷ್ಟು ಕೊಡಿ ಅಂದಾಗ ಕೇವಲ 45 ನಿಮಿಷಗಳ ಒಳಗೆ ಬರೋಬ್ಬರಿ 2 ಲಕ್ಷ ರೂ. ಸಂಗ್ರಹಣೆ ಆದಂತ ಹಣ ಕೊಟ್ಟೆವು. ಅದಕ್ಕೆ ಇನ್ನು ಸ್ವಲ್ಪ ತನ್ನ ಕೈನಿಂದ ಕೊಟ್ಟು ಹಣದಲ್ಲಿ, ತುಮಕೂರು ಸಿದ್ದಗಂಗಾ ಮಠಕ್ಕೆ ಬೇಕಾದ ಸಾಮಗ್ರಿಗಳನ್ನು ಕೊಡಲಾಯ್ತು. ಅದು ಕೂಡ ನಿಮ್ಮ ಕೈನಿಂದಲೇ ಶಿರಾ ಅಭಿಮಾನಿ ಸಂಘದವರಿಗೆ ಕೊಡಿಸಿದ್ದು ಮರೆತು ಹೋಯಿತಾ ಸಾರ್. ಚೆನ್ನಾಗಿದ್ದಾಗ ಜತೆಯಲ್ಲಿ ಚನ್ನಾಗಿ ತಿಂದು ತೇಗಿ, ಈಗ ಆ ಮನುಷ್ಯನ ಮೇಲೆ ವಿಷ ಕಕ್ಕುವ ನಿಮಗೆ ನರಸಿಂಹ ಒಳ್ಳೆಯದು ಮಾಡಲಿʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Darshan: ಕಸ್ಟಡಿಯಲ್ಲಿರೋ ದರ್ಶನ್‌ಗೆ ಹೆಚ್ಚಾಯ್ತು ಬಿಪಿ; ಪವಿತ್ರಾಗೌಡ ಮಾತ್ರ ಕೂಲ್‌ ಕೂಲ್‌..!

ಪೋಸ್ಟ್‌ ವೈರಲ್‌

ಉಮಾಪತಿ ಪ್ರತಿಕ್ರಿಯೆ ಏನು?

ಕೊಲೆ ಕೇಸ್‌

ʻʻಯಾರೇ ಈ ಕೃತ್ಯ ಮಾಡಿದ್ದರೂ ಗಲ್ಲಿಗೇರಿಸಬೇಕು. ತಪ್ಪು ಎಲ್ಲರೂ ಮಾಡ್ತಾರೆ. ಯಾರಿಗೋ ತೊಂದರೆ ಕೊಟ್ಟು ಬದುಕ್ತೀವಿ ಎನ್ನುವುದು ತಪ್ಪು. ಪಾಪ ಪ್ರಜ್ಞೆ ಕಾಡುತ್ತ ಇರುತ್ತೆ. . ದರ್ಶನ್ ಕುಂತ್ರೆ ಜುಟ್ಟು, ನಿಂತರೆ ಕಾಲು ಇದು ನನ್ನ ಅನುಭವ ಎಂದಿದ್ದಾರೆ. ಇನ್ನಾದರೂ ಅವರು ಸುಧಾರಿಸಿಕೊಳ್ಳಬೇಕು. ಈ ಪ್ರಕರಣದಲ್ಲಿ ಲಿಂಕ್ ಇರೋದು ಕೆಲವರಿಗೆ ಮಾತ್ರ. ಇನ್ನೂ ಉಳಿದವರು ಅಮಾಯಕರು ದರ್ಶನ್ ಮೇಲಿನ ಪ್ರೀತಿಗೆ ಬಂದಿದ್ದಾರೆ ಅಷ್ಟೇ. ಇವಾಗ ಅವರು ಜೈಲಿಗೆ ಹೋಗುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸಮಾಜಕ್ಕೆ ಮಾದರಿಯಾಗುವ ವ್ಯಕ್ತಿಯನ್ನು ಪ್ರೀತಿಸಿ ಬೇಡ ಹೇಳೋದಿಲ್ಲ. ಆದರೆ ನಿಮ್ಮ ಕುಟುಂಬನ ಬೀದಿಗೆ ಬಿಟ್ಟು ಪೋಷಕರನ್ನು ಬಲಿ ಕೊಟ್ಟು ಪ್ರೀತಿಸಲು ಹೋಗಬೇಡಿʼʼಎಂದರು.

ನಮ್ಮ ಚಟ, ಚಟ್ಟ ಹತ್ತಿಸುವರೆಗೂ ಇರಬಾರದು

ದರ್ಶನ್‌ ಅವರು ಸ್ನೇಹಿತರಾಗಿಗಿದ್ದಾಗ ಅವರು ನನ್ನ ಜತೆ ಚೆನ್ನಾಗಿಯೇ ಇದ್ದರು. ಅದೇನೋ ಅಂತರಲ್ಲ  6 ಗಂಟೆ ನಂತರ ಬ್ಯಾಡ್ ಮ್ಯಾನ್, 6ರ ಮುಂಚೆ ಗುಡ್ ಮ್ಯಾನ್ ಅಂತ. ಅದು ಅವರವರ ಹವ್ಯಾಸ. ನಮ್ಮ ಚಟ, ಚಟ್ಟ ಹತ್ತಿಸುವರೆಗೂ ಇರಬಾರದು. ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆ. ನಾನು ನೋಡಿದ ಹಾಗೆ ದರ್ಶನ್ ಒಳ್ಳೆಯ ಮನುಷ್ಯನೇ. ನನಗಂತೂ ಅವರು ಅನ್ಯಾಯ ಮಾಡಿಲ್ಲ. ಆದರೆ ಆ ಮೈಸೂರು ಕೇಸ್ ನಂತರ ಅವರ ನಡವಳಿಕೆ ಬದಲಾಯ್ತು. ಕಾಟೇರ ಟೈಟಲ್ ಅವರೇ ಕೊಟ್ಟಿರಬಹುದು. ಆದರೆ ಅದು ನನ್ನ ಬ್ಯಾನರ್‌ನಲ್ಲಿ ರಿಜಿಸ್ಟರ್ ಆಗಿದ್ದು, ಅದಕ್ಕೆ ದುಡ್ಡು ಕೊಟ್ಟಿದ್ದು ನಾನೇʼʼ ಎಂದಿದ್ದಾರೆ.

Exit mobile version