Site icon Vistara News

Actor Darshan: 6.2 ಅಡಿ ಎತ್ತರದ ದರ್ಶನ್ ಚಾಕೊಲೇಟ್ ಪ್ರತಿಮೆ ಅನಾವರಣ: ಸ್ನೇಹಿತರ ಬಿಗ್‌ ಸರ್ಪ್ರೈಸ್​

Actor Darshan Chocolate Statue Unveiled In Ramanagara By friends

ಬೆಂಗಳೂರು : ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್ (Actor Darshan) ಅವರು ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಅವರ ಬಗ್ಗೆ ಆಡಿದ ಮಾತುಗಳಿಗೆ ಆಕ್ರೋಶ ವ್ಯಕ್ತವಾಗಿದ್ದು, ಒಕ್ಕಲಿಗರ ಸಂಘದ ಪ್ರಮುಖರು ದರ್ಶನ್​ ಅವರ ಹೇಳಿಕೆ ಬಗ್ಗೆ ಮಾತನಾಡಲು ಮುಂದಾಗಿದ್ದಾರೆ. ಇಷ್ಟೆಲ್ಲ ವಿವಾದದ ನಡುವೆಯೂ ದರ್ಶನ್‌ ಅವರು ತಮ್ಮದೇ ಆದ ಅಭಿಮಾನಿ ಬಳಗದ ಅಪಾರ ಬೆಂಬಲ ಪಡೆಯುತ್ತಿದ್ದಾರೆ. ಡಿ ಬಾಸ್​ಗೆ ಆಪ್ತರಾದ ವಿನಯ್​ ಅವರು ಚಾಕೊಲೇಟ್​ನಿಂದ ದರ್ಶನ್​ ಅವರ ಪ್ರತಿಮೆ ಮಾಡಿಸಿದ್ದಾರೆ. ಅದನ್ನು ನೋಡಿ ದರ್ಶನ್​ ಖುಷಿಪಟ್ಟಿದ್ದಾರೆ.

ಈ ಪ್ರತಿಮೆ 6.2 ಅಡಿ ಎತ್ತರ ಇದೆ. ಇದರ ತೂಕ ಬರೋಬ್ಬರಿ 250 ಕೆಜಿಯಾಗಿದೆ. ರಾಮನಗರದಲ್ಲಿ ಈ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ. ಈ ಫೋಟೊಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಫೋಟೊದಲ್ಲಿ ದಚ್ಚು ಕೂಡ ಖುಷಿ ವ್ಯಕ್ತಪಡಿಸುತ್ತಿರುವುದು ಕಾಣಬಹುದು.

11.30ಕ್ಕೆ ಸುದ್ದಿಗೋಷ್ಠಿ

ಉಮಾಪತಿ ಅವರ ಬಗ್ಗೆ ದರ್ಶನ್‌ ಅವರು ಕಾಟೇರ 50ನೇ ದಿನದ ಸಂಭ್ರಮಾಚರಣೆ ವೇಳೆ ʻತಗಡುʼ ಎಂಬ ಪದ ಬಳಕೆ ಮಾಡಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಲು ರಾಜ್ಯ ಒಕ್ಕಲಿಗರ ಸಂಘ ಮುಂದಾಗಿದೆ. ಫೆಬ್ರವರಿ 22ರ ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿ ಕರೆಯಲಾಗಿದ್ದು, ದರ್ಶನ್​ ಅವರ ಹೇಳಿಕೆ ಬಗ್ಗೆ ಒಕ್ಕಲಿಗರ ಸಂಘದ ಪ್ರಮುಖರು ಮಾತನಾಡಲಿದ್ದಾರೆ.

ಇದನ್ನೂ ಓದಿ: Actor Darshan: ಹೌದು ನಾವು ತಗಡುಗಳು, ಉತ್ತರ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ: ಸೈಲೆಂಟ್‌ ಆದ ಉಮಾಪತಿ ಶ್ರೀನಿವಾಸ್!

‘ಒಕ್ಕಲಿಗರ ಸಂಘದ ನಿರ್ದೇಶಕರು ಮತ್ತು ಸಿನಿಮಾ ನಿರ್ಮಾಪಕರೂ ಆಗಿರುವ ಉಮಾಪತಿ ಶ್ರೀನಿವಾಸ್​ ಗೌಡ ಅವರಿಗೆ ಖ್ಯಾತ ನಟರಾದ ದರ್ಶನ್​ ಅವರು ಮಾತನಾಡಿದ ರೀತಿ ಸರಿಯಿಲ್ಲ. ಸುಮಾರು ಚಿತ್ರಗಳಿಗೆ ಬಂಡವಾಳ ಹೂಡಿ, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಉಮಾಪತಿ ಅವರಿಗೆ ತಗಡು ಎಂದು ಅವಹೇಳನಕಾರಿ ಮಾತುಗಳನ್ನು ಮಾಧ್ಯಮದ ಮುಂದೆ ಹೇಳಿದ್ದು ಸರಿಯಲ್ಲ’ ಎಂದು ಒಕ್ಕಲಿಗರ ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಮುಂಚೆ ದರ್ಶನ್‌ ಹಾಗೂ ಉಮಾಪತಿ ಶ್ರೀನಿವಾಸ್​ ಗೌಡ ಅವರು ‘ರಾಬರ್ಟ್​’ ಸಿನಿಮಾ ಮಾಡಿದ್ದರು. ಹಿಟ್‌ ಕೂಡ ಕಂಡಿತ್ತು. ಇದಾದ ಮೇಲೆ ಇಬ್ಬರ ಮಧ್ಯೆ ವೈಮಸ್ಸು ಮೂಡಿತ್ತು. ಹಲವು ಸಂದರ್ಶನಗಳಲ್ಲಿ ಉಮಾಪತಿ ಅವರು ‘ಕಾಟೇರ’ ಸಿನಿಮಾದ ಟೈಟಲ್​ ನೀಡಿದ್ದು ಮತ್ತು ಕಥೆ ಸಿದ್ಧ ಮಾಡಿಸಿದ್ದು ತಾವೇ ಎಂದು ಹೇಳಿಕೊಂಡಿದ್ದರು. ಆದರೆ ದರ್ಶನ್‌ ಈ ಬಗ್ಗೆ ಸಿಟ್ಟು ಹೊರಹಾಕಿದ್ದರುಕಾಟೇರ 50ನೇ ದಿನದ ಸಂಭ್ರಮಾಚರಣೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ ʻತಗಡುʼ ಎಂಬ ಪದ ಬಳಕೆ ಮಾಡಿದರು.

Exit mobile version