Site icon Vistara News

Actor Darshan: ಎದೆಯ ಮೇಲೆ ದರ್ಶನ್ ಟ್ಯಾಟೂ ಹಾಕಿಸಿಕೊಂಡ ಮಹಿಳಾ ಅಭಿಮಾನಿ!

Actor Darshan fan mangala gets tattoo

ಚಾಲೆಂಜಿಂಗ್‌ ಸ್ಟಾರ್‌ (Actor Darshan) ನಟ ದರ್ಶನ್ ಅಭಿಮಾನಿಯಾಗಿರುವ ಮಂಗಳಾ ಅವರು ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿರುವ ಫೋಟೋ ವೈರಲ್ ಆಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅವರ ಅಭಿಮಾನಿಯಾಗಿರುವ ಅಭಿಷೇಕ್​ ಅವರು ಮೈಮೇಲೆ ತಮ್ಮ ನೆಚ್ಚಿನ ನಟನ ಭಾವಚಿತ್ರದ ಟ್ಯಾಟೂ ಹಾಕಿಸಿಕೊಂಡಿದ್ದರು. ಫೆ 16ರಂದು ದರ್ಶನ್​ ಅವರ ಜನ್ಮದಿನ ಆ ಪ್ರಯುಕ್ತ ಗಿಫ್ಟ್​ ರೂಪದಲ್ಲಿ ಅಭಿಷೇಕ್​ ಅವರು ಈ ಟ್ಯೂಟೂ ಹಾಕಿಸಿಕೊಂಡಿದ್ದರು. ಇದು ಸಖತ್‌ ಸುದ್ದಿಯಾಗಿತ್ತು.

ಆದರೀಗ ಮಂಗಳ ಎಂಬುವರ ಫೋಟೊ ಭಾರಿ ಸದ್ದು ಮಾಡುತ್ತಿದೆ. ಮಂಗಳ ಮಂಗಳ 33267 ಇನ್‌ಸ್ಟಾಗ್ರಾಂ ಖಾತೆ ಹೊಂದಿರುವ ಅಭಿಮಾನಿ ಅಪ್ಪಟ ಅಭಿಮಾನಿ ಆಗಿದ್ದು, ಸಂಪೂರ್ಣವಾಗಿ ದರ್ಶನ್‌ ರೀಲ್ಸ್ ಮಾಡಿದ್ದಾರೆ.

ಇದನ್ನೂ ಓದಿ: Actor Darshan: ಆಕ್ಷೇಪಾರ್ಹ ಹೇಳಿಕೆ; ನಟ ದರ್ಶನ್‌ಗೆ ಮತ್ತೊಂದು ಕೇಸ್‌ ಸಂಕಷ್ಟ

ದರ್ಶನ್ ಪರ ವಿರುದ್ಧ ಏನೇ ಆದರೂ ಅದರ ಬಗ್ಗೆ ತಮ್ಮ ಖಾತೆಯಲ್ಲಿ ಚರ್ಚೆ ಮಾಡುತ್ತಾರೆ. ದರ್ಶನ್ ಪರ ಧ್ವನಿ ಎತ್ತುತ್ತಾರೆ. ಸಾಲು ಸಾಲು ದರ್ಶನ್‌ ಅವರ ಸಿನಿಮಾಗಳ ಹಾಡಿನ ರೀಲ್ಸ್‌ ಹಂಚಿಕೊಂಡಿದ್ದಾರೆ ಮಂಗಳಾ.

ಎದೆ ಮೇಲೆ ದರ್ಶನ್ ಮುಖವನ್ನು ಟ್ಯಾಟೂ ಹಾಕಿಸಿಕೊಂಡು ಅದರಲ್ಲಿ ಡಿ-ಬಾಸ್ ಎಂದು ಬರೆಸಿಕೊಂಡಿದ್ದಾರೆ.

Exit mobile version