ಬೆಂಗಳೂರು: ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಮೃತಪಟ್ಟಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ ಎಂದು ಮಳೆಗಾಲ ಶುರುವಾಗುವ ಮುನ್ನ ಅರ್ಜುನನ ಸಮಾಧಿ ನಿರ್ಮಾಣಕ್ಕೆ ದರ್ಶನ್ (Actor Darshan) ಕರೆ ಕೊಟ್ಟಿದ್ದರು. ದರ್ಶನ್ ಸ್ವಂತ ಹಣ ಖರ್ಚು ಮಾಡಿ ಗ್ರಾನೈಟ್ ಕಳಿಸಿದ್ದರು. ಆದರೆ ಕೆಲಸ ನಡೆಯುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ತಡೆದಿದ್ದು, ಈ ಬಗ್ಗೆ ಅರಣ್ಯಾಧಿಕಾರಿಗಳ ವಿರುದ್ಧ ದರ್ಶನ್ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಇದೀಗ ದರ್ಶನ್ ಅವರ ಸ್ನೇಹಿತ ನಾಗರಾಜ್ ಅವರು ಈ ಬಗ್ಗೆ ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ನಾಗಾರಾಜ್ ವಿಡಿಯೊ ಮಾಡಿ ʻʻನಾನು ನಾಗಾರಾಜ್. ದರ್ಶನ್ ಅವರ ಸ್ನೇಹಿತ. ದರ್ಶನ್ ಪರ ಮಾತನಾಡಲು ಬಂದಿರುವೆ. ದರ್ಶನ್ ಅವರು ಹೇಳದೇ ಕೇಳದೇ ಅರ್ಜುನ್ ಸಮಾಧಿ ಮಾಡಲು ಹುಡುಗರನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ದರ್ಶನ್ ಅವರು ಸಮಾಧಿ ಬಗ್ಗೆ ಟ್ವೀಟ್ ಮಾಡಿದ್ದರು. ಅದಾದ ಮೇಲೆ ಸರಕಾರ ಈ ಬಗ್ಗೆ ಯಾವುದೇ ಗಮನ ಹರಿಸಿರಲಿಲ್ಲ. ಇದಾದ ಬಳಿಕ ಅರ್ಜುನ ಮಾವುತ ವಿನು ಅವರು ತಂಡ ಅರಣ್ಯ ಅಧಿಕಾರಿಗಳಿಗೆ ಅರ್ಜುನ ಸಮಾಧಿ ಮಾಡಬೇಕು ಎಂದು ರಿಕ್ವೆಸ್ಟ್ ಮಾಡುತ್ತಾರೆ. ಅವಕಾಶ ಕೊಡಿ ಎಂದು ಲೆಟರ್ ಕೊಟ್ಟಿದ್ದಾರೆ. ಆಗ ಅನುಮತಿ ಕೂಡ ಕೊಟ್ಟಿದ್ದರು. ಹೀಗಾಗಿ ಅನುಮತಿ ಸಿಕ್ಕಿದ ಬಳಿಕ ದರ್ಶನ್ ಅವರು ನನ್ನ ಬಳಿ ಹಣವನ್ನು ಕೊಟ್ಟು ಕಲ್ಲುಗಳನ್ನು ವ್ಯವಸ್ಥೆ ಮಾಡು ಅಂದಾಗ ಕಲ್ಲುಗಳನ್ನು ತಂದೆವು. ನಮ್ಮ ಹುಡುಗರು ಮತ್ತು ವಿನು ತಂಡ ಫಾರೆಸ್ಟ್ ಒಳಗಡೆ ಸಮಾಧಿ ಕಟ್ಟಲು ಒಟ್ಟಿಗೆ ಹೋಗುತ್ತಾರೆ. ಸ್ಮಾರಕ ಮಾಡಬೇಕು ಎಂದು ಕೆಲಸ ಶುರು ಮಾಡಿದಾಗ, ಅರಣ್ಯ ಅಧಿಕಾರಿಗಳು ಮಾಡಬೇಡಿ ಎಂದು ತಡೆದಿದ್ದಾರೆ. ದರ್ಶನ್ ಸ್ವಂತ ಹಣ ಖರ್ಚು ಮಾಡಿ ಗ್ರಾನೈಟ್ ಕಳಿಸಿದ್ದರು. ಆದರೆ ಕೆಲಸ ನಡೆಯುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ತಡೆದಿದ್ರು. ಹಣವನ್ನೂ ಹಿಂದಿರುಗಿಸೋದಾಗಿ ಹೇಳಿದ್ರು. ಆದರೆ ಇದುವರೆಗೂ ನಮ್ಮ ಖಾತೆಗೆ ಹಣ ಬಂದಿಲ್ಲʼʼ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Cannes 2024: ಕಾನ್ ಚಿತ್ರೋತ್ಸವದಲ್ಲಿ ಭಾರತೀಯ ಸಿನಿಮಾಗೆ ಪ್ರಶಸ್ತಿ; ಹೊಸ ಇತಿಹಾಸ ಸೃಷ್ಟಿ!
ಸದ್ಯ ದರ್ಶನ್ ಹಾಗೂ ಅರಣ್ಯಾಧಿಕಾರಿಗಳ ಗುದ್ದಾಟ ಮುಂದುವರಿದಿದೆ. “ಮೊದಲು ಅನುಮತಿ ಕೊಟ್ಟು ಬಳಿಕ ನಾವೇ ಮಾಡ್ತೀವಿ ಎನ್ನುತ್ತಿದ್ದಾರೆ.” ಎಂದು ಅರಣ್ಯಾಧಿಕಾರಿಗಳ ವಿರುದ್ಧ ದರ್ಶನ್ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.