Site icon Vistara News

Actor Darshan: ಸೋದರ ಮಾವಂದಿರಿಗೂ ತೊಂದರೆ ಕೊಟ್ಟಿದ್ದ ದರ್ಶನ್​, ಒಂದೊಂದಾಗಿ ಹೊರಬರುತ್ತಿದೆ ‘ದಾಸ’ನ ದುರ್ಬುದ್ಧಿ !

Actor Darshan his brother-in-law homeless

ಬೆಂಗಳೂರು: ನಟ ದರ್ಶನ್‌ (Actor Darshan) ರೇಣುಕಾಸ್ವಾಮಿ ಹತ್ಯೆ ಸಂಬಂಧ ಕಂಬಿ ಎಣಿಸುತ್ತಿದ್ದಾರೆ. ಇದಾದ ಬಳಿಕ ದರ್ಶನ್‌ ಅವರ ಹಲವು ಕೃತ್ಯಗಳು ಒಂದೊಂದಾಗಿಯೇ ಬೆಳಕಿಗೆ ಬರುತ್ತಿದೆ. ಇದೀಗ ದರ್ಶನ್‌ ತಾನು ಹುಟ್ಟಿ ಬೆಳದ ಊರಿನಲ್ಲಿ ತಮ್ಮ ಸಂಬಂಧಿಕರಿಗೂ ತೊಂದರೆ ಕೊಟ್ಟಿದ್ದಾರೆ ಎಂಬ ವಿಷಯ ತಿಳಿದುಬಂದಿದೆ.

ಮಾಧ್ಯಮದವೊಂದು ವರದಿ ಮಾಡಿದಂತೆ ದರ್ಶನ್‌ ಹುಟ್ಟಿ ಬೆಳೆದ ತವರು ಮನೆ ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ. ಅಜ್ಜಿ-ತಾತನ ಮನೆಯನ್ನು ಸ್ವತಃ ದರ್ಶನ್ ಮತ್ತು ತಾಯಿ ಮೀನಾ ಕೆಡವಿ ನೆಲಸಮಗೊಳಿಸಿ ಸೋದರ ಮಾವಂದಿರಿಗೂ ಸಮಸ್ಯೆ ಕೊಟ್ಟಿದ್ದರು ಎನ್ನಲಾಗಿದೆ. ಆಸ್ತಿ ವಿಚಾರವಾಗಿ ಸೋದರ ಮಾವಂದಿರ ಜೊತೆ ಗಲಾಟೆ ಮಾಡಿಕೊಂಡಿದ್ದ ದರ್ಶನ್ ಮತ್ತು ತಾಯಿ ಮೀನಾ ಸೇರಿ ನೆಲಸಮ ಮಾಡಿದ್ದಾರೆ. ಈ ಪ್ರಕರಣದ ಕಳೆದ 10 ವರ್ಷಗಳ ಹಿಂದೆ ನಡೆದಿದ್ದು, ಈಗಲೂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.

ದರ್ಶನ್‌ ವಿರುದ್ಧ ಹತ್ತು ಹಲವು ಕೇಸ್‌ಗಳು ಇವೆ ಎನ್ನಲಾಗುತ್ತಿದೆ. ಕೇವಲ ಹೊರಗೆ ಮಾತ್ರವಲ್ಲ ಸಂಬಂಧಿಕರಿಗೂ ದರ್ಶನ್ ಸಮಸ್ಯೆ ಕೊಟ್ಟಿದ್ದಾರೆ. ಈ ಬಗ್ಗೆ ದರ್ಶನ್ ವಿರುದ್ಧ ಸ್ವತಃ ಅವರ ಸೋದರ ಮಾವ ಟಿ.ಎಲ್. ಶ್ರೀನಿವಾಸ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Actor Darshan: ಇದು ರೌಡಿಸಂ ಸೆಂಟರ್‌ ಅಲ್ಲ; ನಿಜ ಆಗ್ತಾ ಇದೆಯಾ ಅಂದು ಜಗ್ಗೇಶ್‌ ನುಡಿದಿದ್ದ ಭವಿಷ್ಯ?

ʻʻದರ್ಶನ್‌ ಅವರನ್ನು ನಾವು ಎತ್ತಿ ಆಡಿಸಿದವರು. ಆದರೆ ಈಗ ಜೈಲು ಸೇರಿದ್ದಾನೆ. ಕೊಲೆ ಕೇಸ್‌ನಲ್ಲಿ ಭಾಗಿಯಾಗಿರುವುದು ಬೇಸರ ಆಗಿದೆ. ಈ ಹಿಂದೆ ನಮ್ಮ ಮನೆಯ ಆಸ್ತಿ ವಿಚಾರಕ್ಕೂ ಗಲಾಟೆ ಮಾಡಿದ್ದ. ಮಾತುಕತೆಯಲ್ಲಿ ಬಗೆಹರಿಸಿಕೊಳ್ಳಬೇಕಾದ ವಿಚಾರವನ್ನು ದೊಡ್ಡದ್ದು ಮಾಡಿದ್ದ. ಕೊನೆಗೆ ಮನೆಯನ್ನೇ ನೆಲಸಮ ಮಾಡಿದರು. ನಾವು ಆ ಬಳಿಕ ದರ್ಶನ್‌ ಜತೆ ಸಂಪರ್ಕದಲ್ಲಿ ಇರಲಿಲ್ಲ. ಯಾವಾಗ ಪತ್ನಿ ಜತೆ ಜಗಳವಾಡಿ ಕೇಸ್‌ ದಾಖಲಾಯ್ತೋ ಹೋಗಿ ಸಂಧಾನ ಮಾಡಿ ಬಂದೆವು. ಇದಾದ ನಂತರ ಅವರ ಬಳಿ ಹೋಗಿರಲಿಲ್ಲ. ಈಗ ರೇಣುಕಾಸ್ವಾಮಿ ಎನ್ನುವವರನ್ನು ಕೊಲೆ ಮಾಡಿ ಜೈಲು ಸೇರಿರುವುದು ನೋವಿನ ಸಂಗತಿಯಾಗಿದೆ. ಇನ್ನು ದರ್ಶನ್‌ ತಾಯಿ ಜತೆ ಕೂಡ ಸರಿಯಾಗಿ ಮಾತನಾಡುತ್ತಿರಲಿಲ್ಲ. ದರ್ಶನ್ ನಿರಪರಾಧಿ ಎಂದು ಸಾಬೀತಾಗಿ ಹೊರ ಬರುತ್ತಾರೆ ಎಂಬ ನಂಬಿಕೆಯಿದೆ. ಮುಂದೆ ಆದರೂ ಒಳ್ಳೆಯ ದಾರಿಯಲ್ಲಿ ಸಾಗಲಿʼʼಎಂದು ಹೇಳಿದರು.

ಬಡಪಾಯಿ ಕಾರ್ಮಿಕರ ಮೇಲೆ ನಾಯಿ ಛೂ ಬಿಟ್ಟು ಹಿಂಸಿಸಿದ್ದ ದರ್ಶನ್‌ & ಗ್ಯಾಂಗ್‌!

ರೇಣುಕಾ ಸ್ವಾಮಿ ಕೊಲೆ ವಿಚಾರದಲ್ಲಿ ದರ್ಶನ್‌ ಹಾಗೂ ಗ್ಯಾಂಗ್‌ ಈಗಾಗಲೇ ಅರೆಸ್ಟ್‌ ಆಗಿದೆ. ಇದೀಗ ನಟ ದರ್ಶನ್ (Actor Darshan) ಮತ್ತು ಗ್ಯಾಂಗ್‌ನ ಮತ್ತೊಂದು ಕರಾಳ ಮುಖ ಬಯಲಾಗಿದೆ. 10 ವರ್ಷಗಳ ಹಿಂದೆ, ಪರಿಹಾರ ಕೇಳಲು ಹೋಗಿದ್ದ ಕೂಲಿ ಕೆಲಸಗಾರನ ಮೇಲೆ ನಾಯಿ ಛೂ ಬಿಟ್ಟು ವಿಕೃತಿ ಮೆರೆದಿದ್ದರೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಚಾಮರಾಜನಗರ ತಾಲೂಕಿನ ನಿಜಲಿಂಗನಪುರದ ಮಹೇಶ್ ಎಂಬುವರು 10 ವರ್ಷಗಳ ಹಿಂದೆ ಪರಿಹಾರ ಕೇಳಲು ಹೋಗಿ ಕಣ್ಣು ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಟಿ. ನರಸೀಪುರ ಸಮೀಪದ ತೂಗುದೀಪ ಫಾರ್ಮ್​ಹೌಸ್​ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಈ ರೀತಿ ವಿಕೃತಿ ತೋರಿಸಲಾಗಿತ್ತು ಎನ್ನಲಾಗಿದೆ.

ಮಹಿಳೆ ಮೇಲೆ ನಟ ದರ್ಶನ್ ಕ್ರೌರ್ಯ

ಮತ್ತೊಂದು ಪ್ರಕರಣದಲ್ಲಿ ಕೊಡಗಿನ ಹೋಂ ಸ್ಟೇ ಒಂದರಲ್ಲಿ ಮಹಿಳೆ ಮೇಲೆ ನಟ ದರ್ಶನ್ ಕ್ರೌರ್ಯ ಮೆರೆದಿದ್ದಾರೆ ಎನ್ನಲಾಗಿದೆ. ಕೊಡಗು ಜಿಲ್ಲೆಯ ಹೊಂ ಸ್ಟೇ ಯಲ್ಲಿ ಕೆಲವು ವರ್ಷಗಳ ಹಿಂದೆ ಘಟನೆ ನಡೆದಿತ್ತು. ನಟ ದರ್ಶನ್ ಸ್ನೇಹಿತರ ಜತೆ ಹೋಂ ಸ್ಟೇ ಯಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಹೋಂ ಸ್ಟೇಯಲ್ಲಿ ಕೆಲಸ ಮಾಡುವ ಮಹಿಳೆಗೆ ಸಿಗರೇಟ್‌ನಿಂದ ಸುಟ್ಟು ಹಲ್ಲೆ ಮಾಡಿದ್ದರು ಎಂದು ಆರೋಪ ಮಾಡಿದ್ದಾರೆ.

Exit mobile version