Site icon Vistara News

Actor Darshan: ತಿರುಪತಿ ತಿಮ್ಮಪ್ಪನ `ದರ್ಶನ’ ಸಿಗಬಹುದು ಆದರೆ ʻಡಿ ಬಾಸ್‌ʼ ಭೇಟಿಗೆ ಅವಕಾಶ ಸಿಗುತ್ತಿಲ್ಲ ಎಂದ ನಟ!

Actor Darshan meet fail what manoj said

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್‌ ದರ್ಶನ್ (Actor Darshan) ಜೈಲು ಸೇರಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್‌ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಹಿಂದೆ ದರ್ಶನ್ ಅವರನ್ನ ಭೇಟಿಯಾಗಲು ಪರಪ್ಪನ ಅಗ್ರಹಾರ ಜೈಲಿಗೆ ಸಾಧುಕೋಕಿಲ ಬಂದಿದ್ದರು. ಆದರೆ ಭೇಟಿಯಾಗದೇ ವಾಪಸ್‌ ಆದರು. ಇದೀಗ ದರ್ಶನ್ ಭೇಟಿಗೆ ಆಗಮಿಸಿದ್ದ ನಟ ಮನೋಜ್ ವಿವಾನ್ ಕೂಡ ಅವಕಾಶ ಸಿಗದೇ ವಾಪಸ್ ಆಗಿದ್ದಾರೆ.

ವಾರಕ್ಕೆ ಎರಡೇ ದಿನ ಭೇಟಿ ನೀಡುವ ಹಿನ್ನೆಲೆಯಲ್ಲಿ ಮನೋಜ್ ಅವರಿಗೆ ಸಿಬ್ಬಂದಿ ಅವಕಾಶ ನೀಡಿಲ್ಲ ಎನ್ನಲಾಗಿದೆ. ಇದೀಗ ನಟ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದು ಹೀಗೆ. ʻʻತಿರುಪತಿ ತಿಮ್ಮಪ್ಪನ ದರ್ಶನ ಸಿಗಬಹುದು. ಆದ್ರೆ ನಟ ದರ್ಶನ್ ಭೇಟಿಗೆ ಅವಕಾಶ ಸಿಗುತ್ತಿಲ್ಲ. ಇದೇ ತಿಂಗಳು 22ನೇ ತಾರೀಖು ʻವಿದ್ಯಾರ್ಥಿ ವಿದ್ಯಾರ್ಥಿನಿಯರೇʼ ಸಿನಿಮಾ ಸೆಲೆಬ್ರಿಟಿ ಶೋ ಇತ್ತು. ಅಂದು ನಾನು ದರ್ಶನ್‌ ಫ್ಯಾನ್ಸ್‌ಗೆ ಸಿನಿಮಾ ನೋಡಿ ಅಂದಿದ್ದೆ. ಕನ್ನಡ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸಿ ಎಂದು ದರ್ಶನ್ ಸಾಕಷ್ಟು ಬಾರಿ ಹೇಳುತ್ತಿದ್ದರು. ಹಾಗಾಗಿ ನಟ ದರ್ಶನ್ ಫ್ಯಾನ್ಸ್‌ ಮತ್ತು ಕನ್ನಡಿಗರಿಗೆ ಸಿನಿಮಾ ನೋಡಿ ಎಂದು ಕರೆ ಕೊಟ್ಟಿದ್ದೆ. ಆದರೆ ಈ ಬಗ್ಗೆ ಪಾಸಿಟಿವ್‌ ಹಾಗೂ ನೆಗೆಟಿವ್‌ ಪ್ರತಿಕ್ರಿಯೆ ಎರಡೂ ಬಂದಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾ ಟ್ರೈಲರ್ ಲಾಂಚ್ ನಟ ದರ್ಶನ್‌ರಿಂದ ಮಾಡಿಸಬೇಕಿತ್ತು. ಆದರೆ ದರ್ಶನ್ ರವರು ಕೊಲೆ ಕೇಸ್ ನಲ್ಲಿ ಸಿಲುಕಿದ್ದರಿಂದ ಸಾಧ್ಯವಾಗಲಿಲ್ಲ. ಇಂದು ಭೇಟಿ ಮಾಡಿ ಕನ್ನಡ ಸಿನಿಮಾಗಳನ್ನು ತಮ್ಮ ಫ್ಯಾನ್ಸ್‌ಗೆ ನೋಡುವಂತೆ ಸಂದೇಶ ಕೊಡಿ. ಹೊಸಬರ ಸಿನಿಮಾಗಳು ನೋಡಿ ಎಂದು ಮನವಿ ಮಾಡಲು ಬಂದಿದ್ದೆಆದ್ರೆ ಭೇಟಿ ಸಾಧ್ಯವಾಗಲಿಲ್ಲ. ಆದಷ್ಟು ಭೇಗ ನಟ ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿʼʼ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: Actor Darshan: ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಭೇಟಿ ಬಳಿಕ ಡಿಕೆ ಶಿವಕುಮಾರ್‌ ಹೇಳಿದ್ದೇನು?

Actor Dhanush: ಸಿನಿಮಾ ಬಿಡುಗಡೆಗೂ ಮುನ್ನ ದೇವರ ಮೊರೆ ಹೋದ ನಟ ಧನುಷ್ಇದನ್ನೂ ಓದಿ:

ಇದಕ್ಕೂ ಮುಂಚೆ ದರ್ಶನ್ ಭೇಟಿಗೆ ಅವಕಾಶ ಸಿಗದೇ ಸಾಧುಕೋಕಿಲ ವಾಪಸ್‌ ಆಗಿದ್ದರು. ವಾರಕ್ಕೆ ಎರಡು ಬಾರಿ ಮಾತ್ರ ಭೇಟಿಗೆ ಅವಕಾಶ ಇತ್ತು. ಒಂದು ಬಾರಿ ಭೇಟಿಗೆ ಐದು ಮಂದಿಗೆ ಅವಕಾಶ ಇರುವ ನಿಯಮವಿದೆ. ಈಗಾಗಲೇ ಒಂದು ಬಾರಿ ದರ್ಶನ್ ಭೇಟಿಗೆ ಕುಟುಂಬ ಹೋಗಿತ್ತು. ಗುರುವಾರ ಮತ್ತೊಮ್ಮೆ ದರ್ಶನ್ ಫ್ಯಾಮಿಲಿ ಆಗಮಿಸುವ ಹಿನ್ನೆಲೆಯಲ್ಲಿ ಸಾಧುಕೋಕಿಲ ಅವರಿಗೆ ಅವಕಾಶ ಕಲ್ಪಿಸಿಕೊಟ್ರೆ ಮುಂದಿನ ದಿನಗಳಲ್ಲಿ ಫ್ಯಾಮಿಲಿಗೆ ಅವಕಾಶ ಸಿಗುವುದಿಲ್ಲ. ಹೀಗಾಗಿ ಗುರುವಾರ ಫ್ಯಾಮಿಲಿ ಜೊತೆಗೆ ಸಾಧುಕೋಕಿಲ ಅವರಿಗೆ ಬನ್ನಿ ಎಂದು ದರ್ಶನ್ ಜೈಲಾಧಿಕಾರಿಗಳ ಮೂಲಕ ಸಾಧುಕೋಕಿಲಗೆ ತಿಳಿಸಿದ್ದಾರೆ ಎನ್ನಲಾಗಿದೆ.

Exit mobile version