ಬೆಂಗಳೂರು: ನಟ ದರ್ಶನ್ (Actor Darshan) ಅವರು ರೇಣುಕಾ ಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಂಗ ಬಂಧನಲ್ಲಿದ್ದಾರೆ. ದರ್ಶನ್ ವಿಚಾರವಾಗಿ ಹಲವು ನಟ ನಟಿಯರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಟ ದರ್ಶನ್ ಚಿತ್ರರಂಗಕ್ಕೆ ಬರು ಮುನ್ನ ನೀನಾಸಂನಲ್ಲಿ ನಟನೆಯ ಪಟ್ಟುಗಳನ್ನು ಕಲಿತ್ತಿದ್ದರು. ಅಲ್ಲಿ ರತ್ನಕ್ಕ ಎಂಬುವವರು ಮೆಸ್ ನಡೆಸುತ್ತಿದ್ದರು. ಹಣ ಇಲ್ಲದಿದ್ದರೂ ದರ್ಶನ್ ಸೇರಿದಂತೆ ಹಲವರಿಗೆ ಊಟ ಕೊಡುತ್ತಿದ್ದರು. ಈ ವಿಚಾರವನ್ನು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ದರ್ಶನ್ ಬಿಚ್ಚಿಟ್ಟಿದ್ದರು. ರತ್ನಕ್ಕ ಕೂಡ ಶೋಗೆ ಬಂದು ಆ ದಿನಗಳ ಬಗ್ಗೆ ಮಾತನಾಡಿದ್ದರು. ಇದೀಗ ಮಾಧ್ಯಮವೊಂದರಲ್ಲಿ ರತ್ನಕ್ಕ ಅವರು ದರ್ಶನ್ ವಿಚಾರವಾಗಿ ಕಣ್ಣೀರಿಟ್ಟಿದ್ದಾರೆ.
ಈ ಬಗ್ಗೆ ರತ್ನಕ್ಕ ಮಾತನಾಡಿ ʻʻದರ್ಶನ್ ಅರೆಸ್ಟ್ ಎಂದು ಟಿವಿಯಲ್ಲಿ ನೋಡಿದಾಗ ಒಂದು ಕ್ಷಣ ಕುಸಿದುಬಿಟ್ಟೆ. ಗುರುವಾರ ಬೆಂಗಳೂರಿಗೆ ಬರೋಕೆ ಹೇಳಿದ್ದರು. ಅಷ್ಟರಲ್ಲಿ ಅವರ ಬಂಧನ ವಿಚಾರ ಕೇಳಿ ನೋವಾಗಿತ್ತು. ನನಗೆ ಫಸ್ಟ್ ಒಂದು ಸಲ ದರ್ಶನ್ ಈ ರೀತಿ ತಪ್ಪು ಮಾಡಿದ್ರಾ? ಎಂಬುದು ಒಪ್ಪಿಕೊಳ್ಳೋಕೆ ಆಗ್ತಿಲ್ಲ. ದರ್ಶನ್ ಜೈಲಿನಿಂದ ಹೊರಗೆ ಬರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ. ಬೇಗ ಒಂದು ರೂ. ಕೂಡ ಅವರಿಂದ ನಾನು ನಿರೀಕ್ಷೆ ಮಾಡಿಲ್ಲ. ಮುಂದೆ ಕೂಡ ಮಾಡಲ್ಲ. ಆದರೆ ಆ ಬಾಂಧವ್ಯ ಹಾಗೆ ಇದೆ. ಅದಕ್ಕೆ ಬೆಲೆ ಕಟ್ಟಲು ಆಗಲ್ಲ. ಆ ಕಷ್ಟದ ದಿನಗಳನ್ನು ಸಹಿಸಿಕೊಂಡು ಬಹಳ ಎತ್ತರಕ್ಕೆ ಬೆಳೆದ. ತಪ್ಪು ಯಾರು ಮಾಡಲ್ಲ, ಎಲ್ಲರೂ ಮಾಡ್ತಾರೆ. ಸಮಯ ಕೆಟ್ಟಾಗ ಎಲ್ಲರೂ ತಪ್ಪು ಮಾಡ್ತಾರೆ. ಆ ಕ್ಷಣ ದರ್ಶನ್ ಒಮ್ಮೆ ಯೋಚನೆ ಮಾಡಬೇಕಿತ್ತು. ನಾನು ದರ್ಶನ್ ಪರ ಮಾತಾಡ್ತಿದ್ದೀನಿ ಅಂತ ಅಲ್ಲ. ತಪ್ಪು ತಪ್ಪೇ. ಎದುರುಗಡೆ ಇರುವ ವ್ಯಕ್ತಿ ಏನು ತಪ್ಪು ಮಾಡಿದ್ದಾನೆ ಅಂತ ನೋಡಬೇಕಿತ್ತು. ಆ ವ್ಯಕ್ತಿ ಅಶ್ಲೀಲ ಮೆಸೇಜ್, ಅಶ್ಲೀಲ ಚಿತ್ರ ಕಳಿಸೋದು, ಅದನ್ನು ಮಾಡದೇ ಇದ್ದಿದ್ದರೆ ದರ್ಶನ್ ಈ ಹಂತಕ್ಕೆ ಹೋಗ್ತಿರಲಿಲ್ಲ. ದರ್ಶನ್ ತಪ್ಪು ಮಾಡಿದ್ದರೆ ಶಿಕ್ಷೆ ಆಗುತ್ತದೆ. ದರ್ಶನ್ ಆರೋಪಿ, ಅಪರಾಧಿ ಅಲ್ಲ. ಎಲ್ಲರೂ ಅವರ ಪರ ಇದ್ದಾರೆʼʼಎಂದಿದ್ದಾರೆ.
ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳ ಫಿಂಗರ್ ಪ್ರಿಂಟ್ ಮ್ಯಾಚ್; ಸ್ಫೋಟಕ ಮಾಹಿತಿ ಬಹಿರಂಗ!
ನಟ ದರ್ಶನ್ (Actor Darshan) ಹಾಗೂ ಟೀಂ ಕೊಲೆ ಪ್ರಕರಣ ಸಂಬಂಧಿಸಿದಂತೆ ಪೊಲೀಸರ ತನಿಖೆ ಇನ್ನಷ್ಟು ಚುರುಕುಗೊಂಡಿದೆ. ರೇಣುಕಾಸ್ವಾಮಿ ಕೆಲಸಕ್ಕೆ ಸೇರಿದ್ದು ಯಾವಾಗ? ಕೆಲಸಕ್ಕೆ ಸೇರಲು ಕೊಟ್ಟ ದಾಖಲೆಗಳ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸರಿಂದ ವಿವರಗಳ ಸಂಗ್ರಹ ಆಗುತ್ತಿದೆ. ಕೆಲಸದ ಅವಧಿಯಲ್ಲೆ ರೇಣುಕಾಸ್ವಾಮಿಯನ್ನು ಆರೋಪಿಗಳು ಕಿಡ್ನಾಪ್ ಮಾಡಿದ್ದು ತನಿಖೆ ವೇಳೆ ತಿಳಿದು ಬಂದಿದೆ. ದರ್ಶನ್, ಪವಿತ್ರಾಗೌಡ ಸೇರಿ ಹತ್ತು ಜನರ ಫಿಂಗರ್ ಪ್ರಿಂಟ್ ಮ್ಯಾಚ್ ಆಗಿದೆ. ಎಫ್ ಎಸ್ ಎಲ್ ಪರೀಕ್ಷೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗಗೊಂಡಿದೆ.
ಇದನ್ನೂ ಓದಿ: Dolly Dhananjay: ಐತಿಹಾಸಿಕ ‘ಹಲಗಲಿ’ ಸಿನಿಮಾದಲ್ಲಿ ‘ಡಾಲಿ’ ಧನಂಜಯ ಹೀರೊ!
ಚಿತ್ರದುರ್ಗದ ಫಾರ್ಮಸಿಯಲ್ಲಿ ರೇಣುಕಾಸ್ವಾಮಿ ಕೆಲಸ ಮಾಡುತ್ತಿದ್ದ. ಈ ವೇಳೆ ಜೂನ್ 8 ರಂದು ಫಾರ್ಮಸಿಯಿಂದ ಹೊರಗಡೆ ಆರೋಪಿಗಳು ಕರೆಸಿಕೊಂಡು ಕಿಡ್ನಾಪ್ ಮಾಡಿದ್ದರು. ಫಾರ್ಮಸಿಯಲ್ಲಿ ಕೆಲಸಕ್ಕೆ ಸೇರಲು ಕೊಟ್ಟ ದಾಖಲೆಗಳ ಸಂಗ್ರಹ ಆಗಿದೆ. ಬೆಂಗಳೂರಿನಲ್ಲಿರುವ ಫಾರ್ಮಸಿ ಕೇಂದ್ರ ಕಚೇರಿಗೆ ಈ ಬಗ್ಗೆ ಪೊಲೀಸರು ಪತ್ರ ಬರೆದಿದ್ದಾರೆ. ನಗರದ ಸಿಂಗಸಂದ್ರದಲ್ಲಿ ಫಾರ್ಮಸಿ ಕಚೇರಿ ಇದೆ. ಈಗಾಗಲೇ ಮೇಲ್ ಮೂಲಕ ಮಾಹಿತಿ ರವಾನೆ ಆಗಿದೆ. ಇದರಲ್ಲಿ ರೇಣುಕಾಸ್ವಾಮಿ ವೈಯಕ್ತಿಕ ಮಾಹಿತಿ , ರೆಸೂಮ್ಯ್ ಹಾಗೂ ಹತ್ತನೇ ತರಗತಿ ಅಂಕಪಟ್ಟಿ ಹಾಗೂ ಕಂಪನಿ ನೀಡಿದ್ದ ನೇಮಕಾತಿ ಆದೇಶ ಪ್ರತಿ ಇದೆ. ಫಾರ್ಮಸಿ ಕಳುಹಿಸಿದ ದಾಖಲೆಗಳನ್ನ ಈಗಾಗಲೇ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದ ಪ್ರತಿ ವಿಚಾರದ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.