Site icon Vistara News

Actor Darshan : ದರ್ಶನ್‌ ಪರ ವಹಿಸಿ ಸಿಎಂ, ಗೃಹ ಸಚಿವರಿಗೆ ಮನವಿ ಮಾಡಿದ್ರಾ ರಾಜಕೀಯ ನಾಯಕರು?

Actor Darshan political leaders appeal to the CM and Home Minister not to twist case

ಬೆಂಗಳೂರು: ತನ್ನದೇ ಅಭಿಮಾನಿ ರೇಣುಕಾ ಸ್ವಾಮಿ ಎಂಬುವರನ್ನು ಕ್ರೂರವಾಗಿ ಕೊಲೆ ಮಾಡಿರುವ ಪ್ರಕರಣದಲ್ಲಿ ಜೈಲು ಸೇರಿದ್ದಾರೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Actor Darshan ). ಬುಧವಾರದಿಂದ ಆರಂಭಗೊಂಡಂತೆ ದರ್ಶನ್ ಗ್ಯಾಂಗ್​​ಗೆ ಆರು ದಿನಗಳ ಕಾಲ ಪೊಲೀಸ್ ವಿಚಾರಣೆ ನಡೆಯಲಿದೆ. ಕೊಲೆ ಕೇಸ್ ಸಂಬಂಧ ಪೊಲೀಸರು ಸಾಕ್ಷ್ಯಗಳನ್ನು ಒಟ್ಟು ಮಾಡಲಿದ್ದಾರೆ. ದರ್ಶನ್‌ ರಕ್ಷಣೆಗೆ ರಾಜಕೀಯ ನಾಯಕರು ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ. ಕೆಲ ನಾಯಕರು ನಿನ್ನೆಯಿಂದ (ಜೂ.11)ದರ್ಶನ್ ಮೇಲೆ ಕರುಣೆ ತೋರಿ ಎಂದು ಗೃಹ ಸಚಿವ ಪರಮೇಶ್ವರ್ ಹಾಗೂ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ದರ್ಶನ್ ಅವರನ್ನು ಬಚಾವ್ ಮಾಡಲು ಸಚಿವರು ಪ್ರಯತ್ನಿಸುತ್ತಿದ್ದಾರೆ ಎನ್ನುತ್ತಿದ್ದಂತೆ ಅವರು ಯಾರಾಗಿರಬಹುದು ಎನ್ನುವ ಚರ್ಚೆಯೂ ಜೋರಾಗಿದೆ. ಬೆಂಗಳೂರಿನ ಸಚಿವರ ಬಳಿ ಸಹಾಯ ಕೇಳಲಾಗಿದೆ ಎಂದೂ ವರದಿಯಾಗಿದೆ. ಆದರೆ ಅದು ಯಾರು ಎನ್ನುವುದು ರಿವೀಲ್ ಆಗಿಲ್ಲ. ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿ 13 ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ದರ್ಶನ್, ಪವಿತ್ರಾ ಗೌಡ ಅವರ ಜೊತೆ ಪವನ್, ವಿನಯ್, ಪ್ರದೋಷ್, ನಂದೀಶ, ದೀಪಕ್, ಲಕ್ಷ್ಮಣ್, ನಾಗರಾಜು, ಕಾರ್ತಿಕ್, ನಿಖಿಲ್, ಕೇಶವಮೂರ್ತಿ,ರಾಘವೇಂದ್ರ ಅವರನ್ನು ಅರೆಸ್ಟ್ ಮಾಡಲಾಗಿದೆ. ಪವಿತ್ರಾ ಗೌಡ ಅವರು ಆರೋಪಿ 1, ದರ್ಶನ್ ಆರೋಪಿ 2 ಎಂದು ಹೇಳಲಾಗಿದೆ.

ಇದನ್ನೂ ಓದಿ: Actor Darshan Arrested : ದರ್ಶನ್​ನ ಅನ್​ಫಾಲೋ ಮಾಡಿ ಡಿಪಿ ಡಿಲೀಟ್‌ ಮಾಡಿದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ!

ಇದೀಗ ದರ್ಶನ್ ಆಪ್ತರಿರುವ ರಾಜಕಾರಣಿಗಳಿಂದ ದಚ್ಚು ಅವರನ್ನು ರಕ್ಷಿಸಲು ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ. ಕೇಸ್ ಟ್ವೀಸ್ಟ್ ಮಾಡದಂತೆ ನಾಯಕರು ಮನವಿ ಕೂಡ ಮಾಡಿದ್ದಾರಂತೆ. ಹಳೆ ಮೈಸೂರು ಭಾಗದ ನಾಯಕರಿಂದ ಮನವಿ ಮಾಡಲಾಗಿದೆ ಎನ್ನಲಾಗಿದೆ. ʻದರ್ಶನ್ ತನ್ನ ಅಭಿಮಾನಿಯನ್ನ ಸಾಯಿಸುವಷ್ಟು ಕ್ರೂರಿಯಲ್ಲ. ಹೀಗಾಗಿ ಈ ಪ್ರಕರಣದಲ್ಲಿ ದರ್ಶನ್ ಪಾತ್ರ ಇರುವುದಿಲ್ಲ. ದರ್ಶನ್ ಮೇಲೆ ಕರುಣೆ ತೋರಿ ಎಂದು ಗೃಹ ಸಚಿವ ಪರಮೇಶ್ವರ್ ಹಾಗೂ ಸಿಎಂ ಸಿದ್ದರಾಮಯ್ಯ ನಿನ್ನೆ ಸಂಜೆಯಿಂದಲೇ ಕೆಲ ನಾಯಕರು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಭಾರೀ ಭದ್ರತೆ

ದರ್ಶನ್​ ಹಾಗೂ ಆತನ ಗ್ಯಾಂಗ್​ನ ಸದಸ್ಯರು ಇದ್ದ ಪೊಲೀಸ್ ಠಾಣೆಗೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು . ವಿಐಪಿ ಆರೋಪಿಗಳ ಮೇಲೆ ದಾಳಿಯಾಗುವ ಅಥವಾ ಇನ್ಯಾವುದೇ ಅನಾಹುತಗಳನ್ನು ತಪ್ಪಿಸುವ ಉದ್ದೇಶದಿಂದ ಠಾಣೆಯ ಹೊರಗಡೆ ಕೆಎಸ್​ಆರ್​​ಪಿ ಪೊಲೀಸ್​ ತಂಡವೊಂದನ್ನು ನಿಯೋಜಿಸಲಾಗಿತ್ತು. ದರ್ಶನ್​ಗೆ ದೊಡ್ಡ ಪ್ರಮಾಣದ ಅಭಿಮಾನಿ ಬಳಗವಿದೆ. ಹುಚ್ಚು ಅಭಿಮಾನ ದರ್ಶನ್ ಆರೋಪಿಯೇ ಅಲ್ಲ ಎಂದು ವಾದಿಸುವ ಮಟ್ಟಕ್ಕೆ ಬಂದಿದೆ. ಹೀಗಾಗಿ ಡಿ ಬಾಸ್ ನೋಡಲು ಪೊಲೀಸ್​ ಠಾಣೆಗೆ ಬರಬಹುದು ಎಂಬ ಊಹೆ ಮೇಲೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

Exit mobile version