ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಅವರು ಕನ್ನಡ ಚಿತ್ರರಂಗಕ್ಕೆ (Actor Darshan) ಪದಾರ್ಪಣೆ ಮಾಡಿ 25 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಸ್ಮರಿಸಲು ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಶನಿವಾರ ರಾತ್ರಿ ಅದ್ಧೂರಿಯಾಗಿ ʼಬೆಳ್ಳಿ ಪರ್ವ D-25ʼ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ದರ್ಶನ್ ಅವರು ಚಿತ್ರರಂಗದವರಿಗೆ ಹಾಗೂ ತಾವು ನಡೆದು ಬಂದ ಹಾದಿಯ ಬಗ್ಗೆ ಮಾತನಾಡಿದ್ದರು. ತಮ್ಮನ್ನು ಪದೇ-ಪದೇ ಸುತ್ತಿಕೊಳ್ಳುವ ವಿವಾದಗಳ ಬಗ್ಗೆಯೂ ದರ್ಶನ್ ಮಾತನಾಡಿದರು.
ಕುದುರೆ ಮಾಲೀಕ ರಾಮಮೂರ್ತಿ ಮಾತ್ರ!
ದರ್ಶನ್ ಮಾತನಾಡಿ ʻʻನಮ್ಮ ಚಿತ್ರರಂಗದ ಎಲ್ಲ ಪಿಲ್ಲರ್‌ಗಳು, ಎಲ್ಲ ನಾಯಕ ನಟರು, ನಟಿಯರು, ತಂತ್ರಜ್ಞರಿಗೆ ಧನ್ಯವಾದಗಳುʼ ಎಂದು ಕಥೆಯ ಮೂಲಕ ಮಾತು ಶುರು ಮಾಡಿದರು. ದರ್ಶನ್ ಮಾತು ಶುರು ಮಾಡಿ ʻʻಯಾವುದೋ ಒಂದು ಟಾಂಗಾಗೆ ಕಟ್ಟಿರುವ ಕುದರೆ (ದರ್ಶನ್) ಮೆಲ್ಲಗೆ ಹೋಗ್ತಾ ಇತ್ತು. ಆ ಕುದರೆಯನ್ನು ಯಾರೋ ಇಬ್ಬರು ನೋಡಿದ್ರು. ನೋಡೋಕೆ ಸ್ವಲ್ಪ ಪರವಾಗಿಲ್ಲ. ಹೈಟ್ ಇದೆ ಎಂದರು. ಇದ್ಯಾಕೆ ಎಲ್ಲಿ ಓಡ್ತಾ ಇದೆ ಎಂದು ರೇಸ್ ಕೋರ್ಸ್‌ಗೆ ನಿಲ್ಲಿಸಿದರು. ಆದರೆ ಆ ಕುದುರೆ ಮಾಲೀಕ ಬಂದು ರಾಮಮೂರ್ತಿ ಅವರು. ಆ ಕುದುರೆಗೆ ಹೇಳಕ್ಕೆ ಬೈಯಕ್ಕೆ ಅರ್ಹತೆ ಇರುವುದು ಅದು ಎಮ್‌ಜಿ ರಾಮ್ ಮೂರ್ತಿ ಅವರಿಗೆ ಮಾತ್ರ. ಇನ್ಯಾರಿಗೂ ಇಲ್ಲ. ಆ ಕುದುರೆಯನ್ನು ಕೂರಿಸಿ, ಹೀಗೆ ಕರೆತಂದು ರೇಸ್ಗೆ ಬಿಟ್ಟ ಕುದುರೆಯ ಮೇಲೆ ಜಾಕಿಯಾಗಿ (ನಿರ್ದೇಶಕ) ಪಿಎನ್ ಸತ್ಯ ಅವರನ್ನು ಕೂಡಿಸಿದರು. ಅಂದಿನಿಂದ ಇಂದಿನ ವರೆಗೆ ಓಡುತ್ತಲೇ ಇದೆ. ತರುಣ್, ಮಿಲನಾ ಪ್ರಕಾಶ್ ಹೀಗೆ ಜಾಕಿಗಳು ಬದಲಾಗುತ್ತಲೇ ಇದ್ದಾರೆ. ಕುದುರೆಗೆ ಓಡುವುದು ಮಾತ್ರವೇ ಗೊತ್ತು, ಅದನ್ನು ಓಡಿಸುತ್ತಿರುವವರು ಜಾಕಿಗಳು (ನಿರ್ದೇಶಕರು). ಸಿನಿಮಾ ನನ್ನದಲ್ಲ, ಎಲ್ಲ ನಿರ್ದೇಶಕರದ್ದು’ ಎಂದಿದ್ದಾರೆ ದರ್ಶನ್.
ಇದನ್ನೂ ಓದಿ: Actor Darshan: ಶ್ರೀರಂಗಪಟ್ಟಣದಲ್ಲಿ ದರ್ಶನ್@25; ಬೆಳ್ಳಿ ಹಬ್ಬದಲ್ಲಿ ತಾರೆಯರು, ಗಣ್ಯರ ಸಮಾಗಮ
ಹೌದು ನಾನು ಬ್ಯಾಡ್ ಬಾಯ್
ʻʻಮೊದಲು ಅವಮಾನಗಳೇ ಸಿಗುತ್ತದೆ. ಆಮೇಲೆ ಅದುವೇ ಸನ್ಮಾನ. ಚಪ್ಪಲಿ ಇಂದ ಹೊಡೀರಿ ಪರವಾಗಿಲ್ಲ. ಹೂವು ಹಾಕಿಸಿಕೊಳ್ಳುವಾಗ ಅದೇ ಪ್ರೌಡ್ ಅಲ್ಲಿ ಹಾಕಿಸಿಕೊಳ್ಳುತ್ತೀವಲ್ಲ ಹಾಗೆ. ನನ್ನಷ್ಟು ವಿವಾದ ಯಾರಿಗೂ ಸುತ್ತಿಕೊಳ್ಳಲ್ಲ. ಹೌದು ನಾನು ಬ್ಯಾಡ್ ಬಾಯ್. ಕಷ್ಟಪಟ್ಟಾಗ ಮಾತುಗಳು ಕಹಿಯಾಗಿರುತ್ತೆ. ಅದು ಕೆಲವರಿಗೆ ಹಿಡಿಸಲ್ಲ. ಫ್ಯಾಮಿಲಿ ಸಮಸ್ಯೆಗಳು, ಎಲ್ಲ ಸಮಸ್ಯೆಗಳನ್ನು ಬದಿಗಿಡುತ್ತೀನಿ. ನನ್ನ ಸೆಲೆಬ್ರಿಟಿಗಳು, ನನ್ನ ಕೆಲಸ ಮುಖ್ಯ, ಬೇರೆಯದಕ್ಕೆ ತಲೆಕೆಡಿಸಿಕೊಳ್ಳಲ್ಲ. ಇವತ್ತು ಇವಳಿರ್ಥಾಳೆ, ನಾಳೆ ಅವಳಿರ್ತಾಳೆ ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಅಷ್ಟೆ ಮುಖ್ಯ’ ಎಂದರು ದರ್ಶನ್.
ನನ್ನ ಕೆಲಸ ಅಷ್ಟೇ ಮುಖ್ಯ
ʻʻನನಗೆ ಸಿನಿಮಾ, ನನ್ನ ಕೆಲಸ ಅಷ್ಟೇ ಮುಖ್ಯ. ನನಗೆ ಇದು ಆಗಲೇ ಬೇಕು. ನಾನು ಇಷ್ಟ ಪಟ್ಟು ಕಷ್ಟ ಪಟ್ಟು ಬಂದ ದಾರಿ ಇದು. ಇದೇ ತಿರುಪತಿಗೆ ಕೆಂಪು ಬಸ್ ಅಲ್ಲಿ ಹೋಗ್ತಾ ಇದ್ದೆ ಮುಂಚೆ. ಈಗ ಕೋಟಿಗಟ್ಟಲೇ ಕಾರ್‌ನಲ್ಲಿ ಹೋಗ್ತಾ ಇದ್ದೀನಿ. ಇನ್ನು ನನಗೆ ಏನು ಬೇಕು. ದೇವರು ಇಷ್ಟು ಕೊಟ್ಟಿದ್ದಾನೆ. ಸಾಕು ನನಗೆ. ತಲೆ ಹಿಡಿಬೇಡಿ, ತಲೆ ಹೋಡಬೇಡಿ. ತಲೆ ಕೆಡ್ಸ್‌ಕೋಬೇಡಿ. ಇನ್ನು ನಾನು ಜಿರೋದಲ್ಲೇ ಇದ್ದೀನಿ. ನನ್ನ ಕೆಲಸದ ಮೇಲೆ ಅತಿ ಆಸೆ ಇದೆ. ಎಲ್ಲ ಯುವಕರಿಗೆ ಹೇಳೋದೆ ಇಷ್ಟು. ನೀವು ಕೆಲಸ ಮಾಡುತ್ತಲೇ ಇರಿ. ಇದು ಯಾವುದೇ ರಾಜಕೀಯ ಕಾರ್ಯಕ್ರಮ ಅಲ್ಲ. ನಂಗೆ ಬುದ್ಧಿ ಕಲಿಸಿದ್ದು ಸುಮಲತಾ ಅಮ್ಮ. ಅಭಿಷೇಕ್ ನಿಗಿಂತಲೂ ಹೆಚ್ಚಿನ ಪ್ರೀತಿಯನ್ನು ನನಗೆ ತೋರಿಸಿದ್ದಾರೆ’ ಎಂದರು ದರ್ಶನ್.
ʻ58 ಸಿನಿಮಾಗಳಲ್ಲಿ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರಿಗೆ ಕೇಲೋದು ಒಂದೇ ಗೊತ್ತೊ-ಗೊತ್ತಿಲ್ಲದೆ ಈ 25 ವರ್ಷದಲ್ಲಿ ನೋವು ಮಾಡಿದ್ದರೆ ಕ್ಷಮೆ ಕೇಳುತ್ತೇನೆ’ ಎಂದು ಮಾತು ಮುಗಿಸಿದ್ದಾರೆ ದರ್ಶನ್.
ಇದನ್ನೂ ಓದಿ: Actor Darshan : ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್ ಇಲ್ಲಿ ವೀಕ್ಷಿಸಿ
ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಬಳಿ ನಡೆದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿನಯ್ ಗುರೂಜಿ, ನಟ ವಿನೋದ್ ರಾಜ್ ಕುಮಾರ್, ನಟಿ, ಸಂಸದೆ, ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ವಿನೋದ್ ಪ್ರಭಾಕರ್, ಪ್ರಜ್ವಲ್ ದೇವರಾಜ್, ಧನ್ವೀರ್, ನೀನಾಸಂ ಸತೀಶ್, ಶರಣ್, ಚಿಕ್ಕಣ್ಣ, ನೆನಪಿರಲಿ ಪ್ರೇಮ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.