ಹುಬ್ಬಳ್ಳಿ: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ತೂಗುದೀಪ ಪರಪ್ಪನ ಜೈಲಿನಲ್ಲಿ (Actor Darshan) ಇದ್ದಾರೆ. ದರ್ಶನ್ ಸದ್ಯ ಯೋಗ, ಧ್ಯಾನ, ಪುಸ್ತಕದ ಮೊರೆ ಹೋಗಿದ್ದಾರೆ. ಇದೀಗ ಹುಬ್ಬಳ್ಳಿ ಸಿದ್ಧಾರೂಢ ಮಠದಿಂದಲೂ ದರ್ಶನ್‌ಗೆ ಪುಸ್ತಕ ಕಳಿಸಿಕೊಡಲಾಗಿದೆ. ನಟ ದರ್ಶನಗೆ ಸದ್ಗುರು ಸಿದ್ಧಾರೂಢರ ಚರಿತ್ರೆ ಪುಸ್ತಕ ರವಾನೆಯಾಗಿದೆ. ಮಠದ ಧರ್ಮದರ್ಶಿ ಕಾರಾಗೃಹದಲ್ಲಿರುವ ದರ್ಶನಗೆ ಪುಸ್ತಕವನ್ನು ಪೋಸ್ಟ್ ಮೂಲಕ ರವಾನೆ ಮಾಡಿದ್ದಾರೆ.
ಶ್ರೀಮಠ ಟ್ರಸ್ಟ್ ಕಮಿಟಿಯ ಧರ್ಮದರ್ಶಿಗಳಾದ ಡಾ.ಗೋವಿಂದ ಮಣ್ಣೂರು ಮಾಧ್ಯಮವೊಂದಕ್ಕೆ ಈ ಬಗ್ಗೆ ಮಾತನಾಡಿ ʻʻಸಿದ್ಧಾರೂಢರ ಚರಿತಾಮೃತ ಪುಸ್ತಕ ಕಳಿಸಿದ್ದೇವೆ. ದರ್ಶನ್ ಜೈಲಿನಲ್ಲಿ ಕುಗ್ಗಿ ಹೋಗಿದ್ದಾರೆ. ಪುಸ್ತಕ ಓದಿದ ಬಳಿಕ ದರ್ಶನ ಮಾನಸಿಕವಾಗಿ ಬಲಗೊಳ್ಳುತ್ತಾರೆ. ಸುಮಾರು 200 ರಿಂದ 250 ಪುಟಗಳ ಪುಸ್ತಕ ಅದು. ಸಿದ್ದಾರೂಢರು ನಡೆದುಬಂದ ದಾರಿಯನ್ನು ಪುಸ್ತಕ ಒಳಗೊಂಡಿದೆ. ಪುಸ್ತಕ ಓದಿ ಖಂಡಿತ ದರ್ಶನ ಬದಲಾವಣೆ ಆಗುತ್ತಾರೆ ಎಂಬ ನಿರೀಕ್ಷೆ ಇದೆ’ ಎಂದಿದ್ದಾರೆ
2011 ರಲ್ಲಿ ನಟ ದರ್ಶನ್ ಐತಿಹಾಸಿಕ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ್ದರು. ಆಗ ಸಿದ್ಧಾರೂಢರ ಬಗ್ಗೆ ಕೇಳಿ ತಿಳಿದುಕೊಂಡಿದ್ದರು. ಅದೇ ಕಾರಣಕ್ಕೆ ಈಗ ದರ್ಶನ್‌ಗೆ ಸಿದ್ಧಾರೂಢರ ಚರಿತ್ರೆ ಪುಸ್ತಕವನ್ನು ಕಳಿಸಿಕೊಡಲಾಗಿದೆ. ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿರುವ ಫೋಟೋ ಹಾಗೂ ಪೋಸ್ಟ್ ಮಾಡಿರುವ ಕವರ್ ಕೂಡ ಇದೀಗ ವೈರಲ್ ಆಗುತ್ತಿದೆ.
ನಟ ದರ್ಶನ್ ಮನೆಯೂಟ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಆ.20ಕ್ಕೆ ಮುಂದೂಡಿದೆ. ಹೀಗಾಗಿ ಇನ್ನೂ 21 ದಿನ ದರ್ಶನ್‌ಗೆ (Actor Darshan) ಜೈಲೂಟವೇ ಗತಿಯಾಗಿದೆ. ಹೈಕೋರ್ಟ್ ನ್ಯಾ. ನಾಗಪ್ರಸನ್ನ ಅವರಿದ್ದ ಪೀಠ ಅರ್ಜಿ ವಿಚಾರಣೆ ನಡೆಸಿದ್ದು, ಸರ್ಕಾರ ಮತ್ತು ಪೊಲೀಸರಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ, ಅರ್ಜಿ ವಿಚಾರಣೆಯನ್ನು ಮುಂದೂಡಿದೆ.
ಇದನ್ನೂ ಓದಿ: Kannada New Movie: `ನೈಸ್ ರೋಡ್’ ಸಿನಿಮಾಗೆ ನೋಟಿಸ್ ; ಅಷ್ಟಕ್ಕೂ ಆಗಿದ್ದೇನು?
ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆದಿದ್ದು, ದರ್ಶನ್ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು. ಕರ್ನಾಟಕ ಕಾರಾಗೃಹಗಳ ಕಾಯ್ದೆ ಓದುತ್ತಾ ವಾದ ಮಂಡಿಸಿದ ಪ್ರಭುಲಿಂಗ ನಾವದಗಿ ಅವರು, ಮ್ಯಾನ್ಯುವಲ್ ಪ್ರಕಾರ ವಿಚಾರಣಾಧೀನ ಕೈದಿಗೆ ಸ್ವಂತ ಖರ್ಚಿನಲ್ಲಿ ಖಾಸಗಿ ಊಟ ಪಡೆಯೋದಕ್ಕೆ ಅವಕಾಶ ಇದೆ. ಅಧೀನ ನ್ಯಾಯಾಲಯ ಇಲ್ಲಿ ಆ್ಯಕ್ಟ್‌ಗಿಂತ ಮ್ಯಾನ್ಯುಯಲ್ ಬಗ್ಗೆ ಪರಿಗಣಿಸಿದೆ. ಕರ್ನಾಟಕ ಪ್ರಿಸನ್ಸ್ ಆ್ಯಕ್ಟ್ 1963 ಅನ್ನು ಪರಿಗಣಸಿಯೇ ಇಲ್ಲ. ಸೆಕ್ಷನ್ 30ರಡಿಯಲ್ಲಿ ಮನೆ ಊಟ ಪಡೆಯಲು ಅವಕಾಶ ಇದೆ ಎಂದು ತಿಳಿಸಿದರು.