Site icon Vistara News

Actor Darshan: ದರ್ಶನ್‌ ನನ್ನ ಊಟದ ತಟ್ಟೆ ತೊಳೆದು ಚಪ್ಪಲಿ ತೆಗೆದಿಟ್ಟಿದ್ರು; ʻದಚ್ಚುʼ ಸರಳತೆ ಬಗ್ಗೆ ಉಮಾಪತಿ ಹೇಳಿಕೆ ವೈರಲ್‌!

Actor Darshan simplicity talk by umapathy old video goes viral

ಬೆಂಗಳೂರು: ದರ್ಶನ್‌ ಅರೆಸ್ಟ್‌ (Actor Darshan) ಆದ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಅವರು ದರ್ಶನ್‌ ಕುರಿತಾಗಿ ಸಾಕಷ್ಟು ಹೇಳಿಕೆ ಜತೆಗೆ ಪೋಸ್ಟ್‌ ಕೂಡ ಮಾಡಿದ್ದರು. ʻನಮ್ಮ ಚಟ, ಚಟ್ಟ ಹತ್ತಿಸುವರೆಗೂ ಇರಬಾರದು. ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆʼಎಂದು ದರ್ಶನ್‌ ಕುರಿತಾಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದರು. ಈ ಮುಂಚೆ ದರ್ಶನ್‌ ಅವರು ಉಮಾಪತಿಗೆ ʻತಗಡುʼ ಎಂದಿದ್ದಕ್ಕೆ ಉಮಾಪತಿ ಪರೋಕ್ಷವಾಗಿ ಪೋಸ್ಟ್‌ ಮೂಲಕ ತಿರುಗೇಟು ಕೊಟ್ಟಿದ್ದರು. “ತಾಳ್ಮೆ ಕೆಲವೊಮ್ಮೆ ಶಕ್ತಿ” ಎಂದು ವಿಡಿಯೊ ಪೋಸ್ಟ್ ಮಾಡಿದ್ದರು. ಇದಾದ ಬಳಿಕ ʻಡಿ ಬಾಸ್‌ʼ ಫ್ಯಾನ್ಸ್‌ ಉಮಾಪತಿ ಅವರು ದರ್ಶನ್‌ ಕುರಿತಾದ ಹೇಳಿಕೆಗೆ ಕ್ಲಾಸ್‌ ತೆಗೆದುಕೊಂಡಿದ್ದೂ ಉಂಟು. ಇದೀಗ ದರ್ಶನ್ ಜತೆಗೆ ಒಡನಾಟದಲ್ಲಿದ್ದ ಮುಂಚಿನ ಸಂದರ್ಭದಲ್ಲಿ ಉಮಾಪತಿ ಮಾತನಾಡಿರುವ ವಿಡಿಯೊ ಹಾಗೂ ಹೇಳಿಕೆಗಳು ವೈರಲ್‌ ಆಗುತ್ತಿವೆ.

‘ಉಪಾಧ್ಯಕ್ಷ’ ಸಿನಿಮಾ ಬಿಡುಗಡೆ ಸಮಯದಲ್ಲಿ ಉಮಾಪತಿ ಶ್ರೀನಿವಾಸ್ ಸಂದರ್ಶನ ನೀಡಿದ್ದರು. ಅದರಲ್ಲಿ ದರ್ಶನ್ ಸರಳ, ಸಜ್ಜನಿಕೆ ಬಗ್ಗೆ ಉಮಾಪತಿ ಮಾತನಾಡಿದ್ದರು.

ಮಾಧ್ಯಮವೊಂದರ ಸಂದರ್ಶನದಲ್ಲಿ ಉಮಾಪತಿ ಮಾತನಾಡಿ ʻರಾಬರ್ಟ್‌ ಸಿನಿಮಾದಲ್ಲಿ ದರ್ಶನ್‌ ಜತೆ ಕೆಲಸ ಮಾಡುವಾಗ , ಒಳ್ಳೆಯ ಸಮಯ ಕಳೆದಿದ್ದೆವು. ರಾಮೋಜಿ ಫಿಲ್ಮಿಸಿಟಿಯಲ್ಲಿ ಊಟಕ್ಕೂ ಮುಂಚೆ ನಮ್ಮ ತಟ್ಟೆಯನ್ನು ತೊಳೆದುಕೊಂಡು ಬರುತ್ತಿದ್ದರು. ಒಮ್ಮೆ ನನ್ನ ಚಪ್ಪಲಿ ಸೋಫಾ ಕೆಳಗೆ ಹೋಗಿತ್ತು. ನನ್ನನ್ನು ಕೈ ತೊಳೆದುಕೊಂಡು ಬರಲು ಹೇಳಿ, ನೀವು ನಂಬಲ್ಲ ನನ್ನ ಚಪ್ಪಲಿ ತೆಗೆದು ಅಲ್ಲಿಟ್ಟಿದ್ದರು. ಆದರೆ ಅಂತಹ ವ್ಯಕ್ತಿ ಈ ರೀತಿ ಮಾಡಿದ್ರಲ್ಲ ಎನ್ನುವ ಬೇಜಾರಷ್ಟೇ. ಏನೇ ಸಮಸ್ಯೆ ಬಂದರೂ, ನಿರ್ಮಾಪಕರೇ ಏನೋ ಆಯ್ತಂತೆ. ನಾನು ಇದ್ದೀನಿ ತಲೆ ಕೆಡಿಸಿಕೊಳ್ಳಬೇಡಿ ಎನ್ನುತ್ತಿದ್ದರುʼʼಎಂದಿದ್ದರು. ನನ್ನ ತಾಯಿ ಯಾವಾಗಲೂ ಹೇಳೋರು. ದೇವರ ಏಟು ತಡೆದುಕೊಳ್ಳಬಹುದು . ಮನುಷ್ಯರ ಕಣ್ಣೇಟು ತಡೆದುಕೊಳ್ಳುವುದು ಕಷ್ಟ ಅಂತ. ಯಾವುದೋ ಒಂದು ಘಟನೆಯಿಂದ ದರ್ಶನ್‌ ಅವರ ಮೇಲಿನ ನಂಬಿಕೆ ಕಡಿಮೆ ಆಗುವುದಿಲ್ಲ. ನಮ್ಮಿಬ್ಬರ ನಡುವೆ ತಂದಿಟ್ಟು ತಮಾಷೆ ನೋಡುತ್ತಿದ್ದಾರೆ ಎಂದು ಸಾಕಷ್ಟು ಬಾರಿ ಅನಿಸಿದೆ. ನಾವು ಮುಂದೊಂದು ದಿನ ಒಟ್ಟಿಗೆ ಇರಬಹುದುʼʼಎಂದಿದ್ದರು. ಆದರೀಗ ಉಮಾಪತಿ ದರ್ಶನ್‌ ಕೇಸ್‌ ಬಗ್ಗೆ ನೇರನೇರವಾಗಿ ಹೇಳಿಕೆ ನೀಡುತ್ತಿದ್ದಾರೆ.

ಇದನ್ನೂ ಓದಿ: Actor Darshan: ದರ್ಶನ್ ಬಗ್ಗೆ ಮಾತನಾಡಿದ್ದಕ್ಕೆ ಜೀವ ಬೆದರಿಕೆ; ಪೊಲೀಸರಿಗೆ ನಟ ಪ್ರಥಮ್‌ ದೂರು

ದರ್ಶನ್‌ ಉಮಾಪತಿಗೆ ವಾರ್ನಿಂಗ್‌ ನೀಡಿದ್ದೇನು?

ಈ ಹಿಂದೆ ಉಮಾಪತಿ ಅವರು ಕಾಟೇರ ಟೈಟಲ್‌ ನಾನೇ ಕೊಟ್ಟಿದ್ದು ಎಂದು ಹಲವಾರು ಸಂದರ್ಶನಗಳಲ್ಲಿ ಹೇಳಿದ್ದರು. ದರ್ಶನ್‌ ಈ ಬಗ್ಗೆ ಮಾತನಾಡಿ ʻʻತಗಡೇ, ರಾಬರ್ಟ್‌ ಕಥೆ ನಿನಗೆ ಕೊಟ್ಟಿದ್ದು ನಾವು. ಇಂಥ ಒಳ್ಳೆ ಕಥೆ ಮತ್ತೆ ಯಾಕ್‌ ಬಿಟ್ಟೆ ನೀನು?ʼʼ ಎಂದು ವೇದಿಕೆ ಮೇಲೆಯೇ ಉಮಾಪತಿಗೆ ಪ್ರಶ್ನೆ ಮಾಡಿದ್ದರು. ʻಈ ಕಥೆ ನಾನು ಮಾಡಿಸಿದೆ, ಕಥೆ ನಾನು ಕೊಟ್ಟೆ ಎಂದು ಎಂದು ಹೇಳಿಕೊಂಡು ಬಂದಿದ್ದೆಯಲ್ವಾ?ಇಂಥ ಒಳ್ಳೆ ಕಥೆ ಯಾಕೆ ಬಿಟ್ಟೆ ನೀನು. ಅಯ್ಯೋ ತಗಡೇ… ಎಲ್ಲ ಆಧಾರ ಇಟ್ಟುಕೊಂಡೇ ಮಾತನಾಡಬೇಕುʼʼ ಎಂದು ಉಮಾಪತಿಗೆ ನೇರವಾಗಿ ದರ್ಶನ್‌ ಖಡಕ್ ವಾರ್ನಿಂಗ್ ಕೊಟ್ಟಿದ್ದರು.

Exit mobile version