ಬೆಂಗಳೂರು: ಕನ್ನಡ ಸಿನಿಮಾರಂಗದ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಾಲ್ ವಿವಾಹಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಈಗಾಗಲೇ ಈ ಜೋಡಿ ಇಡೀ ಚಿತ್ರರಂಗ ಹಾಗೂ ಸ್ನೇಹಿತರು ಮತ್ತು ಸಂಬಂಧಿಕರಿಗೆ ತಮ್ಮ ವಿವಾಹದ ಇನ್ವಿಟೇಷನ್ ಕೊಟ್ಟು ತಮ್ಮ ಮದುವೆಗೆ ಆಹ್ವಾನ ಮಾಡಲು ಶುರು ಮಾಡಿದ್ದಾರೆ.
ಸಿನಿಮಾದಲ್ಲಿ ಸದಾ ಸರ್ಪ್ರೈಸ್ ಪ್ಲ್ಯಾನ್ ಮಾಡಿ ಪ್ರೇಕ್ಷಕರನ್ನ ಖುಷಿ ಪಡಿಸುವ ನಿರ್ದೇಶಕ ತರುಣ್ ತಮ್ಮ ಮದುವೆ ಇನ್ವಿಟೇಷನ್ ಅನ್ನು ಸೂಪರ್ ಆಗಿಯೇ ಪ್ಲಾನ್ ಮಾಡಿದ್ದಾರೆ. ವಿವಾಹದ ಬಗ್ಗೆ ಮಾಹಿತಿ ನೀಡಲು ಈ ದಂಪತಿ ಸುದ್ದಿಗೋಷ್ಠಿ ಕರೆದಿದ್ದಾರೆ. ದರ್ಶನ್ (Actor Darshan) ಕುರಿತಾಗಿಯೂ ಜೋಡಿ ಮಾಹಿತಿ ಹಂಚಿಕೊಂಡಿತು.
ಸೋನಲ್ ಮಾತನಾಡಿ ʻʻದರ್ಶನ್ ಅವರನ್ನ ಜೈಲಿನಲ್ಲಿ ನೋಡೋಕೆ ನನಗೆ ಮನಸಿಲ್ಲ. ದರ್ಶನ್ ಅವರನ್ನು ಬೇರೆ ರೀತಿ ನಾನು ನೋಡಿದೀನಿ. ಜೈಲಿಗೆ ಹೋಗಿ ಮದುವೆ ಆಹ್ವಾನ ಕೊಡೋದು ನನಗೆ ಸರಿ ಅನ್ನಿಸ್ಲಿಲ್ಲ. ಹಾಗಾಗಿ ದರ್ಶನ್ ಅವರನ್ನ ನಾನಿನ್ನು ಭೇಟಿ ಮಾಡಿಲ್ಲʼʼಎಂದರು.
ತರುಣ್ ಸುಧೀರ್ ಮಾತನಾಡಿ ʻʻಮದುವೆ ಡೇಟ್ ಮುಂದಕ್ಕೆ ಹಾಕ್ಬೇಡ ಅಂತ ದರ್ಶನ್ ಅವರೇ ಹೇಳಿದ್ದು. ಇದೆ ಡೇಟ್ ಅಲ್ಲಿ ಮದುವೆ ಆಗಿ ಅಂತ ದರ್ಶನ್ ಸಲಹೆ ನೀಡಿದ್ರು. ಅವರ ಒಪ್ಪಿಗೆಯಿಂದ ಮದುವೆ ಡೇಟ್ ಅನೌನ್ಸ್ ಮಾಡಿದ್ದುʼʼಎಂಂದರು.
ಇದನ್ನೂ ಓದಿ: Kannada New Movie: ʻಟೆನೆಂಟ್’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಔಟ್; ಸೋನು ಗೌಡ ನಾಯಕಿ!
ತರುಣ್ ಬಗ್ಗೆ ಸೋನಲ್ ಮಾತನಾಡಿ ʻʻತರುಣ್ ಜೆಂಟಲ್ ಮ್ಯಾನ್, ಅಹಂಕಾರ ಇಲ್ಲ. ನಾನು ಯೋಚಿಸೋದು ಕಡಿಮೆ. ಗೈಡ್ ಮಾಡೋರು ಬೇಕಿತ್ತು ತರುಣ್ ಸಿಕ್ಕಿದ್ದಾರೆ. ಹೀಗೆ ಮದುವೆ ಆಗ್ಬೇಕು ಅಂತ ಯಾವತ್ತೂ ಡ್ರೀಮ್ ಮಾಡಿಲ್ಲʼʼಎಂದರು. ಅದೇ ರೀತಿ ತರುಣ್ ಕೂಡ ಮಾತನಾಡಿ ʻ ಸೋನಲ್ ಮೈಂಡ್ ಸೆಟ್ ನನಗಿಷ್ಟ. ಕಲ್ಮಶ ಇಲ್ಲದೆ ಇರೋ ಹುಡುಗಿ. ತುಂಬಾ ಚೆನ್ನಾಗಿ ಅಡುಗೆ ಮಾಡ್ತಾರೆ. ಫೋನ್ ಮಾಡಿದಾಗೆಲ್ಲಾ ಅಡುಗೆ ಮನೇಲಿ ಇದೀನಿ ಅಂತಿರ್ತಾರೆ. ಈ ಸಮಯದಲ್ಲಿ ದರ್ಶನ್ ಅವರನ್ನ ತುಂಬಾ ಮಿಸ್ ಮಾಡ್ಕೋತೀವಿ ಅವರ ಮೇಲೆ ಗೌರವ, ಪ್ರೀತಿ ಹಾಗೆ ಇದೆ. ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರಿಗೂ ಆಹ್ವಾನ ಕೊಟ್ಟಿದಿವಿ. ಬೇರೆ ಇಂಡಸ್ಟ್ರಿಯಲ್ಲಿ ಜಗಪತಿ ಬಾಬು, ಸೇರಿದಂತೆ ಹಲವು ಕಲಾವಿದರಿಗೆ ಆಹ್ವಾನ ಕೊಟ್ಟಿದ್ದೇವೆʼʼಎಂದರು.
ಇನ್ನು ಸೋನಲ್ ಮಾತನಾಡಿ ʻʻಎಲ್ಲರೂ ಇಬ್ಬರ ಪೇರ್ ಚೆನ್ನಾಗಿದೆ ಎಂದು ಹೇಳಿದ್ದಕ್ಕೆ ಮದುವೆಗೆ ಒಪ್ಪಿಕೊಂಡ್ವಿ. ಮದುವೆ ನಂತರ ಚಿಕ್ಕ ಬ್ರೇಕ್ ತಗೋತೀನಿ. ಈಗ ಸೈನ್ ಮಾಡಿರೋ ಸಿನಿಮಾಗಳನ್ನ ಮುಗಿಸುತಿದ್ದೀನಿʼʼಎಂದರು.