ಬೆಂಗಳೂರು: ರೇಣುಕಾ ಸ್ವಾಮಿ (Actor Darshan) ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ರಹಸ್ಯದ ಒಂದೊಂದು ವಿಚಾರ ಬಗೆದಷ್ಟು ಬಯಲಾಗುತ್ತಿದೆ. ಈಗಾಗಲೇ ದರ್ಶನ್ ನ್ಯಾಯಾಂಗ ಬಂಧನಲ್ಲಿದ್ದಾರೆ. ನಟ ದರ್ಶನ್ ಸೇರಿ ಹಲವು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಜುಲೈ 18ರವರೆಗೆ ವಿಸ್ತರಣೆ ಮಾಡಲಾಗಿದೆ. ಇದೀಗ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೆ ಹೊಸ ಮಾಹಿತಿ ಸಿಕ್ಕಿದೆ.
ರೇಣುಕಾ ಸ್ವಾಮಿ ಹತ್ಯೆಯಾದ ದಿನ ಶೆಡ್‌ಗೆ ಬಂದಿದ್ದ ದರ್ಶನ್ ಬಳಿಕ ಸೀದಾ ಆರ್ ಆರ್ ನಗರ ಮನೆಗೆ ಹೋಗಿದ್ದರು. ವಿನಯ್ ಮತ್ತು ಟೀಂ ಪಾರ್ಟಿಗೆ ಎಂದು ಸ್ಟೋನಿಬ್ರೂಕ್‌ಗೆ ಹೋಗಿದ್ದರು. ಆ ಬಳಿಕ ಪಟ್ಟಣಗೆರೆ ಶೆಡ್ ನಿಂದ ಮತ್ತೊಮ್ಮೆ ದರ್ಶನ್‌ಗೆ ಫೋನ್ ಬಂದಿದೆ. ʻನೀವು ಹಲ್ಲೆ ಮಾಡಿದ್ದ ವ್ಯಕ್ತಿ ಸತ್ತೋಗ್ಬಿಟ್ಟಿದ್ದಾನೆ ಬೇಗ ಬನ್ನಿʼ ಎಂದು ದರ್ಶನ್ ಟೀಂ ಕರೆ ಮಾಡಿದ್ದಾರೆ. ಬಳಿಕ ಪಾರ್ಟಿಯಿಂದ ನೇರವಾಗಿ ವಿನಯ್ ತಂಡ ಶೆಡ್‌ಗ ಬಂದಿದೆ. ರೇಣುಕಾಸ್ವಾಮಿ ಮೃತಪಟ್ಟಿದ್ದು ನೋಡಿ ಒಂದು ಕ್ಷಣ ಶಾಕ್ ಆಗಿದ್ದಾರೆ. ಬಳಿಕ ಆರೋಪಿ ಪವನ್ ಎಂಬಾತ ದರ್ಶನ್‌ಗೆ ಫೋನ್ ಮಾಡುವಂತೆ ಹೇಳಿದ್ದಾನೆ. ʻಫೋನ್ ಏನು ಬೇಡʼ ಎಂದು ನೇರವಾಗಿ ಮಧ್ಯಾರಾತ್ರಿ ಏಕಾಏಕಿ ದರ್ಶನ್ ಮನೆಗೆ ವಿನಯ್ ಟೀಂ ಹೋಗಿದೆ. ದರ್ಶನ್‌ಗೆ ಈ ವಿಚಾರವನ್ನು ಹೇಳುತ್ತಿದ್ದಂತೆ ಒಂದು ಕ್ಷಣ ಗಾಬರಿಯಾಗಿದ್ದಾರೆ. ಶಾಕ್ ಆಗಿ ತಲೆ ಮೇಲೆ ಕೈ ಇಟ್ಟುಕೊಂಡು ಗ್ಯಾಂಗ್ ಮೇಲೆ ಕೂಗಾಡಿದ್ದಾರೆ. ಆರೋಪಿಗಳು, ತಮ್ಮ ಬಾಸ್ ರೊಚ್ಚಿಗೆದ್ದಂತೆ ʻಏನ್ ಆಗಲ್ಲ ಬಾಸ್, ನಾವ್ ನೋಡ್ಕೋತೀವಿʼ ಅಂದಿದ್ರಂತೆ. ಬಳಿಕ ಶೆಡ್ ಬಳಿ ಹೋಗದೇ ದರ್ಶನ್ ಮನೆಯಲ್ಲಿಯೇ ಉಳಿದಿದ್ದಾರೆ.
ವಿನಯ್ ,ಪ್ರದೂಶ್ ಸೇರಿ ಉಳಿದ ಆರೋಪಿಗಳು ಶೆಡ್‌ಗೆ ಶವ ಲೇವಾರಿ ಪ್ಲಾನ್ ಮಾಡಿದ್ದಾರೆ. ಆ ಸಮಯದಲ್ಲಿ ವಾಟ್ಸ್ ಅಪ್ ಕರೆಗಳ ಮೂಲಕ ಮೃತದೇಹ ವಿಲೇವಾರಿ ಹಾಗೂ ಶರಣಾಗತಿ ಹಾಗೂ ಹಣಕಾಸಿನ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಬೆಳಗ್ಗೆ ಪತ್ನಿ ಮನೆಯಲ್ಲಿ ಹೋಮ ಪೂಜೆ ಮುಗಿಸಿ ದರ್ಶನ್ ಮೈಸೂರಿಗೆ ಹೋಗಿದ್ರು. ಜತೆಗ ಡ್ರೈವರ್ ಮತ್ತು ನಾಗರಾಜ್ ಕೂಡಾ ಹೋಗಿದ್ದ. ಸಿನಿಮಾ ಶೂಟಿಂಗ್ ಅಂತ ಒಬ್ಬರೇ ಹೋಟೆಲ್‌ನಲ್ಲಿ ಉಳಿದಕೊಂಡು ನಾಗರಾಜ್ ಮೂಲಕ ದರ್ಶನ್ ಮಾಹಿತಿ ಪಡೆಯುತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಇದನ್ನೂ ಓದಿ: Actor Darshan:ದರ್ಶನ್ ಹೊರಗೆ ಯಾವಾಗ ಬರ್ತಾರೆ? ವಿದ್ಯಾ ಶಂಕರಾನಂದ ಸರಸ್ವತಿ ಭವಿಷ್ಯ ಏನು?
ದರ್ಶನ್ ಬಳಸುತ್ತಿದ್ದ ಸಿಮ್ ಸೀಕ್ರೆಟ್ ರಿವೀಲ್
ಪೊಲೀಸ್ ತನಿಖೆ ವೇಳೆ ಆರೋಪಿಗಳು ಬೇರೊಬ್ಬರ ಸಿಮ್ ಕಾರ್ಡ್ ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. ಮಾಹಿತಿ ಸಂಗ್ರಹಿಸಿ ಪರಿಶೀಲನೆ ವೇಳೆ ಸಿಮ್ ಕಾರ್ಡ್ ರಹಸ್ಯ ಬಯಲಾಗಿದೆ. ಹೇಮಂತ್ ಹೆಸರಿನಲ್ಲಿರುವ ಸಿಮ್‌ವನ್ನು ದರ್ಶನ್ ಬಳಸುತ್ತಿದ್ದರೆ, ಪವಿತ್ರಗೌಡ ಅವರು ಮನೋಜ್ ಹೆಸರಿನಲ್ಲಿದ್ದ ಸಿಮ್ ಬಳಸುತ್ತಿದ್ದರು. ಆರೋಪಿ ನಂದೀಶ್ ಅವರು ಹೇಮಂತ್ ಹೆಸರಿನಲ್ಲಿ, ಆರೋಪಿ ಪ್ರದ್ಯೂಷ್ ಖಾಸಗಿ ಕಂಪನಿ ಸೀನಿಯರ್ ಮ್ಯಾನೇಜರ್ ಹೆಸರಿನಲ್ಲಿ, ಆರೋಪಿ ಕಾರ್ತಿಕ್ ಅವರು ವೇಲು ಎಂಬಾತನ ಹೆಸರಲ್ಲಿ, ಕೇಶವಮೂರ್ತಿ ಅರು ಪ್ರಜ್ಞಾ ಎಂ ಹೆಸರಲ್ಲಿ, ನಿಖಿಲ್ ನಾಯಕ್ ಅವರು ಗೀತಾ ಹೆಸರಲ್ಲಿ ಸಿಮ್ ಬಳಕೆ ಮಾಡುತ್ತಿರುವುದಾಗಿ ತನಿಖೆ ವೇಳೆ ತಿಳಿದು ಬಂದಿದೆ.