ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ (Actor Darshan) ಅವರು ನ್ಯಾಯಾಗ ಬಂಧನದಲ್ಲಿದ್ದಾರೆ. ಈಗಾಗಲೇ ದರ್ಶನ್ ಅವರಿಗೆ ಜಾಮೀನು ಸಿಗುವುದಂತೂ ಕಷ್ಟಕರ ಎನ್ನಲಾಗುತ್ತಿದೆ. ಇದರ ಜತೆಗೆ ಇದೀಗ ಈ ವರ್ಷ ಅಪಾಯ ಇದೆ ಎನ್ನುವುದು ದರ್ಶನ್ಗೆ ಮೊದಲೇ ಗೊತ್ತಿತ್ತ ಎನ್ನುವ ಪ್ರಶ್ನೆ ಮೂಡಿದೆ. 13 ವರ್ಷಗಳಿಂದ ದಚ್ಚುಗೆ ಸಾಡೇಸಾತಿ ಕಾಟ ಇತ್ತು ಎನ್ನಲಾಹಿದೆ. ಸಾಡೇಸತಿ ಶುರುವಾದಗಲೂ ಸೆರೆವಾಸ ಅನುಭವಿಸಿದ್ದ ದಾಸ ಇದೀಗ ಸಾಡೇಸತಿ ಮುಗಿಯುವ ಸಮಯದಲ್ಲಿ ದರ್ಶನ್ ಜೈಲು ಪಾಲು ಆಗಿದ್ದಾರೆ ಎನ್ನಲಾಗಿದೆ.
ಎರಡು ತಿಂಗಳ ಹಿಂದೆ ನಟ ದರ್ಶನ್ ಸುದರ್ಶನ ಹೋಮ ಮಾಡಿಸಿದ್ದರು. ಅರೆಸ್ಟ್ ಆಗುವುದಕ್ಕೂ ಮುನ್ನ ಅವರು ಮನೆಯನ್ನು ಹೊಸದಾಗಿ ರಿನೋವೇಷನ್ ಮಾಡಿದ್ದರು. ಹೀಗಾಗಿ, ಅವರು ವಿಶೇಷ ಪೂಜೆ ಇಟ್ಟುಕೊಂಡಿದ್ದರು. ಈ ಕಾರಣದಿಂದಲೇ ವಿಜಯಲಕ್ಷ್ಮಿ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಕೊಲೆ ನಡೆದ ಬಳಿಕ ದರ್ಶನ್ ಪೂಜೆಯಲ್ಲಿ ಭಾಗಿ ಆಗಿದ್ದರು.
ನಕಾರಾತ್ಮಕ ಅಂಶಗಳನ್ನ ನಾಶಮಾಡಲು ಸುದರ್ಶನ ಹೋಮ ಮಾಡಿಸಲಾಗುತ್ತೆ, ಶತ್ರುಗಳ ಮೇಲೆ ವಿಜಯ ಪ್ತಾಪ್ತಿಗೆ, ದುಷ್ಟ ಕಣ್ಣಿನಿಂದ ರಕ್ಷಣೆಗೆ ಈ ಹೋಮ ಮಾಡಲಾಗುತ್ತದೆ. ಹೀಗಾಗಿ ಡೆವಿಲ್ ಶೂಟಿಂಗ್ ನಲ್ಲೂ ಹೈ ಆಕ್ಷನ್ ಸೀನ್ ಇಡದಂತೆ ಮಿಲನಾ ಪ್ರಕಾಶ್‌ಗೆ ದರ್ಶನ್ ಆಪ್ತರು ಹೇಳಿದ್ದರಂತೆ. ಇಷ್ಟು ಜಾಗ್ರತೆ ವಹಿಸಿದ್ದರೂ ಸಿನಿಮಾ ಮಾಡುವಾಗ ಎಡಗೈಗೆ ಪ್ರ್ಯಾಕ್ಚರ್ ಆಗಿತ್ತು ಎನ್ನಲಾಗಿದೆ. 2017-18ರಿಂದ ದರ್ಶನ್ ಅವರಿಗೆ ಸಾಡೇ ಸಾತಿ ಇದೆ. ಜೂನ್-ನವೆಂಬರ್ 15ವರೆಗೆ ಅವರು ಮತ್ತಷ್ಟು ತೊಂದರೆ ಅನುಭವಿಸಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Kalki 2898 AD: ʻಕಲ್ಕಿʼ ಸಿನಿಮಾ ಹಾಡಿ ಹೊಗಳಿದ ರಾಕಿಂಗ್ ಸ್ಟಾರ್ ಯಶ್!
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು (Parappana Agrahara) ಸೇರಿರುವ ನಟ ದರ್ಶನ್ (Actor Darshan) ಅವರಿಗೆ ಜೈಲಿನ ಮೆನು ಪ್ರಕಾರವೇ ಊಟ ನೀಡಲಾಗುತ್ತಿದೆ. ಅದರಂತೆ, ಶುಕ್ರವಾರ (ಜೂನ್ 28) ರಾತ್ರಿ ದರ್ಶನ್ ಅವರಿಗೆ ಚಿಕನ್ ಸಾಂಬಾರ್, ಮುದ್ದೆ ಹಾಗೂ ಅನ್ನವನ್ನು ನೀಡಲಾಗಿದೆ. ಜೈಲಿನ ಅನ್ನ-ಸಾಂಬಾರ್ ತಿಂದು ಬಸವಳಿದಿದ್ದ ದರ್ಶನ್ ಅವರಿಗೆ ಚಿಕನ್ ಸಾಂಬಾರ್ ನೀಡಿರುವುದು ತುಸು ಸಮಾಧಾನ ತಂದಿದೆ. ಮುದ್ದೆ, ಚಿಕನ್ ಸಾಂಬಾರ್ ಸೇವಿಸಿದ ದರ್ಶನ್ ತಡವಾಗಿ ನಿದ್ದೆಗೆ ಜಾರಿದರು ಎಂದು ತಿಳಿದುಬಂದಿದೆ.
ಶನಿವಾರ (ಜೂನ್ 29) ಬೆಳಗ್ಗೆ 6 ಗಂಟೆಗೆ ಎದ್ದ ದರ್ಶನ್, ಕೆಲಹೊತ್ತು ಜೈಲಿನ ಕೊಠಡಿಯಲ್ಲಿಯೇ ವಾಕಿಂಗ್ ಮಾಡಿದರು. ಇದರ ಮಧ್ಯೆಯೇ, ಪದೇಪದೆ ಅನಾರೋಗ್ಯದ ನೆಪ ಹೇಳಿ ಜೈಲು ಆಸ್ಪತ್ರೆ ಕಡೆ ಸುಳಿಯುತ್ತಿದ್ದು, ಜೈಲಧಿಕಾರಿಗಳಿಗೆ ನಟ ತಲೆನೋವಾಗಿದ್ದಾರೆ. ಹೊಟ್ಟೆ ನೋವು, ತಲೆನೋವು ಸೇರಿ ಹಲವು ನೆಪಗಳನ್ನು ಹೇಳಿಕೊಂಡು ಅವರು ಆಸ್ಪತ್ರೆಗೆ ಹೋಗುತ್ತಿದ್ದಾರೆ. ಇದರ ಮಧ್ಯೆಯೇ, ನಟ ದರ್ಶನ್ ಅವರನ್ನು ನೋಡಲು ಜೈಲಿನಲ್ಲಿರುವ ಕೈದಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ಕೂಡ ತಿಳಿದುಬಂದಿದೆ.