Site icon Vistara News

Actor Darshan: ಲಾರಿಗೆ ತಲೆಯನ್ನು ಬಡಿದು ಸಿನಿಮಾ ಶೈಲಿಯಲ್ಲೇ ರೇಣುಕಾ ಸ್ವಾಮಿ ಕೊಲೆ ಮಾಡಿದ್ದ ದರ್ಶನ್ ಗ್ಯಾಂಗ್​!

Actor Darshan The murder was done by team in the style movie

ಬೆಂಗಳೂರು: ದರ್ಶನ್ ಗ್ಯಾಂಗ್ನ (Actor Darshan) ಅಮಾನುಷ ಕೃತ್ಯಕ್ಕೆ ಬಲಿಯಾದ ರೇಣುಕಾ ಸ್ವಾಮಿ ಪ್ರಕರಣ ಥೇಟ್‌ ಸಿನಿಮಾ ಮಾದರಿಯಲ್ಲಿಯೇ ನಡೆದಿದೆ. ಪೊಲೀಸರ ಮುಂದೆ ಆರೋಪಿಗಳು ಕೊಲೆ ಮಾಡಿದ್ದು ಹೇಗೆ ಎಂಬುದನ್ನು ವಿವರಸಿದ್ದಾರೆ. ಪೊಲೀಸರು ಸತತ ಪ್ರಶ್ನೆಗಳು ಹಾಗೂ ಕೆಂಗಣ್ಣನ್ನು ಎದುರಿಸಲಾಗದ ಆರೋಪಿಗಳು ಕೊಲೆ ಮಾಡಿರುವ ಪ್ರತಿ ಕ್ಷಣವನ್ನೂ ವಿವರಿಸಿದ್ದಾರೆ.

ಪೊಲೀಸರ ಲಾಠಿ ಏಟು ರುಚಿ ತಿನ್ನುತ್ತಿದ್ದಂತೆ ಆರೋಪಿಗಳು ಹೇಳಿಕೆ ನೀಡಿದ್ದು ಹೀಗೆ. ʻʻಮೊದಲಿಗೆ ದರ್ಶನ್‌ ಅವರು ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ದರ್ಶನ್‌ ಅವರು ರೇಣುಕಾ ಸ್ವಾಮಿಯನ್ನು ಜೋರಾಗಿ ತಳ್ಳಿದ್ದರು. ಇದರಿಂದಾಗಿ ಶೆಡ್‌ನಲ್ಲಿದ್ದ ಲಾರಿಗೆ ರೇಣುಕಾಸ್ವಾಮಿ ತಲೆ ತಾಗಿ ಆತ ಅಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದ. ಆಗ ದರ್ಶನ್‌ ಹಾಗೂ ಪವಿತ್ರಾ ಇಬ್ಬರೂ ಅಲ್ಲಿದ್ದರು. ಆ ಬಳಿಕ ದರ್ಶನ್‌ ಮತ್ತು ಪವಿತ್ರಾ ಮನೆಗೆ ಹೋಗಿದ್ದರು. ನಾವು ಮತ್ತೆ ರೇಣುಕಾ ಸ್ವಾಮಿಗೆ ಹೊಡೆದೆವು. ರೇಣುಕಾ ಸ್ವಾಮಿ ಕಾಲು ಹಿಡಿದು ಕಾಂಪೌಂಡ್‌ಗೆ ಬಡಿದೆವು. ಆಗ ರೇಣುಕಾಸ್ವಾಮಿ ಸ್ಥಳದಲ್ಲೇ ಮೃತಪಟ್ಟರು. ತಕ್ಷಣ ನಮ್ಮ ದರ್ಶನ್‌ ಅವರಿಗೆ ಕರೆ ಮಾಡಿದೆವು. ಬಾಡಿನ ಏನಾದ್ರು ಮಾಡಿ ಮುಚ್ಚಾಕಿ ಅಂದರು. ಭಯದಲ್ಲಿ ಏನ್ಮಾಡಬೇಕು ಅಂತಾ ಗೊತ್ತಾಗದೆ ಮೋರಿಗೆ ಬಿಸಾಕಿ ಮನೆಗೆ ಹೋಗಿದ್ವಿʼʼಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Actor Darshan: ಕಾರಿನಲ್ಲಿತ್ತು ಮದ್ಯದ ಬಾಟಲಿ, ವ್ಯಾನಿಟಿ ಬ್ಯಾಗ್; ಶವ ಸಾಗಿಸಿದ್ದು ಯಾವ ಕಾರಲ್ಲಿ?

ಕೊಲೆ ಕೇಸ್‌ನಿಂದ ಎಸ್ಕೇಪ್‌ ಆಗಲು 30 ಲಕ್ಷ ರೂ. ಕೊಟ್ಟಿದ್ದ ʻಡೆವಿಲ್‌ʼ?

ರೇಣುಕಾ ಸ್ವಾಮಿಯ ಶವವನ್ನು ಎಸೆದು, ಕೊಲೆ ಆರೋಪವನ್ನು ಹೊತ್ತುಕೊಳ್ಳಲು ಮೂವರಿಗೆ 30 ಲಕ್ಷ ರೂಪಾಯಿ ದರ್ಶನ್‌ ನೀಡಿದ್ದರು ಎನ್ನಲಾಗಿದೆ. ಮೊದಲಿಗೆ ಶವ ವಿಲೇವಾರಿ ಮಾಡಲು ದರ್ಶನ್‌ ಪ್ಲ್ಯಾನ್‌ ಮಾಡಿದ್ದು, ಬಳಿಕ ಅದೇ ಫ್ಲ್ಯಾನ್‌ ಉಲ್ಟಾ ಆಗಿದೆ ಎನ್ನಲಾಗಿದೆ.ರೇಣುಕಾ ಸ್ವಾಮಿ ಮೃತಪಟ್ಟ ಬಳಿಕ ದರ್ಶನ್‌ ಅವರಿಗೆ ಶವ ಸಾಗಿಸುವುದು ಹೇಗೆ ಎನ್ನುವ ಭಯ ಕಾಡಿತ್ತು. ಹೀಗಾಗಿ ನಾಲ್ವರಿಗೆ ದರ್ಶನ್ 30 ಲಕ್ಷ ರೂ. ನೀಡಿ ಸರೆಂಡರ್ ಆಗುವಂತೆ ಸೂಚನೆ ನೀಡಿದ್ದರು. ನಾಲ್ವರು ಕೂಡ ಹಣದ ವಿಚಾರಕ್ಕೆ ಕೊಲೆ ಮಾಡಿದ್ದಾಗಿ ಹೇಳಿ ಸರೆಂಡರ್‌ ಆಗಿದ್ದರು. ಆದರೆ ಪೊಲೀಸರ ವಿಚಾರಣೆ ವೇಳೆಗೆ ಒಬ್ಬೊಬ್ಬರದ್ದು ಒಂದೊಂದು ರೀತಿಯ ಹೇಳಿಕೆ ಬಂದಿತ್ತು. ಇದರಿಂದ ಅನುಮಾನಗೊಂಡು ಪೊಲೀಸರು ಇನ್ನಷ್ಟು ಪರಿಶೀಲಿಸಿದಾಗ ಮೊಬೈಲ್‌ನಲ್ಲಿ ಇಡೀ ತಂಡ ರಾತ್ರಿಯಿಡೀ ದರ್ಶನ್ ಜತೆ ಸಂಪರ್ಕದಲ್ಲಿ ಇರುವುದು ಬೆಳಕಿಗೆ ಬಂದಿತು. ಮತ್ತು ಕಠಿಣವಾಗಿ ಎಲ್ಲವನ್ನೂ ಪರಿಶೀಲಿಸಿದಾಗ ದರ್ಶನ್ ಹೆಸರು ಹೊರಬಿದ್ದಿದೆ.

ಚಿತ್ರದುರ್ಗದಲ್ಲಿ ಮೌನ ಪ್ರತಿಭಟನೆ

 ರೇಣುಕಾ ಸ್ವಾಮಿ ಹತ್ಯೆ ಖಂಡಿಸಿ (Renuka Swamy Murder Case) ನಗರದಲ್ಲಿ ಬುಧವಾರ 10ಕ್ಕೂ ಹೆಚ್ಚು ಸಂಘಟನೆಗಳಿಂದ ಮೌನ ಪ್ರತಿಭಟನೆ ನಡೆಸಲಾಯಿತು. ಬಜರಂಗದಳ, ವಿಶ್ವ ಹಿಂದು ಪರಿಷತ್, ಕನ್ನಡಪರ ಸಂಘಟನೆ, ರೈತ ಸಂಘಟನೆಗಳ 200ಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. ನಟ ದರ್ಶನ್‌ ಸೇರಿ ಇತರ 13 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ನಗರದ ನೀಲಕಂಠೇಶ್ವರ ದೇಗುಲದಿಂದ ಡಿಸಿ ಕಚೇರಿವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್, ನಗರಸಭಾ ಅಧ್ಯಕ್ಷರು, ಸದಸ್ಯರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದರು. ಪ್ರತಿಭಟನೆಗೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗಿದೆ.

Exit mobile version