ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ (Actor Darshan) ಜೈಲಿನಲ್ಲಿ ಇದ್ದಾರೆ. ಸದ್ಯ ಜೈಲಲ್ಲಿ ದರ್ಶನ್ ಚಡಪಡಿಕೆ ಮುಂದುವರಿದಿದೆ. ಊಟ ಸೇರದೆ ನಿದ್ದರೆ ಬಾರದೇ ದರ್ಶನ್ ಕಂಗಾಲಾಗಿದ್ದಾರೆ. ಜೈಲಿನಲ್ಲಿರುವ ದರ್ಶನ್ ಅವರನ್ನು ಈವರೆಗೆ ಮೂರು ಬಾರಿ ಕುಟುಂಬ ಭೇಟಿ ಮಾಡಿದೆ. ಇದೀಗ ನಟ ಮಾನಸಿಕ ಖಿನ್ನತೆಯಿಂದ ಹೊರಬರಲು ಯೋಗದ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಜೈಲೂಟ ರುಚಿಸುತ್ತಿಲ್ಲ, ಸಹಖೈದಿಗಳ ಸಹವಾಸ ಬೇಡವಾಗಿದೆ. ಇದರ ಜತೆಗೆ ಒಂಟಿತನ ಇನ್ನಿಲ್ಲದೆ ಕಾಡುತ್ತಿದೆ. ಒಂಟಿತನದಿಂದ ಪರಾಗಲು ದರ್ಶನ್ ಪುಸ್ತಕಗಳನ್ನು ಕೇಳಿ ಪಡೆದಿದ್ದರು. ಆದರೂ ಮನಸ್ಸಿನಿಂದ ಬೇಸರ ದೂರವಾಗುತ್ತಿಲ್ಲ. ಜತೆಗೆ ರೇಣುಕಾಸ್ವಾಮಿ ಕೊಲೆ ಕೇಸ್ ಭಯ ಕೂಡ ಕಾಡುತ್ತಿದೆ. ಪೊಲೀಸರ ತನಿಖೆ ಕೂಡ ಭರ್ಜರಿಯಾಗೇ ಸಾಗುತ್ತಿದೆ. ಇವೆಲ್ಲವೂ ನಟ ದರ್ಶನ್ ಅವರನ್ನು ನಿದ್ದೆಗೆಡಿಸಿವೆ. ಹಾಗಾಗಿ ಎಲ್ಲಾ ಟೆನ್ಷನ್ ಗಳಿಂದ ಹೊರ ಬರಲು ಯೋಗದ ಮೊರೆ ಹೋಗಿದ್ದಾರೆ.
ನಿನ್ನೆಯಿಂದ ಜೈಲಿನಲ್ಲಿ ನಟ ದರ್ಶನ್ ಯೋಗಾಭ್ಯಾಸ ಶುರು ಮಾಡಿದ್ದಾರೆ. ಈ ಹಿಂದೆ ರವಿಶಂಕರ್ ಗೂರೂಜಿ ಆಶ್ರಮದಿಂದ ಜೈಲಿನ ಸಜಾಬಂಧಿಗಳಿಗೆ ಯೋಗ ತರಬೇತಿ ನೀಡಲಾಗಿತ್ತು.
ಈ ಮುಂಚೆ ದರ್ಶನ್ ಭೇಟಿಯಾಗಿ ವಿಜಯಲಕ್ಷ್ಮಿ ಧೈರ್ಯ ತುಂಬಿ ಬಂದಿದ್ದರು. ಜೈಲಿನಲ್ಲಿ ಅಪ್ಪನ ಸ್ಥಿತಿ ಕಂಡು ಮಗ ವಿನೀಶ್ ಕಣ್ಣೀರು ಹಾಕಿದ್ದ.
ಇದನ್ನೂ ಓದಿ: Actor Darshan: ಅಪ್ಪನ ಸ್ಥಿತಿ ಕಂಡು ಮಗ ವಿನೀಶ್ ಕಣ್ಣೀರು; ಧೈರ್ಯ ತುಂಬಿದ ವಿಜಯಲಕ್ಷ್ಮಿ!
ಬಟ್ಟೆ, ಹಣ್ಣುಗಳನ್ನು ನೀಡಿದ್ದರು. ಜೈಲಿನಲ್ಲಿ ಅಪ್ಪನ ಸ್ಥಿತಿ ಕಂಡು ಮಗ ಕಣ್ಣೀರು ಹಾಕಿದ್ದ. ಮಗನನ್ನು ಅಪ್ಪಿಕೊಂಡು ದರ್ಶನ್ ಕೂಡ ಕಣ್ಣೀರು ಹಾಕಿ ಬಾವುಕರಾಗಿದ್ದರು., ಪತ್ನಿಯ ಬಳಿ ಜೈಲೂಟ ಮಾಡಲು ಆಗುತ್ತಿಲ್ಲ ಎಂದು ದರ್ಶನ್ ಹೇಳಿದ್ದರು. ವಕೀಲರ ಮೂಲಕ ಕೋರ್ಟ್ನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ ಎಂದು ದರ್ಶನ್ಗೆ ವಿಜಯಲಕ್ಷ್ಮಿ ಮಾಹಿತಿ ನೀಡಿದ್ದರು. ಸದ್ಯ ಮನೆ ಊಟ ಕೊಡುವ ಬಗ್ಗೆ ಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ. ಜುಲೈ 18ರಂದು ಈ ಬಗ್ಗೆ ನಿರ್ಧಾರ ಆಗಲಿದೆ.
ಹೊರಗೆ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಪತ್ನಿಯ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದಾರೆ ದಚ್ಚು. ಜಾಮೀನು ಪ್ರಕ್ರಿಯೆ ಬಗ್ಗೆಯೂ ಕುಟುಂಬಸ್ಥರ ಜತೆಗೆ ಚರ್ಚೆ ಮಾಡಿದ್ದಾರೆ. ಮಗನನ್ನ ತೊಡೆಯ ಮೇಲೆ ಕೂರಿಸಿಕೊಂಡು ಕೆಲಹೊತ್ತು ದರ್ಶನ್ ಮಾತನಾಡಿಸಿದ್ದರು. ಮಗನನ್ನು ಕಂಡು ಕೊಂಚ ನಿರಾಳವಾಗಿದ್ದಾರೆ. ಮತ್ತೆ ರಾತ್ರಿಯಾಗುತ್ತಿದ್ದಂತೆ ಮೌನಕ್ಕೆ ಶರಣಾಗಿದ್ದಾರೆ. ಒಂದು ಕಡೆ ಜಿಮ್‌ನಲ್ಲಿ ವರ್ಕೌಟ್ ಇಲ್ಲ, ಸರಿಯಾದ ಆಹಾರ ಕೂಡ ಇಲ್ಲ. ಇದರಿಂದ ತೂಕ ಕಳೆದುಕೊಂಡು ಮಾನಸಿಕವಾಗಿ ದರ್ಶನ್ ಕುಗ್ಗಿ ಹೋಗುತ್ತಿದ್ದಾರೆ. ಇತರ ಜೈಲು ಸಿಬ್ಬಂದಿ ಜೊತೆ ಅವರು ಬರೆಯುತ್ತಿಲ್ಲ.