ಬೆಂಗಳೂರು: ಕೊಲೆ ಕೇಸ್ ದರ್ಶನ್ ಅರೆಸ್ಟ್ (Actor Darshan) ಆಗಿದ್ದಾರೆ. ಅವರನ್ನು ಕೇಂದ್ರ ಕಾರಾಗೃಹದಲ್ಲಿ ಇಡಲಾಗಿದೆ. ದರ್ಶನ್ ಕೇಸ್ ಬಗ್ಗೆ ಕೆಲವರು ಅಭಿಪ್ರಾಯ ಹಂಚಿಕೊಂಡರೆ ಇನ್ನೂ ಕೆಲವರು ಮೌನವಹಿಸಿದ್ದಾರೆ. ಸಂಗೀತ ಸಂಯೋಜಕ ವಿ. ಮನೋಹರ್ ಅವರು ದರ್ಶನ್ ಕೇಸ್ ಬಗ್ಗೆ ಮಾತನಾಡಿದ್ದಾರೆ.
ಸಂಗೀತ ನಿರ್ದೇಶಕ ವಿ ಮನೋಹರ್ ಮಾತನಾಡಿ ʻʻಇದೊಂದು ಆಕಸ್ಮಿಕ.ಇದು ಬೇಕು ಅಂತ ಯಾರು ಮಾಡಿರಲ್ಲ. ಎಷ್ಟೋ ಸಾವಿರಾರು ಹೆಣ್ಣುಮಕ್ಕಳ ಶಾಪ ತಟ್ಟಿದಾಗ ಏನಾಗತ್ತೆ ಅನ್ನೋದನ್ನ ಈ ಘಟನೆಯಿಂದ ತಿಳ್ಕೊಬೇಕು. ಹೆಣ್ಣು ಮಕ್ಕಳು ಅಂದರೆ ಅಷ್ಟು ಕೇವಲವೇ? ಒಂದೊಂದು ಮೆಸೇಜಸ್ ನೋಡಿದ್ರೆ ತುಂಬಾ ಕೆಟ್ಟ ಮೆಸೇಜಸ್. ರೇಣುಕಾಸ್ವಾಮಿ ತರ ಇನ್ನೂ ಒಂದಷ್ಟು ಜನ ಇದ್ದಾರೆ. ನಾನು ಸೈಬರ್ ಕ್ರೈಂ ಪೊಲೀಸರಲ್ಲಿ ಮನವಿ ಮಾಡ್ತೇನೆ. ಇಂತವರನ್ನು ಹುಡುಕಿ ಶಿಕ್ಷೆ ಕೊಡಿ ತರಹದ ಘಟನೆಗಳು ತಪ್ಪತ್ತೆ. ಈ ಘಟನೆಯಲ್ಲಿ ಕೊಲೆಯಾಗಿರುವ ರೇಣುಕಾಸ್ವಾಮಿ ವಿರುದ್ಧ ಮೂರು ತಿಂಗಳ ಹಿಂದೆಯೇ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ರು ಕೂಡ. ಪೊಲೀಸರು ಯಾಕೆ ಆಕ್ಷನ್ ತೆಗೆದುಕೊಂಡಿಲ್ಲ ಅನ್ನೋದು ವಿಚಿತ್ರ. ಮೊದ್ಲೇ ಆಕ್ಷನ್ ತಗೊಂಡಿದ್ರೆ ಒಳ್ಳೆಯದಿರುತ್ತಿತ್ತು. ಅವನ ಪಾಪದ ಕೊಡ ತುಂಬಿತು ಅವ್ನು ಸರಿಯಾಗಿ ಅನುಭವಿಸಿದ. ದರ್ಶನ್ ಅವರ ಜೀವನದಲ್ಲಿ ಇದು ಆಗಬಾರದಿತ್ತು. ಸ್ನೇಹಿತರಾಗಿ ನಾನು ದರ್ಶನ್ ಅವ್ರಿಗೆ ಈ ಕಳಂಕದಿಂದ ಹೊರಗೆ ಬರ್ಲಿ ಅಂತ ಹಾರೈಸುತ್ತೇನೆ. ಮತ್ತೆ ಮೊದಲಿನಂತೆ ಇನ್ನೊಂದು ಅಷ್ಟು ಸಿನಿಮಾಗಳು ಮಾಡಲಿ. ದರ್ಶನ್ ಸಿನಿಮಾ ಅಂದರೆ ನೂರಾರು ಜನ ಕೆಲ್ಸ ಮಾಡ್ತಾರೆ. ನೂರಾರು ಜನಕ್ಕೆ ಅನ್ನ ಸಿಗತ್ತೆʼʼಎಂದರು.
ಇದನ್ನೂ ಓದಿ: Highest Collection Movie: ಅತೀ ಹೆಚ್ಚು ಗಳಿಕೆ ದಾಖಲಿಸಿದ ಭಾರತದ ಟಾಪ್ 10 ಸಿನಿಮಾಗಳಿವು
ರೇಣುಕಾಸ್ವಾಮಿ ಮುಗ್ಧನಲ್ಲ, ಆತ ವಿಕೃತಕಾಮಿ. ದರರ್ಶನ್ ಅವರ ಬಗ್ಗೆ ನಾನು ಯಾವುದೇ ನೆಗೆಟಿವ್ ಹೇಳಿಕೆ ನೀಡಲ್ಲ. ಮುಂದಿನ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡೋಣ ಎಂದು ಪ್ರಾಮಿಸ್ ಮಾಡಿದ್ದರು. ಇದಾದ ಕೆಲವೇ ದಿನಕ್ಕೆ ಅವರು ಬಂಧನಕ್ಕೆ ಒಳಗಾದರು ಎಂದರು.
ದರ್ಶನ್ ಭೇಟಿಯಾದ ಪವಿತ್ರಾ ಆಪ್ತೆ
ಜೈಲಿನಲ್ಲಿರುವ ನಟ ದರ್ಶನ್‌ನನ್ನು ಪವಿತ್ರಾ ಗೌಡ ಆಪ್ತ ಸ್ನೇಹಿತೆ ಮಂಗಳವಾರ ಭೇಟಿ ಮಾಡಿದ್ದಾರೆ. ಒಂದು ಕಡೆ ಪವಿತ್ರಾ ಸ್ನೇಹಿತೆ 15 ನಿಮಿಷ ದರ್ಶನ್ ಜತೆ ಮಾತುಕತೆ ನಡೆಸಿದ್ದರೆ, ಮತ್ತೊಂದೆಡೆ ದರ್ಶನ್‌ರನ್ನು (Actor Darshan) ಭೇಟಿಯಾಗಲು ನಟ ಧನ್ವೀರ್‌ಗೆ ಅವಕಾಶ ಸಿಗದಿರುವುದು ಕಂಡುಬಂದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ದರ್ಶನ್ ಅಭಿಪ್ರಾಯ ತಿಳಿಯಲು ಪವಿತ್ರಾ ಗೌಡ ಯತ್ನಿಸಿದ್ದಾರೆ. ಹೀಗಾಗಿ ಅವರು ನೀಡಿದ ಮಾಹಿತಿಯನ್ನು ದರ್ಶನ್‌ಗೆ ಪವಿತ್ರಾ ಗೌಡ ಆಪ್ತ ಸ್ನೇಹಿತೆ ಸಮತಾ ರವಾನಿಸಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿ ಬೇರೆ ಬೇರೆಯಾಗಿದ್ದರೂ ದರ್ಶನ್ ಮತ್ತು ಪವಿತ್ರಾಗೆ ಪರಸ್ಪರ ಮಾಹಿತಿ ಸಿಗುತ್ತಿದೆ. ಇದಕ್ಕೆ ಪವಿತ್ರಾ ಸ್ನೇಹಿತೆ ಸಮತಾ ಮಧ್ಯವರ್ತಿಯಾಗಿದ್ದಾರೆ. ನಟ ದರ್ಶನ್ ತನ್ನ ಬಗ್ಗೆ ಏನು ಹೇಳುತ್ತಿದ್ದಾರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಅವರ ಅಭಿಪ್ರಾಯ ತಿಳಿಯಲು ಪವಿತ್ರಾ ಪ್ರಯತ್ನಿಸಿದ್ದಾರೆ. ಹೀಗಾಗಿ ಸ್ನೇಹಿತೆ ಮೂಲಕ ದರ್ಶನ್‌ರನ್ನು ಭೇಟಿ ಮಾಡಿಸಿದ್ದಾರೆ ಎನ್ನಲಾಗಿದೆ. ನಟ ದರ್ಶನ್ ಕೂಡ ಸಮತಾ ಭೇಟಿಗೆ ಓಕೆ ಅಂದಿದ್ದರು. ಹೀಗಾಗಿ ಅವರನ್ನು ಜೈಲಿನೊಳಗೆ ಕಳುಹಿಸಲಾಗಿದೆ.