Site icon Vistara News

Actor Darshan: ದರ್ಶನ್‌ಗಾಗಿ ವಿಶೇಷ ಪೂಜೆ ಮಾಡಿಸಿದ್ರಾ ವಿಜಯಲಕ್ಷ್ಮಿ? ಅಸಲಿ ಕಥೆ ಬೇರೆಯೇ ಇದೆ!

actor darshan wife vijayalakshmi conducted a special pooja at bande mahakali last year goes viral

ಬೆಂಗಳೂರು: ಗಂಡ ದರ್ಶನ್ (Actor Darshan) ಅವರನ್ನು ಜೈಲಿಂದ ಕರೆತರಲು ವಿಜಯಲಕ್ಷ್ಮೀ ನಾನಾ ಪ್ರಯತ್ನಗಳನ್ನು ಮಾಡುತ್ತಿರುವುದು ಗೊತ್ತೇ ಇದೆ. ಇದಾದ ಬೆನ್ನಲ್ಲೇ ಬೆಂಗಳೂರಿನ ಚಾಮರಾಜಪೇಟೆಯ ಗವಿಪುರಂನಲ್ಲಿರುವ ಶ್ರೀ ಬಂಡೇ ಮಹಾಕಾಳಿ ದೇವಸ್ಥಾನಕ್ಕೆ ತೆರೆಳಿದ ವಿಜಯಲಕ್ಷ್ಮೀ, ಜೈಲಿನಾಚೆ ಪತಿಯ ದರ್ಶನಕ್ಕೆ ಪ್ರಾರ್ಥನೆ ಸಲ್ಲಿಸಿರುವ ಫೋಟೊ ವೈರಲ್‌ ಆಗಿತ್ತು. ಅಸಲಿಗೆ ವಿಜಯಲಕ್ಷ್ಮಿ ಅವರು ಒಂದು ವರ್ಷದ ಹಿಂದೆ ದೇವಸ್ಥಾನಕ್ಕೆ ಬೇಟಿ ಕೊಟ್ಟಿರುವ ಹಳೆಯ ಪೋಟೊ ಇದು. ಆದರೆ ದರ್ಶನ್‌ ಫ್ಯಾನ್ಸ್‌ ವಿಜಯಲಕ್ಷ್ಮಿ ಅವರು ನಿನ್ನೆ ಭೇಟಿ ಕೊಟ್ಟಿದ್ದಾರೆ ಎಂದು ಫೋಟೊವನ್ನು ವೈರಲ್‌ ಮಾಡಿ ಬಿಡ್ಡಿದ್ದಾರೆ.

ಫೋಟೊ ವೈರಲ್‌ ಆದ ಬಳಿಕ ಆಷಾಢ ಶನಿವಾರದ ಮಧ್ಯಾಹ್ನದಂದು ಶ್ರೀ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಜಯಲಕ್ಷ್ಮಿ, ದರ್ಶನ್ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು ಎನ್ನಲಾಗಿತ್ತು. ದರ್ಶನ್‌ ಅವರಿಗೆ ದೃಷ್ಟಿ ತೆಗೆದು, ತಡೆ ಒಡೆದು ಬಳಿಕ ಒಂದು ವಾರದ ಮಟ್ಟಿಗೆ ಯಾವುದೇ ಹೊಸ ಕೆಲಸ ಮಾಡಬೇಡಿ. ಸಾಧ್ಯವಾದರೆ ಬೆಂಗಳೂರು ಬಿಟ್ಟು ಎಲ್ಲಾದರೂ ದೂರ ಹೋಗಿಬಿಡಿ ಎಂದು ಶ್ರೀ ಬಂಡೆ ಮಹಾಕಾಳಿ ಅಮ್ಮನವರ ದೇವಸ್ಥಾನದ ಅರ್ಚಕರು ದರ್ಶನ್‌ಗೆ ಹೇಳಿದ್ದರು ಅನ್ನುವ ಮಾತು ಕೂಡ ಕೇಳಿ ಬಂದಿತ್ತು.

ಆದರೀಗ ಅಸಲಿ ವಿಚಾರ ಹೊರ ಬಂದಿದೆ. 2023ರ ಜುಲೈ 7ರಂದು ಬಂಡಿ ಮಾಂಕಾಳಮ್ಮ ದೇವಸ್ಥಾನಕ್ಕೆ ವಿಜಯಲಕ್ಷ್ಮಿ ಭೇಟ ಕೊಟ್ಟಿರುವ ಫೋಟೊ ಇದು. ದೇವಸ್ಥಾನದ ಮ್ಯಾನೇಜರ್ ಪತ್ನಿ ಲತಾ ಜೈಪ್ರಕಾಶ್ ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿರುವ ಫೋಟೊಗಳು. ಫೇಸ್‌ಬುಕ್‌ ಮೆಮೊರಿಯನ್ನ ಮತ್ತೆ ಶೇರ್ ಮಾಡಿದ್ದರು. ಇದು ಈಗ ವೈರಲ್‌ ಆಗಿ ಈ ರೀತಿ ಸುಳ್ಳು ಸುದ್ದಿ ಹಬ್ಬಿದೆ.

ಇದನ್ನೂ ಓದಿ: Actor Darshan: ರೇಣುಕಾ ಸ್ವಾಮಿ ಸತ್ತೋಗ್ಬಿಟ್ಟ ಎಂಬ ಸುದ್ದಿ ಕೇಳಿದ ಕೂಡಲೇ ತಲೆ ಮೇಲೆ ಕೈ ಇಟ್ಟುಕೊಂಡಿದ್ರಂತೆ ದರ್ಶನ್‌!

ದರ್ಶನ್ ಬಳಸುತ್ತಿದ್ದ ಸಿಮ್ ಸೀಕ್ರೆಟ್‌ ರಿವೀಲ್

ಪೊಲೀಸ್‌ ತನಿಖೆ ವೇಳೆ ಆರೋಪಿಗಳು ಬೇರೊಬ್ಬರ ಸಿಮ್ ಕಾರ್ಡ್ ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. ಮಾಹಿತಿ ಸಂಗ್ರಹಿಸಿ ಪರಿಶೀಲನೆ ವೇಳೆ ಸಿಮ್ ಕಾರ್ಡ್ ರಹಸ್ಯ ಬಯಲಾಗಿದೆ. ಹೇಮಂತ್ ಹೆಸರಿನಲ್ಲಿರುವ ಸಿಮ್‌ವನ್ನು ದರ್ಶನ್‌ ಬಳಸುತ್ತಿದ್ದರೆ, ಪವಿತ್ರಗೌಡ ಅವರು ಮನೋಜ್ ಹೆಸರಿನಲ್ಲಿದ್ದ ಸಿಮ್ ಬಳಸುತ್ತಿದ್ದರು. ಆರೋಪಿ ನಂದೀಶ್ ಅವರು ಹೇಮಂತ್ ಹೆಸರಿನಲ್ಲಿ, ಆರೋಪಿ ಪ್ರದ್ಯೂಷ್ ಖಾಸಗಿ ಕಂಪನಿ ಸೀನಿಯರ್ ಮ್ಯಾನೇಜರ್ ಹೆಸರಿನಲ್ಲಿ, ಆರೋಪಿ ಕಾರ್ತಿಕ್ ಅವರು ವೇಲು ಎಂಬಾತನ ಹೆಸರಲ್ಲಿ, ಕೇಶವಮೂರ್ತಿ ಅರು ಪ್ರಜ್ಞಾ ಎಂ ಹೆಸರಲ್ಲಿ, ನಿಖಿಲ್ ನಾಯಕ್ ಅವರು ಗೀತಾ ಹೆಸರಲ್ಲಿ ಸಿಮ್‌ ಬಳಕೆ ಮಾಡುತ್ತಿರುವುದಾಗಿ ತನಿಖೆ ವೇಳೆ ತಿಳಿದು ಬಂದಿದೆ.

Exit mobile version