ಬೆಂಗಳೂರು: ನವರಸ ನಾಯಕ ಜಗ್ಗೇಶ್ (Actor Jaggesh) ಅವರು ಸೋಷಿಯಲ್ ಮೀಡಿಯಾ ಮೂಲಕ ಆಗಾಗ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ನಟ ಜಗ್ಗೇಶ್ ತಮ್ಮ ಕಪ್ಪು ಮೈಬಣ್ಣದ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಇದೀಗ ಈ ಬಗ್ಗೆ ಒಂದು ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ.
ಜಗ್ಗೇಶ್ ಪೋಸ್ಟ್‌ನಲ್ಲಿ ʻʻನನ್ನನ್ನು ಕಪ್ಪು ಎಂದು ಅಣಕ ಮಾಡುತ್ತಿದ್ದರು ಬಾಲ್ಯದಲ್ಲಿ ಎಲ್ಲರು..!!
ಆಗ ನನಗೆ ಬಹಳ ಸಿಟ್ಟು ಬರುತ್ತಿತ್ತು. ನಾನು ಯವ್ವನದಲ್ಲಿ ಬೆಳ್ಳಗಾಗಲು ಅನೇಕ ಕೆಟ್ಟ ಪ್ರಯತ್ನ ಮಾಡಿದ್ದುಂಟು!
ನಟನಾದ ಮೇಲೆ ನನ್ನ ಮ್ಯಾಕ್ಸ್ ಫ್ಯಾಕ್ಟರ್ (max factor) ಮೇಕಪ್, ಅಂಬರೀಶ್ ಅವರ, ರಜನಿಯವರ, ವಿಜಯಕಾಂತ್, ಶಿವಣ್ಣ ಕೂಡ ಬಳಸುತ್ತಿದ್ದರು. ನಾನು ಬಳಸುತ್ತಿದ್ದ ಪ್ಯಾನ್ ಕೇಕ್ ಇಂದು ವಿಶ್ವದಲ್ಲಿ ಮರೆಯಾದ ಪ್ಯಾನ್ ಕೇಕ್ . ಆದರೆ ನನ್ನ ಅದೃಷ್ಟ ಅದು ನನ್ನ ಬಳಿ ಇನ್ನೂ 50 ಸಿನಿಮಾಗೆ ಸಾಕಾಗುತ್ತದೆ ಅಪ್ಟಿದೆ. ಅನೇಕರು ಕೇಳಿದರು ಈ ಪ್ಯಾನ್ ಕೇಕ್ ಕೊಡಿ ಎಂದು (pancake). ನಾನು ನೀಡುವುದಿಲ್ಲಾ ಎಂದೆ. ಕಾರಣ ಅದರ ಮೇಲಿನ ವಿಪರೀತ ಪ್ರೀತಿ ಹಾಗೂ ಭಕ್ತಿ. ಅದು ಹಚ್ಚಿದರೆ ನನ್ನ ಕಪ್ಪು ಅಂದವರು ಮೌನವಾಗುತ್ತಾರೆ. ಇದನ್ನು ಬಳಸುವಾಗ ಅಯ್ಯೋ ನಾನು ನಿಜವಾಗಲು ಈ ಬಣ್ಣ ಹೊಂದಿದ್ದರೆ ಚೆನ್ನಾಗಿರುತ್ತಿತ್ತು ಎನ್ನಿಸುತ್ತದೆ. ಆದರೆ ನನ್ನ ಮೊಮ್ಮಗ ಅರ್ಜುನ ಯಾವ pancake ಬಳಸದಂತೆ ಬಣ್ಣ ಹಚ್ಚಿಕೊಂಡೇ ಬಂದಿದ್ದಾನೆ. ಭೂಮಿಗೆ ಇಷ್ಟು ಹೇಳಲು ಕಾರಣ ಇಂದು ಇವನು 9ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಅಂದರೆ ಅವನ ಹುಟ್ಟುಹಬ್ಬ. ಹುಟ್ಟು ಹಬ್ಬದ ಶುಭಾಶಯಗಳು ಕಂದ. ದೇವರು ಒಳ್ಳೆಯದು ಮಾಡಲಿʼʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Actor Jaggesh: ರಂಗ ನಾಯಕ, ʻಕಿತ್ತೋದ್ ನನ್ಮಗʼ ಮಾತಿಗೆ ಹೀಗೆ ಪ್ರತಿಕ್ರಿಯಿಸಿದ್ದಾರೆ ಜಗ್ಗೇಶ್!
ಬಾಡಿ ಶೇಮಿಂಗ್ ಬಗ್ಗೆ ಜಗ್ಗೇಶ್ ಅವರು ಈ ಮೂಲಕ ಹೇಳಿಕೊಂಡಿದ್ದಾರೆ. ನಟ ಜಗ್ಗೇಶ್ ತಮ್ಮ ಕಪ್ಪು ಮೈಬಣ್ಣದ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಕೆಲವೊಮ್ಮೆ ಅದನ್ನೇ ತಮಾಷೆಯಾಗಿ ಹೇಳಿಕೊಂಡು ನಕ್ಕಿದ್ದಾರೆ, ನಗಿಸಿದ್ದಾರೆ. ನವರಸ ನಾಯಕ ಜಗ್ಗೇಶ್ ಅವರ ಹಿರಿಯ ಪುತ್ರ ಗುರುರಾಜ್ ಅವರ ಮಗ ಅರ್ಜುನ್. ಮೊಮ್ಮಗ ಎಂದರೆ ಜಗ್ಗೇಶ್ ಅವರಿಗೆ ಬಹಳ ಪ್ರೀತಿ.
ʻಕಾಮಿಡಿ ಕಿಲಾಡಿಗಳು ಶೋನಲ್ಲಿ ಜಗ್ಗೇಶ್ ಅವರು ಮುದ್ದಿನ ಶ್ವಾನ ಅರ್ಜುನನನ್ನು ನೆನೆದು ಭಾವುಕರಾಗಿದ್ದರು. ಕಾಮಿಡಿ ಕಿಲಾಡಿಗಳು ಶೋನಲ್ಲಿ ಜಗ್ಗೇಶ್ ಅವರು ʻಅರ್ಜುನʼ ಎಂಬ ಹೆಸರಿನ ಸಾಕು ನಾಯಿಯ ಜತೆ ಇರುವ ಫೋಟೊವನ್ನು ತೋರಿಸಿದಾಗ, ʻಇವನ ಹೆಸರನ್ನೇ ನಾನು ನನ್ನ ಮೊಮ್ಮಗನಿಗೆ ಇಟ್ಟಿದ್ದೇನೆ. ಕಾರಣವೇನೆಂದರೆ, ಲ್ಯಾಬ್ರೇಡರ್ ನಾಯಿ ಜಾಸ್ತಿ ದಿನ ಬದುಕುವುದಿಲ್ಲ. ಆದರೆ ಅವನು ಹದಿನಾಲ್ಕುವರೆ ವರ್ಷ ನಮ್ಮ ಜತೆ ಬದುಕಿದ್ದʼ ಎಂದಿದ್ದರು. ಸಿನಿಮಾಗಳ ವಿಚಾರಕ್ಕೆ ಬಂದರೆ ಕೊನೆಯದಾಗಿ ಜಗ್ಗೇಶ್ ನಟಿಸಿದ ‘ರಂಗನಾಯಕ’ ಸಿನಿಮಾ ತೆರೆಗೆ ಬಂದಿತ್ತು. ಆದರೆ ಚಿತ್ರ ಗೆಲ್ಲಲಿಲ್ಲ.