Site icon Vistara News

Actor Kiran Raj: ʻರಾನಿʼ ಸಿನಿಮಾ ಸಾಂಗ್‌ ಔಟ್‌; ಇದೇ ಭಾನುವಾರ ಕಿರಣ್ ರಾಜ್‌ ʻರೀಲ್ಸ್ with ಫ್ಯಾನ್ಸ್ʼ!

Actor Kiran Raj Ronny Movie Reels with Fans Song

ಬೆಂಗಳೂರು: ʻಕನ್ನಡತಿ ಧಾರಾವಾಹಿʼ (Kannadathi serial) ಮೂಲಕ ಕನ್ನಡ ನಾಡಿನ ಮೂಲೆಮೂಲೆಯಲ್ಲಿ ಅಭಿಮಾನಿಗಳನ್ನು ಪಡೆದ ಕಿರಣ್‌ರಾಜ್‌ (Actor Kiran Raj) ನಾಯಕನಾಗಿ ನಟಿಸುತ್ತಿರುವ ʻರಾನಿʼ (Ronny Movie) ಸಿನಿಮಾ ಒಂದೊಲೊಂದು ಸುದ್ದಿ ಮಾಡುತ್ತಲೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಚಿತ್ರದ ರೊಮ್ಯಾಂಟಿಕ್ ಹಾಡೊಂದು ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆದಿದೆ.

“ನೀನೆಂದರೆ ನೀನೆಂದರೆ ನನಗೊಂತರ ಅರಿಯದ ಅಮಲು” ಎನ್ನುವ ಸಾಲಿನಿಂದ ಶುರುವಾಗುವ ಹಾಡಿಗೆ ಸಾವಿರಾರು ಜನ ಇನ್‌ಸ್ಟಾ ರೀಲ್ಸ್ ಮಾಡುವ ಮುಖಾಂತರ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಹಾಡು ಹಿಟ್ ಮಾಡಿದ ಅಭಿಮಾನಿಗಳೊಂದಿಗೆ ಕಿರಣ್ ರಾಜ್ ಇದೆ ಭಾನುವಾರ ರೀಲ್ಸ್ ಮಾಡುತ್ತಿದ್ದಾರೆ.ಪೊಸ್ಟರ್,ಟೀಸರ್,ಹಾಡುಗಳಿಂದ ಭಾರಿ ನಿರೀಕ್ಷೆ ಹುಟ್ಟಿಸಿರುವ “ರಾನಿ” ಚಿತ್ರ ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಈ ಹಿಂದೆ ಹಿಂದಿ ಟೀಸರ್‌ ಬಿಡುಗಡೆಯಾಗಿದ್ದು (Hindi teaser Release) ಭರ್ಜರಿ ರೆಸ್ಪಾನ್ಸ್‌ (Good Response) ಪಡೆದುಕೊಂಡಿತ್ತು. ಗುರುತೇಜ್‌ ಶೆಟ್ಟಿ (Director Gurutej Shetty) ಅವರು ನಿರ್ದೇಶಿಸುತ್ತಿರುವ ಈ ಚಿತ್ರದ ಬಗ್ಗೆ ಈಗಾಗಲೇ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಟಾಕ್‌ ನಡೆಯುತ್ತಿದೆ. ರಾನಿ ಚಿತ್ರ ಭೂಗತ ಜಗತ್ತಿನ ಕಥೆಯನ್ನು ಹೊಂದಿದೆ ಎನ್ನಲಾಗಿದೆ.

ಇದನ್ನೂ ಓದಿ: Karan Johar: ಬರ್ತ್‌ಡೇ ದಿನ ಹೊಸ ಸಿನಿಮಾ ಅನೌನ್ಸ್‌ ಮಾಡಿದ ಕರಣ್ ಜೋಹರ್!

ಟೀಸರ್‌ ಹೇಗಿತ್ತು?

 ʻನಾನು ಮನುಷ್ಯನಾಗಬಯಸುತ್ತೇನೆ, ಡಾನ್‌ ಅಲ್ಲʼ ಎಂದು ಕಿರಣ್‌ರಾಜ್‌ ಅಬ್ಬರಿಸುವ ದೃಶ್ಯವೊಂದು ಇದರಲ್ಲಿತ್ತು. ಇದರೊಂದಿಗೆ ಇದು ಆಕಸ್ಮಿಕವಾಗಿ ಭೂಗತ ಜಗತ್ತು ಪ್ರವೇಶಿಸಿದ ಅಮಾಯಕ ಯುವಕನೊಬ್ಬನ ಕಥೆಯಂತೆ ಕಾಣಿಸುತ್ತಿತ್ತು. ಜತೆಗೆ ಸಖತ್‌ ರೊಮ್ಯಾನ್ಸ್‌ ಕೂಡಾ ಕಾಣಿಸಿತ್ತು. ಟೀಸರ್‌ನಲ್ಲಿ ಕಿರಣ್‌ರಾಜ್‌ ಅವರ ಆಕ್ಷನ್‌, ರವಿಶಂಕರ್‌ ಅವರ ಅಬ್ಬರ ಕಣ್ಮನ ತಣಿಸುವಂತಿತ್ತು. ಕಿರಣ್‌ ಅಂತೂ ಕಿಲ್ಲರ್‌ ಲುಕ್‌ನಿಂದ ಕೊಲ್ಲುತ್ತಾರೆ. ಮಣಿಕಾಂತ್‌ ಕದ್ರಿ ಅವರ ಹಿನ್ನೆಲೆ ಸಂಗೀತವೂ ಟೀಸರ್‌ಗೆ ಹೊಸ ರೂಪ ನೀಡಿತ್ತು.

ಈ ಚಿತ್ರದಲ್ಲಿ ಕಿರಣ್‌ ರಾಜ್‌ ಜತೆಗೆ ರವಿಶಂಕರ್‌, ಮೈಕೋ ನಾಗರಾಜ್‌, ನಾಗತಿಹಳ್ಳಿ ಚಂದ್ರಶೇಖರ್‌, ಬಿ ಸುರೇಶ್‌, ಉಗ್ರಂ ಮಂಜು, ಉಗ್ರಂ ರವಿ, ಧರ್ಮಣ್ಣ, ಸೂರ್ಯ ಕುಂದಾಪುರ, ಗಿರೀಶ್‌ ಹೆಗ್ಡೆ, ಪ್ರಥ್ವೀರಾಜ್‌, ಯಶ್‌ ಶೆಟ್ಟಿ, ಉಮೇಶ್‌, ಸುಜಯ್‌ ಶಾಸ್ತ್ರಿ, ಲಕ್ಷ್ಮಿ ಸಿದ್ದಯ್ಯ, ಸಂದೀಪ್‌ ಮಲಾನಿ, ಅನಿಲ್‌, ಧರ್ಮೇಂದ್ರ ಅರಸ್‌, ಮನಮೋಹನ ರೈ ಮೊದಲಾದವರು ಇದ್ದಾರೆ. ಪ್ರಮೋದ್‌ ಮರವಂತೆ ಈ ಚಿತ್ರದ ನಾಲ್ಕು ಹಾಡುಗಳನ್ನು ಬರೆದಿದ್ದಾರೆ. ಮಣಿಕಾಂತ್‌ ಕದ್ರಿ ಟ್ಯೂನ್‌ ಹಾಕಿದ್ದಾರೆ.

ಇದೊಂದು ಪಕ್ಕಾ ಆಕ್ಷನ್‌ ಚಿತ್ರವಾಗಿದೆ. ಆದರೆ, ಅತ್ಯಂತ ಸೂಕ್ಷ್ಮ ಅಂಶಗಳನ್ನು ಬೆಸೆದುಕೊಂಡು ಕಟ್ಟಿದ ದೃಶ್ಯ ಕಾವ್ಯ ಎಂಬುದು ಟೀಸರ್‌ನಿಂದ ಸ್ಪಷ್ಟವಾಗುತ್ತದೆ. ರಾನಿ ಸಿನಿಮಾದಲ್ಲಿ ಆರು ಆಕ್ಷನ್‌ ಸೀನ್‌ಗಳಿವೆ ಎಂದು ಚಿತ್ರತಂಡ ಹೇಳಿದೆ.


ಎಲ್ಲಾ ರಾಜ್ಯದಲ್ಲೂ ಕನ್ನಡದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ ಎನ್ನುವುದು ಸದ್ಯದ ಲೆಕ್ಕಾಚಾರ. ಹಿಂದಿ ಟೀಸರ್‌ ಔಟ್‌ ಆಗಿರುವುದರಿಂದ ಹಿಂದಿಗೆ ಡಬ್‌ ಆಗಿ ಬಿಡುಗಡೆಯಾದರೂ ಅಚ್ಚರಿ ಇಲ್ಲ.

Exit mobile version