ಬೆಂಗಳೂರು: ಇತ್ತೀಚೆಗೆ ಕನ್ನಡ ಸಿನಿಮಾಗಳನ್ನು ನೋಡಲು ಜನ ಚಿತ್ರಮಂದಿರಗಳಲ್ಲಿ ಬರುತ್ತಿಲ್ಲ ಎಂಬ ದೂರು ಜೋರಾಗಿ ಕೇಳಿ ಬರುತ್ತಿದೆ. ಇತ್ತೀಚೆಗೆ ಫಿಲ್ಮ್ ಚೇಂಬರ್ನವರು ಸಭೆ ನಡೆಸಿ, ಸ್ಟಾರ್ ನಟರು ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡುವಂತೆ ಒತ್ತಾಯಿಸಲು ನಿರ್ಣಯಿಸಿರುವ ಸುದ್ದಿ ಹರಿದಾಡಿತು. ಈ ಬಗ್ಗೆ ಮಾತನಾಡಿರುವ ನಟ ರವಿಚಂದ್ರನ್ (Actor Ravichandran), ತುಸು ಗರಂ ಆಗಿಯೇ ಮಾತನಾಡಿದ್ದಾರೆ. ಒಳ್ಳೆ ಸಿನಿಮಾ ಮಾಡಿದರೆ ಖಂಡಿತ ಜನ ಬಂದೇ ಬರುತ್ತಾರೆ. ಪ್ರೇಕ್ಷಕರ ತಪ್ಪಿಲ್ಲ ಎಂದಿದ್ದಾರೆ.ಹಾಗೇ ವರ್ಷಕ್ಕೆ ಯಶ್ (Yash) ಮೂರು ಸಿನಿಮಾ. ದರ್ಶನ್ ಮೂರು ಸಿನಿಮಾ ಮಾಡಲು ಪ್ರಾರಂಭಿಸಿದರೆ ಎರಡು ವರ್ಷಕ್ಕೆ ಅವರನ್ನೆಲ್ಲ ಮನೆಗೆ ಕಳಿಸಿಬಿಡುತ್ತಾರೆ ಅಷ್ಟೆ ಎಂದು ನೇರವಾಗಿಯೇ ಹೇಳಿದ್ದಾರೆ.
ರವಿಚಂದ್ರನ್ ಮಾತನಾಡಿ ʻʻಮಾತು ಎತ್ತರೆ ಸಾಕು ಮಲಯಾಳಂ ಸಿನಿಮಾ ನೋಡ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಾನು ಹೇಳೋದು ಏನಂದರೆ ಹೋಗಿ ಮಲಯಾಳಂ ರೈಟರ್ಸ್ ಹತ್ತಿರ ಕಥೆ ಬರೆಸಿಕೊಂಡು ಬನ್ನಿ. ನಂತರ ಕನ್ನಡದಲ್ಲಿ ಸಿನಿಮಾ ಮಾಡಿ. ಯಾರು ಬೇಡ ಅಂತಾರೆ. ಕಥೆ ಎಲ್ಲಿ ಸಿಗುತ್ತೋ ಅಲ್ಲಿಂದ ತನ್ನಿ. ಜನ ಒಳ್ಳೆ ಕಥೆ ಸಿನಿಮಾಗೆ ಪ್ರೋತ್ಸಾಹ ಕೊಡುತ್ತಲೇ ಇದ್ದಾರೆ. ನಾನು ನಾಳೆ 10 ಸಿನಿಮಾ ಮಾಡ್ತೀನಿ. ಸಹಿ ಮಾಡೋಕೆ ಹೇಳಿ ನಿರ್ಮಾಪಕರಿಗೆ. ಅವರಿಗೆಲ್ಲಾ ಯಶ್, ದರ್ಶನ್ ಬೇಕಲ್ವಾ? ಅದು ಅವರವರ ಆಯ್ಕೆ. ಕಥೆ ಅವ್ರು ಓಕೆ ಮಾಡ್ಬೇಕಲ್ವಾ? ನಾಳೆ ಬೆಳಗ್ಗೆ ಯಶ್ 3, ದರ್ಶನ್ 3 ಸಿನಿಮಾ ಮಾಡಿಬಿಟ್ರೆ, 2 ವರ್ಷಕ್ಕೆ ಮನೆಗೆ ಕಳ್ಸಿಬಿಡ್ತಿರಾ. ಅವರಿಗೆ ಆದ ಬ್ರ್ಯಾಂಡ್, ತಾಕತ್ತು, ಅದಕ್ಕೆ ತಕ್ಕ ಬಜೆಟ್, ಸ್ಟೇಜ್ ಇರುತ್ತದೆ. ಯಾರಿಗೂ ಸಿನಿಮಾ ಮಾಡುವುದನ್ನು ಬಲವಂತ ಮಾಡಬಾರದು” ಎಂದು ರವಿಚಂದ್ರನ್ ಹೇಳಿದ್ದಾರೆ.
ಇದನ್ನೂ ಓದಿ: ಚಲಿಸುತ್ತಿದ್ದ ಟ್ರಕ್ ಹಿಂದೆ ಬೈಕ್ ಚೇಸ್ ಮಾಡಿ ಹಾಲಿವುಡ್ ಸಿನಿಮಾ ಸ್ಟೈಲಲ್ಲಿ ಕಳ್ಳತನ; ರೋಚಕ Video ಇಲ್ಲಿದೆ!
ʻʻಒಬ್ಬ ಹಿರೋ ಆದವನ್ನು ಕಥೆಯನ್ನು ಓಕೆ ಮಾಡ್ಬೇಕು. ಅವನಿಗೆ ಅವನದ್ದೇ ಆದ ಬ್ರ್ಯಾಂಡ್ ಮತ್ತು ಪೊಸಿಷನ್ ಇರುತ್ತೆ. ಕೆಜಿಎಫ್ ಆದಮೇಲೆ ಯಶ್ ಯಾವ ಸಿನಿಮಾ ಮಾಡ್ಬೇಕು? ಅವರಿಂದ ಜನರಿಗೆ ಭಾರಿ ನಿರೀಕ್ಷೆ ಇರತ್ತೆ. ದರ್ಶನ್ ಕಾಟೇರ ಆದ ಮೇಲೆ ಏನು ಮಾಡಬೇಕು?ಅವರ ಇಮೇಜ್, ಬ್ರ್ಯಾಂಡ್, ಬಜೆಟ್‌ನಲ್ಲಿ ಯೋಚನೆ ಮಾಡ್ತಾರೆ. ಅವರಿಗೆ ವರ್ಷಕ್ಕೆ 3 ಸಿನಿಮಾ ಮಾಡಿ ಅಂದ್ರೆ ಸಾಧ್ಯವಿಲ್ಲ. ಅವರಿಗೆ ಪಾಕೆಟ್ ತುಂಬಿದೆ. ಅವರು ಕಥೆ ಕೇಳ್ತಾರೆ” ಎಂದಿದ್ದಾರೆ.
ʻʻಸಮಸ್ಯೆ ಎಲ್ಲ ಕಡೆ ಇದ್ದಿದ್ದೆ. ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಇಲ್ಲ. ಇಲ್ಲಿ ಸ್ಟ್ರೈಕ್ ಮಾಡಿದರೆ ಪ್ರಯೋಜನ ಇಲ್ಲ. ಇದು ಉದ್ಯಮಕ್ಕೆ ಸರಿ ಅಲ್ಲ. ಬ್ಯಾಡ್ ಟೈಮ್ ಬರತ್ತೆ. ಮೊದಲು ಒಳ್ಳೆಯ ಸಿನಿಮಾ ಹುಡಕಬೇಕು. ಕಾಂಪೀಟ್ ಮಾಡಲೇಬೇಕು. ಐದು ಭಾಷೆಗಳ ಸಿನಿಮಾ ಜತೆ ನಾವು ಕಾಂಪೀಟ್ ಮಾಡಲೇಬೇಕು. ಯಾವತ್ತಿಗೂ ಗ್ರಾಫ್ ಒಂದೇ. ನೂರರಲ್ಲಿ 5 ಸಿನಿಮಾ ಲಾಭ ಮಾಡುತ್ತೆ. 5 ಅಲ್ಲಿಗಲ್ಲಿಗೆ ಸರಿ ಹೋಗತ್ತೆ. 90 ಸಿನಿಮಾ ಫ್ಲಾಪ್ ಆಗಿರುತ್ತದೆ. ಆ ಕಾಲದಿಂದ ಇದೇ ನಡೆದು ಬರುತ್ತಿರುವುದು ಇದೆʼʼಎಂದರು.