Site icon Vistara News

Actor Ravichandran: ಪ್ರೇಮಲೋಕ 2 : ಸಿನಿಮಾದಲ್ಲಿ ಎಲ್ಲರಿಗೂ ನಟಿಸೋ ಅವಕಾಶ ಇದೆ ಎಂದ ರವಿಚಂದ್ರನ್‌!

Actor Ravichandran To Start Shooting For Premaloka 2

ಬೆಂಗಳೂರು: ಹಂಪಿ ಉತ್ಸವದ ಸಮಯದಲ್ಲಿ ಕ್ರೇಜಿ ಸ್ಟಾರ್‌ ರವಿಚಂದ್ರನ್‌ (Actor Ravichandran) ಅವರು ಒಂದು ವರ್ಷದಿಂದ ಪ್ರೇಮಲೋಕ ಸಿನಿಮಾಗೆ ತಯಾರಿ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದರು. ಈ ಮೂಲಕ ‘ಪ್ರೇಮಲೋಕ 2’ ಶೀಘ್ರದಲ್ಲಿಯೇ ಅನೌನ್ಸ್ ಆಗಲಿದೆ ಎಂಬ ಸುಳಿವು ನೀಡಿದ್ದರು. ಕೊಪ್ಪಳದ ಕನಕಗಿರಿ ಉತ್ಸವದಲ್ಲಿ ‘ಪ್ರೇಮಲೋಕ 2’ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈಗ ಈ ಚಿತ್ರಕ್ಕೆ ಸೀಕ್ವೆಲ್ ಮಾಡುವ ಬಗ್ಗೆ ರವಿಚಂದ್ರನ್ ಮಾತನಾಡಿದ್ದಾರೆ.

1987ರಲ್ಲಿ ರಿಲೀಸ್ ಆದ ‘ಪ್ರೇಮಲೋಕ’ ಸಿನಿಮಾ ರವಿಚಂದ್ರನ್ ಅವರೇ ನಿರ್ಮಾಣ ಮಾಡಿ, ನಟಿಸಿ, ನಿರ್ದೇಶನ ಮಾಡಿದ್ದರು. ಅಂದಿನ ಕಾಲಕ್ಕೆ ಈ ಸಿನಿಮಾ ಬರೋಬ್ಬರಿ 11 ಹಾಡುಗಳನ್ನು ಹೊಂದಿತ್ತು. ಈ ಕಾರಣಗಳಿಂದಾಗಿ ಯಾರೋಬ್ಬ ನಿರ್ಮಾಪಕರು ಮುಂದೆ ಬರಲೇ ಇಲ್ಲ. ಹೀಗಾಗಿ ರವಿಚಂದ್ರನ್‌ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ವೇಳೆ ಬೆಂಬಲಕ್ಕೆ ನಿಂತಿದ್ದು ರವಿಚಂದ್ರನ್ ತಂದೆ ವೀರಸ್ವಾಮಿ. ಇದಾದ ಬಳಿಕ ಸಿನಿಮಾ ಗೆಲುವು ಕಂಡಿತ್ತು. ಈಗ ಈ ಚಿತ್ರಕ್ಕೆ ಸೀಕ್ವೆಲ್ ಮಾಡುವ ಬಗ್ಗೆ ರವಿಚಂದ್ರನ್ ಮಾತನಾಡಿದ್ದಾರೆ.

‘ಮೇ 30ಕ್ಕೆ ಪ್ರೇಮಲೋಕ 2 ಸಿನಿಮಾ ಶುರುವಾಗುತ್ತದೆ. ದೊಡ್ಡ ಮಗ ಮನೋರಂಜನ್ ನಟಿಸುತ್ತಾನೆ. ಚಿಕ್ಕ ಮಗ ಚಿಕ್ಕ ಪಾತ್ರ ಮಾಡುತ್ತಾನೆ. ನಾನು ತಂದೆಯ ಪಾತ್ರ ಮಾಡುತ್ತೇನೆ. 20-25 ಹಾಡುಗಳು ಇರುತ್ತವೆ. ಎಲ್ಲಾ ವಯಸ್ಸಿನವರಿಗೂ ಸಿನಿಮಾ ಇಷ್ಟ ಆಗುತ್ತದೆ. ಇಲ್ಲಿ ಜಾತಿ, ರಾಜಕೀಯದ ವಿಚಾರ ಇರಲ್ಲ. ಕೇವಲ ಪ್ರೀತಿ ವಿಚಾರ ಇರಲಿದೆ. ಪ್ರತಿಯೊಬ್ಬರಿಗೂ ಸಿನಿಮಾದಲ್ಲಿ ನಟಿಸುವ ಅವಕಾಶ ಇದೆ. ಸಿನಿಮಾದಲ್ಲಿ ಯಾರೆಲ್ಲ ನಟಿಸಬೇಕು ಎಂದಿದ್ದೀರೋ ಇನ್​ಸ್ಟಾಗ್ರಾಮ್‌ ಅಕೌಂಟ್​ಗೆ ಫ್ಯಾಮಿಲಿ ಫೋಟೊ ಹಾಕ್ಕೊಂಡು ಬನ್ನಿʼʼಎಂದಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿ ಬಗ್ಗೆ ಸುಳ್ಳು ಹೇಳೋದ್ಯಾಕೆ? ಸಿ.ಟಿ.ರವಿ ನಿನಗೆ ಮಾನ ಮರ್ಯಾದೆ ಇದ್ಯಾ: ಸಿದ್ದರಾಮಯ್ಯ ವಾಗ್ದಾಳಿ

ʻಪ್ರೇಮ ಲೋಕʼ ಕಟ್ಟಿಕೊಡ್ತೀನಿ ಎಂದಿದ್ದ ರವಿಮಾಮ

ಹಂಪಿ ಉತ್ಸವದ ಸಮಯದಲ್ಲಿ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಅವರು ಒಂದು ವರ್ಷದಿಂದ ಪ್ರೇಮಲೋಕ ಸಿನಿಮಾಗೆ ತಯಾರಿ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದರು. ವೇದಿಕೆಯಲ್ಲಿ ರವಿಚಂದ್ರನ್‌ ಮಾತನಾಡಿ ʻʻಪ್ರೇಮಲೋಕ ಶುರುವಾಗಿಯೂ 36ರಿಂದ 37 ವರ್ಷ ಆಯ್ತು. ನಾನು ಹಂಪಿಗೆ ಬರುವುದಕ್ಕೆ 36 ವರ್ಷ ತೆಗೆದುಕೊಂಡಿದೆ. ಯಾವಾಗ ಬಂದಿದ್ದೇನೆ ಅಂದರೆ, ಮತ್ತೆ ಇನ್ನೊಂದು ಪ್ರೇಮಲೋಕ ಶುರು ಮಾಡಬೇಕು ಅಂತ ಕನಸು ಕಂಡಾಗ ಬಂದಿದ್ದೇನೆ. ಈ ಊರು ನನ್ನನ್ನು ಕರೆಸಿಕೊಂಡಿದೆ. ಪ್ರೇಮಲೋಕ ಸಿನಿಮಾ ಶುರು ಮಾಡಿದಾಗ, ಪಿಕ್ಚರ್ ನೋಡಿದ ತಕ್ಷಣ ನಮ್ಮ ಅಪ್ಪ ನನ್ನನ್ನು ತಬ್ಬಿಕೊಳ್ತಾರೆ. ನನ್ನ ಹಿಂದೆ ಅಳುತ್ತಾರೆ. ನಾನು ಅವತ್ತಿಗೆ ಒಂದು ಕಾಲು ಕೋಟಿ ಖರ್ಚು ಮಾಡಿದ್ದೆ. ಒಂದು ಶೋನಲ್ಲಿ ಅರುಣ್‌ ಸಾಗರ್‌ ಹೇಳಿದ್ರು. ಒಮ್ಮೆ ಗೆಲ್ತಾರೆ, ಒಮ್ಮೆ ಸೋಲ್ತಾರೆ ಎಂದು. ನಾನು ಸೋತಿದ್ದೇ ಇಲ್ಲ. ನಾನು ಅಂದುಕೊಂಡ ಹಾಗೇ ಸಿನಿಮಾ ಮಾಡಬೇಕು ಎಂಬುದು ನನ್ನ ಆಸೆ. ಆದರೆ ನೀವು ಸಿನಿಮಾ ನೋಡಲ್ಲ ಎನ್ನುವುದೇ ದುಃಖ. ಸಿನಿಮಾ ದುಡ್ಡು ಮಾಡದೇ ಇರಬಹುದು. ಅಂದ್ಕೊಂಡ ಹಾಗೇ ಸಿನಿಮಾ ಮಾಡಿದ್ನಲ್ಲ ಅದೇ ನನ್ನ ಗೆಲುವು. ಒಂದು ವರ್ಷ ಸುಮ್ಮನೆ ಕೂತಿಲ್ಲ. ಮತ್ತೆ ಪ್ರೇಮಲೋಕ ಕಟ್ಟಿ ಕೊಡುತ್ತೇನೆʼʼ ಎಂದಿದ್ದರು.

Exit mobile version