Site icon Vistara News

Actor Rishi: ರಿಷಿ ‘ರಾಮನ ಅವತಾರ’ ದರ್ಶನಕ್ಕೆ ಮುಹೂರ್ತ ಫಿಕ್ಸ್!

Actor Rishi Rishi Ramarajya on set

ಬೆಂಗಳೂರು: ತಮ್ಮ ಕಾಮಿಡಿ ಪಂಚ್‌ ಡೈಲಾಗ್‌ ಮೂಲಕವೇ ಹೆಸರು (Actor Rishi) ಪಡೆದ ಪ್ರತಿಭಾನ್ವಿತ ನಟ ರಿಷಿ. ಹಾಗಂತ ಅವರು ಬರೀ ಕಾಮಿಡಿಯನ್ನಷ್ಟೇ ಮಾಡುವುದಿಲ್ಲ. ‘ಕವಲುದಾರಿ‘ಯಂತಹ ಗಂಭೀರ ಸಿನಿಮಾದಲ್ಲೂ ಮನಮುಟ್ಟುವಂತೆ ನಟಿಸಿದ್ದಾರೆ. ರಿಷಿ ಈಗ ‘ರಾಮನ ಅವತಾರದಲ್ಲಿ ದರ್ಶನ ಕೊಡುವುದಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

ರಿಷಿ ನಟನೆಯ ರಾಮನ ಅವತಾರ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಮೇ 10ಕ್ಕೆ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ. ಏಪ್ರಿಲ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿತ್ತು. ಆದರೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆ ತಡವಾಗಿದೆ. ಎಲೆಕ್ಷನ್ ಮುಗಿದ ತಕ್ಷಣ ಸಿನಿಮಾ ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ರಿಷಿ ಸ್ಪೆಷಲ್ ವಿಡಿಯೊ ಮೂಲಕ ರಾಮನ ಅವತಾರ ಸಿನಿಮಾ ಬಿಡುಗಡೆ ದಿನಾಂಕವನ್ನು ರಿವೀಲ್ ಮಾಡಿದ್ದಾರೆ. ಪಕ್ಕ ಮೇ 10ಕ್ಕೆ ಬರುತ್ತೇವೆ. ಎಲೆಕ್ಷನ್ ರಿಸಲ್ಟ್‌ಗೂ ಮೊದಲೇ ನಮ್ಮ ಸಿನಿಮಾ ರಿಸಲ್ಟ್ ಬರಲಿದೆ ಎಂದಿದ್ದಾರೆ. ಪ್ರಮೋಷನ್ ಅಖಾಡಕ್ಕೆ ಇಳಿಯುವುದಕ್ಕೆ ಇಡೀ ತಂಡ ಸಿದ್ಧವಾಗಿದ್ದು, ರಾಮರಾಜ್ಯ ಕಟ್ಟುವುದಕ್ಕೆ ರಾಮನ ಅವತಾರ ಬಳಗ ಸಜ್ಜಾಗಿ ನಿಂತಿದೆ.

ಇದನ್ನೂ ಓದಿ: Kannada New Film | ಹೊಸ ಸಿನಿಮಾ ಅನೌನ್ಸ್‌ ಮಾಡಿದ ನಟ ರಿಷಿ: ಪ್ರಶಾಂತ್ ರಾಜಪ್ಪ ಆ್ಯಕ್ಷನ್‌ ಕಟ್‌!

‘ರಾಮನ ಅವತಾರ’ ಸಿನಿಮಾದಲ್ಲಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದು, ಅರುಣ್ ಸಾಗರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವಿಕಾಸ್ ಪಂಪಾಪತಿ ‘ರಾಮನ ಅವತಾರ’ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ವಿಕಾಸ್ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಟೀಸರ್ ಹಾಗೂ ಹಾಡುಗಳ ಮೂಲಕ ರಾಮನ ಅವತಾರ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ.

ಸ್ಟಾರ್ ಫ್ಯಾಬ್ ಪ್ರೊಡಕ್ಷನ್ನಡಿ ‘ಆಪರೇಷನ್ ಅಲಮೇಲಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಕೈಚಳಕವಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದು, ಅಮರನಾಥ್ ಸಂಲಕನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ನಡೆಸಲಾಗಿದೆ.

Exit mobile version