ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ನಟ ಶರಣ್ ಅವರು ಮೊದಲಿಗೆ (Actor Sharan) ಕಾಮಿಡಿ ಮೂಲಕ ಪ್ರೇಕ್ಷಕರನ್ನು ಸೆಳೆದವರು. ನಟನಾಗುವ ಮುಂಚೆ ಲಾರಿ ಕ್ಲೀನರ್ ಆಗಿದ್ದರು ಎಂದರೆ ನೀವು ನಂಬಲೇ ಬೇಕು. ಖ್ಯಾತ ನಟಿ ಶ್ರುತಿ ಅವರ ಸಹೋದರ ಶರಣ್ ಹಲವು ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದಾರೆ. ಆರಂಭದ ಹಲವಾರು ಸಿನಿಮಾಗಳಲ್ಲಿ ಹಾಸ್ಯನಟರಾಗಿ ಮಿಂಚಿ ಬಳಿಕ ನಾಯಕ ನಟನಾಗಿ ಮಿಂಚಿದರು.
ಶರಣ್ ಅವರು ಹಲವು ಕಷ್ಟಗಳನ್ನು ಜೀವನದಲ್ಲಿ ಕಂಡಿದ್ದಾರೆ. ಆ ಬಗ್ಗೆ ಅವರೇ ಸಣ್ಣ ಫೋಸ್ಟ್ ಒಂದನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. “ಚಿತ್ರರಂಗಕ್ಕೆ ಕಾಲಿಡುವ ಮುನ್ನ , ಕೆಲಸ ಹುಡುಕುತ್ತಿದ್ದ ಸಮಯ. , ಕೆಲ ಸಮಯ ಲಾರಿ ಕ್ಲೀನರ್ ಆಗಿ ಕೆಲ್ಸ ಮಾಡಿದ್ದುಂಟು. ಆಗ ಲಾರಿ ಕೊಳ್ಳುವ ಕನಸು ಕಂಡಿದ್ದೂ ಉಂಟು. ಆದರೇ ಲಾರಿಯಲ್ಲಿ ಶುರುವಾದ ನನ್ನ ಪಯಣ ಬೆಳ್ಳಿ ಪರದೆಯ ಮೇಲೆ ಬಂದು ನಿಂತಿರುವುದು ಕಂಡರೆ ಆ ಭಗವಂತನ ಲೀಲೆ’ಗೆ’ಎಂದು ಬರೆದುಕೊಂಡಿದ್ದಾರೆ.
ಲಾರಿಯೊಂದರ ಮುಂದೆ ನಿಂತು ಟೀ ಕುಡಿಯುತ್ತಿರುವ ಚಿತ್ರವನ್ನು ನಟ ಹಂಚಿಕೊಂಡಿದ್ದಾರೆ. ದು, ‘ಲಾರಿಯ ಹಿಂದೆ ನಿಲ್ಲುವುದರಿಂದ ಆರಂಭವಾಗಿ ಬೆಳ್ಳಿ ಪರದೆಯ ಮುಂದೆ ಬಂದಿರುವ ಈ ಪಯಣ ಅದ್ಭುತ, ಜೀವನ ಅಚ್ಚರಿಗಳ ಸರಮಾಲೆ’ ಎಂದಿದ್ದಾರೆ ಶರಣ್.
ಇದನ್ನೂ ಓದಿ: Actor Yash: ಯಶ್ ಹೊಸ ಹೇರ್ ಸ್ಟೈಲ್ ಯಾವ ಸಿನಿಮಾಗಾಗಿ? ಕೇಶ ವಿನ್ಯಾಸಕ ಕೊಟ್ಟೇ ಬಿಟ್ರು ಬಿಗ್ ಅಪ್‌ಡೇಟ್!
ಇನ್ನು ಶರಣ್ ಅವರು ‘ಕರ್ಪೂರದ ಗೊಂಬೆ’, ‘ಪ್ರೇಮ ಪ್ರೇಮ ಪ್ರೇಮ’ ಸಿನಿಮಾಗಳ ಮೂಲಕ ಶರಣ್ ನಟರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.2012 ರಲ್ಲಿ ಬಿಡುಗಡೆ ಆದ ‘ರ್ಯಾಂಬೊ’ ಸಿನಿಮಾ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ಟರು.
ಜೈಲಲಿತ ಸಿನಿಮಾದಲ್ಲಿ ನಟ ಶರಣ್ ಮಹಿಳೆಯ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದರು. ಮಲಯಾಳಂನ ‘ಮಾಯಾ ಮೋಹಿನಿ’ ಎಂಬ ಹಿಟ್ ಸಿನಿಮಾ ಸ್ಪೂರ್ತಿಯಿಂದ ಈ ಸಿನಿಮಾ ಮಾಡಲಾಗಿತ್ತು. ಕಾಮಿಡಿ ಜೊತೆಗೆ ಮಾನವ ಸಂಬಂಧಗಳ ಮಹತ್ವ ಸಾರುವ ಈ ಸಿನಿಮಾವನ್ನು ಪಿ ಕುಮಾರ್ ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಹರೀಶ್ ರಾಜ್, ರವಿಶಂಕರ್, ಟಿ.ಎಸ್. ನಾಗಾಭರಣ, ದಿಶಾ ಪಾಂಡೆ, ಐಶ್ವರ್ಯ ದೇವನ್ ಸೇರಿದಂತೆ ಹಲವರ ತಾರಾಬಳಗವೇ ಸಿನಿಮಾದಲ್ಲಿತ್ತು.