Site icon Vistara News

Actor Sudeep: ತೂಕ ಇಳಿಸಿರುವ ವಿಡಿಯೊ ಹಂಚಿಕೊಂಡ ಸುದೀಪ್‌ ಪುತ್ರಿ ಸಾನ್ವಿ!

Actor Sudeep daughter Sanvi shared weight loss journey

ನಟ ಸುದೀಪ್ (Actor Sudeep) ಪುತ್ರಿ ಸಾನ್ವಿ (Sanvi Sudeep) ಸದ್ಯ ತೂಕ ಇಳಿಸಿರುವ ವಿಡಿಯೊ ಹಂಚಿಕೊಂಡಿದ್ದಾರೆ. ‘ಸಣ್ಣ ಹೆಜ್ಜೆಗಳು. ಆದರೆ ಈ ಬಗ್ಗೆ ಕೆಲಸ ನಡೀತಿದೆ’ ಎಂದು ಸಾನ್ವಿ ಬರೆದುಕೊಂಡಿದ್ದಾರೆ.

ಸಾನ್ವಿ (Actor Sudeep) ಅವರು ಈಗಾಗಲೇ ʻಜಿಮ್ಮಿʼ ಚಿತ್ರಕ್ಕೆ ಹಾಡಿ ಸೈ ಎನಿಸಿಕೊಂಡಿದ್ದಾರೆ. ಆಗಾಗ ತಮ್ಮ ಪುಸ್ತಕ ಪ್ರೀತಿ, ಇದರೊಂದಿಗೆ ನಟನೆಯ ರೀಲ್ಸ್ ಕೂಡ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ.

ಇದೀಗ ವಿಡಿಯೊದಲ್ಲಿ ಸಾನ್ವಿ ಮೊದಲಿಗಿಂತ ಸ್ವಲ್ಪ ಸಣ್ಣಗಾಗಿರುವುದನ್ನು ಹಾಗೂ ಇನ್ನಷ್ಟು ಸಣ್ಣಗಾಗಲು ಅವರು ಸಜ್ಜಾಗಿರುವುದನ್ನು ಕಾಣಬಹುದು.


‘ನಿಮ್ಮ ಪ್ರಯತ್ನಗಳು ನಿಮ್ಮ ಬದಲಾವಣೆಯಲ್ಲಿ ಕಾಣಿಸುತ್ತಿವೆ. ಆಲ್ ದ ಬೆಸ್ಟ್’ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ‘ಸೇಮ್ ಕಿಚ್ಚ ಬಾಸ್ ತರಾನೇ ಇದ್ದೀರಾʼʼಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Lok Sabha Election 2024: ಈ ಸಲ ಗೆಲುವು ನಿರ್ಣಯಿಸುವ ಬುಡಕಟ್ಟು ಮತಗಳು ಯಾರಿಗೆ? ಇಲ್ಲಿದೆ ಲೆಕ್ಕಾಚಾರ

ಈ ರೀತಿ ಸಡನ್‌ ಆಗಿ ಸುದೀಪ್‌ ಅವರ ಮಗಳನ್ನು ಕಂಡು ಚಿತ್ರರಂಗಕ್ಕೆ ಬರೋದಕ್ಕೆ ತಯಾರಾಗ್ತಿದ್ದಾರೆ ಎಂದು ಕಿಚ್ಚನ ಫ್ಯಾನ್ಸ್‌ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

Exit mobile version