Site icon Vistara News

Actor Yash: ಕಿರಾಣಿ ಅಂಗಡಿಯಲ್ಲಿ ಮಗಳಿಗೆ ಚಾಕ್ಲೇ‌ಟ್‌ ಕೊಡಿಸಿದ ಯಶ್‌; ಐಸ್‌ಕ್ಯಾಂಡಿ ಸವಿದ ರಾಧಿಕಾ!

Actor Yash bargain with his daughter at the grocery store bhatkal

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ಹಾಗೂ ನಟಿ ರಾಧಿಕಾ ಪಂಡಿತ್‌ ಭಟ್ಕಳ ಚಿತ್ರಾಪುರ ಮಠಕ್ಕೆ ಭೇಟಿ (ಫೆ.16) ನೀಡಿದ್ದಾರೆ. ಜೋಡಿಯನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಇದೇ ವೇಳೆ ದಂಪತಿಯ ಫೋಟೊವೊಂದು ವೈರಲ್‌ ಆಗಿದೆ. ಯಶ್, ಮಗಳು ಐರಾ ಹಾಗೂ ರಾಧಿಕಾ ತಂದೆ ಕಿರಾಣಿ ಅಂಗಡಿಗೆ ಭೇಟಿ ಕೊಟ್ಟಿದ್ದಾರೆ. ಫೋಟೊದಲ್ಲಿ ಮಗಳು ಐರಾಗೆ ಯಶ್ ಏನೋ ತಿನಿಸು ಕೊಡಿಸುತ್ತಿದ್ದಾರೆ. ಇನ್ನು ರಾಧಿಕಾ ಪಂಡಿತ್‌ ಸಾಮಾನ್ಯರಂತೆ ಕಟ್ಟೆ ಮೇಲೆ ಕೂತಿದ್ದಾರೆ. ಬ್ರ್ಯಾಂಡ್‌ ವಸ್ತುಗಳನ್ನು ಖರೀದಿಸುವ ರಾಕಿಂಗ್ ದಂಪತಿ ಸಾಮಾನ್ಯರಂತೆ ಕಿರಾಣಿ ಅಂಗಡಿಯಲ್ಲಿ ಖರೀದಿಸುತ್ತಿರುವ ಫೋಟೊ ಕಂಡು ಫ್ಯಾನ್ಸ್ ಹಾಡಿ ಹೊಗಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಸರಳತೆಗೆ ಫಿಧಾ ಆಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಶಿರಾಲಿಯಲ್ಲಿ ಇರುವ ಮಠ ತುಂಬಾ ಪ್ರಸಿದ್ಧವಾಗಿದ್ದು ದೂರದೂರುಗಳಿಂದಲೂ ಭಕ್ತರು ಬರುತ್ತಾರೆ. ಯಶ್ ಅವರು ಚಿತ್ರಾಪುರ ಮಠದ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಯಶ್ ದಂಪತಿ ಆಗಮನದ‌ ಹಿನ್ನಲೆ ಮಠದ ಸುತ್ತ ಯಶ್ ಅಭಿಮಾನಿಗಳು ನೆರೆದಿದ್ದರು. ನೆಚ್ಚಿನ ನಟನನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದರು. ಚಿತ್ರಾಪುರ ಮಠಕ್ಕೆ ಭೇಟಿ ಕೊಟ್ಟ ಯಶ್ ದಂಪತಿಯನ್ನು ನೋಡಲು ಅಪಾರ ಅಭಿಮಾನಿಗಳು ಜಮಾಯಿಸಿದ್ದರು. ಸ್ಥಳದಲ್ಲಿ ಪೊಲೀಸರನ್ನೂ ನಿಯೋಜಿಸಲಾಗಿತ್ತು.

ಇದನ್ನೂ ಓದಿ: Actor Yash: ರಾವಣನ ಬಳಿಕ ಹನುಮಂತ ಪಾತ್ರದಲ್ಲಿ ಯಶ್‌ ? ರಾಕಿಂಗ್‌ ಸ್ಟಾರ್‌ ಆಪ್ತ ಮೂಲಗಳು ಹೇಳಿದ್ದೇನು?

ʼಕೆಜಿಎಫ್‌ʼ ಚಿತ್ರದ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ ರಾಕಿಂಗ್‌ ಸ್ಟಾರ್‌ ಯಶ್‌ (Yash) ಅವರ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ʼಕೆಜಿಎಫ್‌ 2ʼ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಸುಮಾರು ಒಂದೂವರೆ ವರ್ಷದ ಬಳಿಕ ಯಶ್‌ ಅಭಿನಯದ ʼಟಾಕ್ಸಿಕ್‌ʼ (Toxic) ಸಿನಿಮಾ ಘೋಷಣೆಯಾಗಿದೆ. ಮಲಯಾಳಂ ಮೂಲದ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಇದೀಗ ಚಿತ್ರದ ಬಗ್ಗೆ ಮಹತ್ವದ ಅಪ್‌ಡೇಟ್‌ ಹೊರಬಂದಿದ್ದು, ಬಾಲಿವುಡ್‌ ಖ್ಯಾತ ನಟಿ ಕರೀನಾ ಕಪೂರ್‌ (Kareena Kapoor) ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ (Toxic Movie Update).

ಕರೀನಾ ಕಪೂರ್‌ ʼಟಾಕ್ಸಿಕ್‌ʼ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಚಿತ್ರತಂಡ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಲಿದೆ. ಡಿಸೆಂಬರ್‌ನಲ್ಲಿ ಟೈಟಲ್‌ ರಿವೀಲ್‌ ಮಾಡಿದ ಬಳಿಕ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಂದಿರಲಿಲ್ಲ. ಶೀಘ್ರದಲ್ಲೇ ಗೋವಾ ಸೇರಿದಂತೆ ವಿವಿಧ ಕಡೆಗಳಲ್ಲಿ ಚಿತ್ರೀಕರಣ ಆರಂಭವಾಗುವ ನಿರೀಕ್ಷೆ ಇದೆ.

Exit mobile version