ರಾಕಿಂಗ್ ಸ್ಟಾರ್ ಯಶ್ (Actor Yash) ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿ ಕೊಟ್ಟಿದ್ದಾರೆ. ‘ಪಯಣ ಶುರುವಾಗಿದೆ’ ಎಂದು ಯಶ್ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ‘ಟಾಕ್ಸಿಕ್’ ಸಿನಿಮಾದ ಶೂಟ್ ಇಂದಿನಿಂದ ಆರಂಭ ಆಗಿದೆ ಎಂಬುದನ್ನು ಅಧಿಕೃತ ಮಾಡಿದ್ದಾರೆ.
ಇಂದು ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಟಾಕ್ಸಿಕ್‌ಗೆ ಮುಹೂರ್ತ ಫಿಕ್ಸ್ ಆಗಿದೆ ಎನ್ನಲಾಗಿದೆ. ಎಚ್ ಎಮ್ ಟಿ ಫ್ಯಾಕ್ಟರಿ ಸಿದ್ದವಾಗಿರುವ ಟಾಕ್ಸಿಕ್ ಸೆಟ್‌ನಲ್ಲೇ ಮುಹೂರ್ತ ನೆರವೇರಿದೆ. ಮೂರು ವರ್ಷಗಳ ನಂತರ ಕೊನೆಗೂ ಯಶ್ 19 ಚಿತ್ರಕ್ಕೆ ಚಾಲನೆ ದೊರಕಿದೆ.
ಹೊಸ ಚಿತ್ರ ʼಟಾಕ್ಸಿಕ್ʼನ (Toxic) ಶೂಟಿಂಗ್ ಇನ್ನು ಮೇಲೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಪುಣ್ಯಕ್ಷೇತ್ರ ದರ್ಶನ ಮಾಡಿದ್ದರು. ಧರ್ಮಸ್ಥಳದ ಶ್ರೀ ಮಂಜುನಾಥ ದೇವರ ದರ್ಶನ ಮಾಡಿದ್ದು, ನಂತರ ಬೆಳ್ತಂಗಡಿಯ ಸೂರ್ಯ ದೇವಸ್ಥಾನಕ್ಕೆ ವಿಸಿಟ್ ಕೊಟ್ಟಿದ್ದರು. ಜೊತೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ (Dr Veerendra Heggade) ಅವರನ್ನೂ ಭೇಟಿಯಾಗಿ ಆಶೀರ್ವಾದ ಪಡೆದರು. ಟಾಕ್ಸಿಕ್’ ಚಿತ್ರವನ್ನು ‘ಕೆವಿಎನ್ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಮಾಡಲಾಗುತ್ತಿದೆ. ವೆಂಕಟ್ ಕೆ. ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ವೆಂಕಟ್ ಜೊತೆ ಇರೋ ಫೋಟೋನ ಯಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ಗೆ ಅರ್ಧಗಂಟೆಯಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ.ಆಗಸ್ಟ್ 8ರಂದು ಶೂಟಿಂಗ್ ಆರಂಭಿಸುವುದಕ್ಕೂ ಒಂದು ಕರಣ ಇದೆ. ಎಂಟನ್ನು ಯಶ್ ಅವರು ಲಕ್ಕಿ ಎಂದು ಪರಿಗಣಿಸುತ್ತಾರೆ. 8-8-2024 (2+0+2+4=8). ಈ ಕಾರಣಕ್ಕೆ ಆಗಸ್ಟ್ 8ರಿಂದ ಶೂಟಿಂಗ್ ಆರಂಭಿಸಲಾಗಿದೆ ಎಂದು ವರಯಲಾಗಿದೆ.
ಇದನ್ನೂ ಓದಿ: Actor Yash: ಧರ್ಮಸ್ಥಳದಲ್ಲಿ ರಾಕಿಂಗ್ ಸ್ಟಾರ್ ಯಶ್, ಟಾಕ್ಸಿಕ್ ಶೂಟಿಂಗ್‌ಗೂ ಮುನ್ನ ಟೆಂಪಲ್ ರನ್
ಕೆಜಿಎಫ್ 2ʼ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಸುಮಾರು ಒಂದೂವರೆ ವರ್ಷದ ಬಳಿಕ ಯಶ್ ಅಭಿನಯದ ʼಟಾಕ್ಸಿಕ್ʼ (Toxic) ಸಿನಿಮಾ ಘೋಷಣೆಯಾಗಿದೆ. ಮಲೆಯಾಳಂ ಮೂಲದ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಟ ಯಶ್ ಮತ್ತು ನಯನತಾರಾ ಮೊದಲ ಬಾರಿಗೆ ಜೊತೆಯಾಗುತ್ತಿದ್ದಾರೆ, ಇದರಲ್ಲಿ ಕಿಯಾರಾ ಆಡ್ವಾಣಿ, ಹುಮಾ ಖುರೇಷಿ ಮತ್ತು ಶ್ರುತಿ ಹಾಸನ್ ಕೂಡ ಇದ್ದಾರೆ. ಇದೀಗ ಸಿನಿಮಾ ಕುರಿತು ಹೊಸ ಸಂಗತಿವೊಂದು ವೈರಲ್ ಆಗುತ್ತಿದೆ. ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಹೀರೋ ಆಗಿರವುದು ಬಿಟ್ಟರೆ ಬೇರೆ ಯಾರೆಲ್ಲಾ ಬಣ್ಣ ಹಚ್ಚಲಿದ್ದಾರೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ.
ಇದರ ಜತೆಗೆ ಮಲಯಾಳಂ ನಟ ಟೊವಿನೋ ಥಾಮಸ್ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿದೆ. ಆದರೆ ಚಿತ್ರತಂಡ ಇದುವರೆಗೆ ಇದ್ಯಾವುದನ್ನೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಹೀಗಾಗಿ ಸಿನಿ ಪ್ರಿಯರಲ್ಲಿ ಕುತೂಹಲ ಮನೆ ಮಾಡಿದೆ. ಬರೋಬ್ಬರಿ 170 ಕೋಟಿ ರೂಪಾಯಿ ಬಜೆಟ್‌ನ ಈ ಯಶ್ (Yash) ಚಿತ್ರ ಡ್ರಗ್ ಮಾಫಿಯಾ ಬಗ್ಗೆ ಬೆಳಕು ಚೆಲ್ಲಲಿದೆ ಎಂದು ಮೂಲಗಳು ತಿಳಿಸಿವೆ. 2025ರಲ್ಲಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದೆ.