Site icon Vistara News

Actor Yash: ಚಿಕ್ಕಣ್ಣ `ಉಪಾಧ್ಯಕ್ಷʼ ಸಿನಿಮಾಗೆ ಶುಭ ಹಾರೈಸಿ , ಒಟ್ಟಿಗೆ ಬ್ರೇಕ್​ಫಾಸ್ಟ್ ಮಾಡಿದ ಯಶ್-ರಾಧಿಕಾ!

Yash-Radhika had breakfast together to wish Chikkanna Upadhyaksha movie

ಸ್ಯಾಂಡಲ್‌ವುಡ್‌ನಲ್ಲಿ (Actor Yash) ಕಾಮಿಡಿ ಕಿಂಗ್ ಎಂದೇ ಖ್ಯಾತರಾಗಿರುವ ಚಿಕ್ಕಣ್ಣ ಈಗ ನಾಯಕನಾಗಿ ಮೋಡಿ ಮಾಡಲು ಸಜ್ಜಾಗಿದ್ದಾರೆ. ನಟ ಶರಣ್ ಹಾಗೂ ಚಿಕ್ಕಣ್ಣ ಅಭಿನಯದ ಕಾಮಿಡಿ ಬ್ಲಾಕ್​ ಬಸ್ಟರ್ ಸಿನಿಮಾ ಅಧ್ಯಕ್ಷ. ಅದರಲ್ಲಿ ಉಪಾಧ್ಯಕ್ಷರಾಗಿದ್ದವರು ಚಿಕ್ಕಣ್ಣ. ಆ ಪಾತ್ರದ ಮೂಲಕ ಚಿಕ್ಕಣ್ಣ ಜನರಿಗೆ ಬಹಳ ಹತ್ತಿರವಾಗಿದ್ದರು. ಅದೇ ಹೆಸರಿನ ಸಿನಿಮಾ ರಿಲೀಸ್ ಆಗಿದೆ.

ಈ ಚಿತ್ರಕ್ಕೆ ಯಶ್ ಶುಭ ಹಾರೈಸಿದ್ದಾರೆ. ಚಿಕ್ಕಣ್ಣ ಜತೆ ಸಿನಿಮಾ ನಾಯಕಿ ಮಲೈಕಾ ಕೂಡ ಇದ್ದರು. ಯಶ್ ಹಾಗೂ ಚಿಕ್ಕಣ್ಣ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಹೀಗಾಗಿ, ಯಶ್ ಹಾಗೂ ಚಿಕ್ಕಣ್ಣ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

ಇದೊಂದು ಕಾಮಿಡಿ ಸಿನಿಮಾವಾಗಿದ್ದು, ಮೊದಲ ಸೀನ್​ನಿಂದ ಹಿಡಿದು ಕ್ಲೈಮ್ಯಾಕ್ಸ್ ತನಕ‌ ಜನರನ್ನು  ನಗಿಸುತ್ತದೆ. ಒಳ್ಳೆಯ ಮನರಂಜನೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಾಮಿಡಿ ಸಿನಿಮಾವಾದರೂ ಸಹ ಇದರಲ್ಲಿ ಭಾವನಾತ್ಮಕ ಸನ್ನಿವೇಶಗಳು ಸಹ ಇದೆ. ಜನರಿಗೆ ಇಷ್ಟವಾಗುತ್ತದೆ ಎಂದು ಪ್ರೇಕ್ಷಕರು ಹೊಗಳಿದ್ದಾರೆ.

ಇದನ್ನೂ ಓದಿ: Actor Yash: ಮೃತ ಅಭಿಮಾನಿಗಳಿಗೆ 5 ಲಕ್ಷ ರೂ. ಪರಿಹಾರ ಕೊಟ್ಟ ಯಶ್‌!

ಇನ್ನು ಈ ಚಿತ್ರಕ್ಕೆ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಶೇಖರ್ ಚಂದ್ರ ಅವರ ಛಾಯಾಗ್ರಹಣವಿದೆ. ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಅಧ್ಯಕ್ಷ ಚಿತ್ರದಲ್ಲಿ ಅಭಿನಯಿಸಿದ್ದ ಬಹುತೇಕ ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ.

Exit mobile version