Site icon Vistara News

Actress Aparna: ಮೆಟ್ರೋದಲ್ಲಿ ಪ್ರಯಾಣಿಸುವಾಗ ಕಣ್ಣುಮುಚ್ಚಿ ಅಪರ್ಣಾರ ಸ್ಪಷ್ಟ ಕನ್ನಡ ಸವಿಯಿರಿ ಎಂದು ಪೋಸ್ಟ್‌ ಮಾಡಿದ BMRCL!

Actress Aparna Namma Metro post on honour

ಬೆಂಗಳೂರು: ಖ್ಯಾತ ನಿರೂಪಕಿ ಅಪರ್ಣಾ ನಿಧನರಾಗಿದ್ದಾರೆ.  ಮೆಟ್ರೋ ಆರಂಭ ಆದಾಗ, ಪ್ರಯಾಣಿಕರಿಗೆ ಮಾಹಿತಿಯನ್ನು ನೀಡುವುದಕ್ಕೆ ಮೊದಲು ಇವರ ಧ್ವನಿಯನ್ನೇ ಆಯ್ಕೆ ಮಾಡಲಾಗಿತ್ತು. ನಿಜಕ್ಕೂ ಮೆಟ್ರೋಗೆ ಕಳೆ ಅಂತ ಬಂದಿದ್ದೇ ಇವರ ಧ್ವನಿಯಿಂದ. ಅಪರ್ಣಾ (Anchor Aparna) ಅವರ ಧ್ವನಿಯನ್ನು ಮೆಟ್ರೋದಲ್ಲಿ ಮೊಳಗುವುದಕ್ಕೆ ಆರಂಭ ಆದ ಮೇಲೆ ಕನ್ನಡಿಗರು ಖುಷಿಯನ್ನು ವ್ಯಕ್ತಪಡಿಸಿದ್ದರು. ಸ್ವತ: ಅಪರ್ಣಾ ಅವರು ಮೆಟ್ರೋದಲ್ಲಿ ತಮ್ಮದೇ ಧ್ವನಿಯನ್ನು ಕೇಳುವುದಕ್ಕೆ ಹೋಗಿದ್ದರು. ನಿರೂಪಕಿ ಅಪರ್ಣಾ ಅವರಿಗೆ ಬಿಎಂಆರ್​ಸಿಎಲ್​ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ. ನಮ್ಮ ಮೆಟ್ರೋದಲ್ಲಿ ವಾಯ್ಸ್ ಅನೌನ್ಸ್ ಮಾಡವ ಮೂಲಕ ಗೌರವದ ಸಂತಾಪ ಸೂಚಿಸಿದ್ದಾರೆ.

“ಅದೆಷ್ಟೋ ಮೆಟ್ರೋ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಹೆಗ್ಗಳಿಕೆ ಇವರದ್ದು. ಇವರಿಗೆ ಭಾಷೆಯ ಮೇಲಿನ ಹಿಡಿತ ಮತ್ತು ಉಚ್ಛಾರಣೆ ಎರಡೂ ಕರಗತವಾಗಿತ್ತು. ಇವರ ಧ್ವನಿ ನಮ್ಮ ಮೆಟ್ರೋವಿನಲ್ಲಿ ಎಂದೆಂದಿಗೂ ಜೀವಂತ. ಮುಂದಿನ ಬಾರಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಕಣ್ಣು ಮುಚ್ಚಿ ಅವರ ಸ್ಪಷ್ಟ ಕನ್ನಡದ ಸವಿ ಸವಿಯಿರಿ”ಎಂದು ಬರೆದುಕೊಂಡಿದೆ .

ಇದನ್ನೂ ಓದಿ: Anchor Aparna: ಒನ್ ಆ್ಯಂಡ್ ಒನ್ಲಿ ವರಲಕ್ಷ್ಮಿ ‘ಮಜಾ ಟಾಕೀಸ್’ ನಿಂದ ಹೊರ ಬರಲು ನಿರ್ಧರಿಸಿದ್ದೇಕೆ?

ನಿರೂಪಕಿ ಅಪರ್ಣಾ ಅವರು ಕಳೆದ 13 ವರ್ಷಗಳಿಂದ ನಮ್ಮ ಮೆಟ್ರೋಗೆ ಧ್ವನಿ ನೀಡಿದ್ದಾರೆ. ಮೊದಲ ಬಾರಿಗೆ 2011ರ ಅಕ್ಟೋಬರ್ 20 ರಂದು ಎಂಜಿ ರೋಡ್​ನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ಸಂಚಾರ ಆರಂಭಿಸಿದಾಗಿನಿಂದ ಇತ್ತೀಚೆಗೆ 2023ರ ಅಕ್ಟೋಬರ್​ 9 ರಂದು ಉದ್ಘಾಟನೆಗೊಂಡ ಕೆಂಗೇರಿಯಿಂದ ಚಲ್ಲಘಟ್ಟ, ಕೆ.ಆರ್ ಪುರನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ರೈಲು ಮತ್ತು ನಿಲ್ದಾಣಗಳಲ್ಲಿ ನಟಿ ಅಪರ್ಣಾ ವಾಯ್ಸ್ ನೀಡಿದ್ದರು.  ಈ ಹಿನ್ನೆಲೆಯಲ್ಲಿ ಬಿಎಂಆರ್​ಸಿಎಲ್​ ಅಧಿಕಾರಿಗಳು ಅಪರ್ಣಾ ಅವರ ಮನೆಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿದರು. 

ʻʻನನಗೂ ಮೆಟ್ರೋಗೂ ಅದ್ಯಾವ ರೀತಿಯ ಸಂಬಂಧ ಅಂದರೆ, ತುಂಬ ಹೆಮ್ಮೆ ಎನಿಸುತ್ತೆ. ಒಂದು ದಿನ ನನಗೆ ಕರೆ ಬಂತು. 12 ವರ್ಷದ ಹಿಂದೆನೇ ಆಗಿರಬಹುದು. ನಿಮ್ಮದೊಂದು ವಾಯ್ಸ್‌ ನಮ್ಮ ಮೆಟ್ರೋಗೆ ಬೇಕು ಹೇಳಿದರು. ಆ ಮೇಲೆ ಏನಿದು ಅಂತ ಕೇಳಿದಾಗ, ನಿಮ್ಮದೊಂದು ವಾಯ್ಸ್ ಸ್ಯಾಂಪಲ್ ಕೊಡಿ ಎಂದು ಹೇಳಿದ್ದರು. ಆದರೆ ಅಪರ್ಣಾಗೆ ಹೇಗೆ ಧ್ವನಿ ಕೊಡಬೇಕು ಎಂದು ಗೊತ್ತಿರಲಿಲ್ಲ. ಬಳಿಕ ನ್ಯೂಸ್‌ ಪೇಪರ್‌ ಇಟ್ಟಕೊಂಡು ಧ್ವನಿ ನೀಡಿದ್ದರು. ಚೆನ್ನೈನಲ್ಲಿ ಈ ಎಲ್ಲ ನಿರ್ಧಾರಗಳನ್ನು ತೆಗದುಕೊಳ್ಳುತ್ತಿದ್ದರು. ಜಯನಗರ, ಈಗ ಏನೇನು ಬರುತ್ತೆ ಬಾಗಿಲನ್ನು ತೆರೆದು ಅಂತೆಲ್ಲ. ಇದೆಲ್ಲ ಯಾಕೆ? ಅವರನ್ನು ಕೇಳಿದೆ. ನನಗೆ ಐಡಿಯಾ ಇಲ್ಲ. ಇದೆಲ್ಲ ಹೆಂಗೆ ಬರುತ್ತೆ ಅಂತ ಆಗ ಅವರು ವಿವರಣೆ ಕೊಟ್ಟರು” ಎಂದು ಅಪರ್ಣಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಬಳಿಕ ಇಷ್ಟಾದರೂ ಅಪರ್ನಾ ಅವರು ಮೆಟ್ರೋಗೆ ಹೋಗೇ ಇರಲಿಲ್ಲ ಅಂತೆ. ದೀಪಾವಳಿ ಹಬ್ಬದ ದಿನ ಬನಶಂಕರಿಯಿಂದ ಎಂಜಿ ರಸ್ತೆವರೆಗೂ ಹೋಗಿ, ಬೈಯಪ್ಪನಹಳ್ಳಿವರೆಗೂ ಧ್ವನಿ ಹೇಗೆ ಇರಲಿದೆ ಎಂಬ ಕುತೂಹಲ ದಿಂದ ಪ್ರಯಾಣ ಮಾಡಿರುವುದಾಗಿ ಹೇಳಿಕೊಂಡಿದ್ದರು.

Exit mobile version