Site icon Vistara News

Actress Priyamani:  ಐಷಾರಾಮಿ ಕಾರು ಖರೀದಿಸಿದ ನಟಿ ಪ್ರಿಯಾಮಣಿ; ಬೆಲೆ ಎಷ್ಟು?

Actress Priyamani Purchased Mercedes Benz GLC Car Worth 90 Lakh Rs

ಬಹುಭಾಷಾ ನಟಿ ಪ್ರಿಯಾಮಣಿ (Actress Priyamani) ಅಭಿನಯದ ʻಆರ್ಟಿಕಲ್‌ 370ʼ ಸಿನಿಮಾ ಅದ್ಧೂರಿಯಾಗಿ ತೆರೆ ಕಂಡಿದೆ. ಜತೆಗೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸುದ್ದಿ ಬೆನ್ನಲ್ಲೇ ಹೊಸ ಸುದ್ದಿಯೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.

ಇತ್ತೀಚೆಗಷ್ಟೆ ಐಷಾರಾಮಿ ಕಾರೊಂದನ್ನು ಖರೀದಿ ಮಾಡಿದ್ದಾರೆ.

ಮರ್ಸಿಡೀಸ್ ಬೆಂಜ್‌ನ ಜಿಎಲ್​ಸಿ ಕಾರನ್ನು ಪ್ರಿಯಾಮಣಿ ಖರೀದಿ ಮಾಡಿದ್ದಾರೆ. ಪತಿ ಮುಸ್ತಾಫಾ ರಾಜಾ, ಅತ್ತೆ ಜತೆ ಮರ್ಸಿಡೀಜ್ ಬೆಂಜ್ ಶೋರೂಂಗೆ ಬಂದು ಕಾರನ್ನು ಖರೀದಿ ಮಾಡಿದ್ದಾರೆ ಪ್ರಿಯಾಮಣಿ.

ಇದನ್ನೂ ಓದಿ: Jawan Actress Priyamani: ಪ್ರಿಯಾಮಣಿಗೆ ಮೋಸ ಮಾಡಿದ ʻಜವಾನ್‌ʼ ನಿರ್ದೇಶಕ ಅಟ್ಲೀ!

ಅರಿಶಿಣ-ಕುಂಕುಮವಿಟ್ಟು, ತೆಂಗಿನ ಕಾಯಿ ಒಡೆದು, ಹಾರ ಹಾಕಿ ಕಾರಿಗೆ ಪೂಜೆ ಮಾಡಿದ್ದಾರೆ.

ಪ್ರಿಯಾಮಣಿ ಖರೀದಿ ಮಾಡಿರುವ ಐಷಾರಾಮಿ ಮರ್ಸಿಡೀಜ್ ಬೆಂಜ್ ಜಿಎಲ್​ಸಿ ಕಾರಿನ ಬೆಲೆ ಬೆಂಗಳೂರಿನಲ್ಲಿ 90.15 ಲಕ್ಷದಿಂದ ಒಂದು ಕೋಟಿ ರೂ. ಎಂದು ವರದಿಯಾಗಿದೆ.

ಸದ್ಯ ನಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Exit mobile version