Site icon Vistara News

Aditi Prabhudeva: ನಟಿ ಅದಿತಿ ಪ್ರಭುದೇವ ಸೀಮಂತ ಶಾಸ್ತ್ರ: ಇಲ್ಲಿದೆ ಫೋಟೊಸ್!

Aditi Prabhudeva baby shower

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ (Aditi Prabhudeva) ಅವರು ತಾಯಿಯಾಗುತ್ತಿರುವ ಸಂತೋಷದಲ್ಲಿದ್ದಾರೆ. 2024ರ ಹೊಸ ವರ್ಷದ ದಿನ ತಾವು ಗರ್ಭಿಣಿಯಾಗಿರುವ ವಿಚಾರವನ್ನು ಹೇಳಿಕೊಂಡಿದ್ದರು.

ಇದೀಗ ನಟಿ ಸಿಂಪಲ್‌ ಆಗಿ ಸೀಮಂತ ಕಾರ್ಯವನ್ನು ಮಾಡಿಸಿಕೊಂಡಿದ್ದಾರೆ. ಅದಿತಿ ಪ್ರಭುದೇವ ಶ್ರೀಮಂತ ಶಾಸ್ತ್ರಕ್ಕೆ ಅನೇಕ ಸ್ಯಾಂಡಲ್​ವುಡ್ ನಟ-ನಟಿಯರು ಕೂಡ ಆಗಮಿಸಿದ್ದರು.

ನಟ ಶರಣ್ ಕೂಡ ಕಾರ್ಯಕ್ರಮಕ್ಕೆ ಬಂದು ಅದಿತಿಗೆ ಶುಭಕೋರಿದ್ದಾರೆ. ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ʻʻಕಂದಮ್ಮಗಳು ಸ್ವರ್ಗದಿಂದ ಬರುವ ಉಡುಗೊರೆಗಳು, ಈ ಅದ್ಭುತ ಕ್ಷಣಕ್ಕೆ ಸಜ್ಜಾಗುತ್ತಿರುವ ನಿಮಗೆ ಅಭಿನಂದನೆʼʼ ಎಂದು ಶರಣ್‌ ಇನ್‌ಸ್ಟಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Aditi Prabhudeva: ರೊಮ್ಯಾಂಟಿಕ್ ಹಾಡಿನ ಮೂಲಕ ಬಂದ ಪ್ರಜ್ವಲ್-ಅದಿತಿ ಪ್ರಭುದೇವ!

ಗುರು ಕಿರಣ್‌ ದಂಪತಿ ಕೂಡ ದಂಪತಿಗೆ ಶುಭ ಹಾರೈಸಿದ್ದರು. ಅದಿತಿ ಅವರು ಹೊಸ ವರ್ಷಕ್ಕೆ ʻʻಸಂಬಂಧಗಳಲ್ಲಿ ಶ್ರೇಷ್ಠವಾದದ್ದು , ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ “ಅಮ್ಮ”. ಜೀವನದಲ್ಲಿ ಪ್ರತಿಯೊಬ್ಬರೂ ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ “ಅಮ್ಮ” . ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ “ಅಮ್ಮ”. 2024ಕ್ಕೆ ನಾನು ” ಅಮ್ಮ” ಎಂದು ಫೋಟೊಗಳನ್ನು ಶೇರ್‌ ಮಾಡಿ ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟಿದ್ದರು.

ಯಶಸ್ವಿ ಜತೆ 2022ರ ನವೆಂಬರ್‌ 28ರಂದು ಅದಿತಿ ಅವರ ಮದುವೆ ನಡೆದಿತ್ತು.‘ಧೈರ್ಯಂ’, ‘ಬಜಾರ್’, ‘ಸಿಂಗ’, ‘ರಂಗನಾಯಕಿ’, ‘ಬ್ರಹ್ಮಚಾರಿ’, ‘ಆನ’ ,‘ತೋತಾಪುರಿ’, ‘ಗಜಾನನ ಆ್ಯಂಡ್‌ ಗ್ಯಾಂಗ್’, ‘ಓಲ್ಡ್ ಮಾಂಕ್’, ‘ಚಾಂಪಿಯನ್’, ‘ತ್ರಿಬಲ್ ರೈಡಿಂಗ್’, ‘ಅಂದೊಂದಿತ್ತು ಕಾಲ’, ‘ಮಾಫಿಯಾ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ.

Exit mobile version