Site icon Vistara News

Aditi Prabhudeva: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಅದಿತಿ ಪ್ರಭುದೇವ

Aditi Prabhudeva welcomes baby girl

ಸ್ಯಾಂಡಲ್​ವುಡ್ ನಟಿ ಅದಿತಿ ಪ್ರಭುದೇವ (Aditi Prabhudeva) ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಮ್ಮನೆ ಮಹಾಲಕ್ಷ್ಮಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ಎಂದು ಇನ್‌ಸ್ಟಾದಲ್ಲಿ ಫೋಟೊ ಶೇರ್‌ ಮಾಡಿಕೊಂಡಿದ್ದಾರೆ.

ಈ ಫೋಟೋದಲ್ಲಿ ಅವರ ಪತಿ ಹಾಗೂ ಮಗಳ ಕೈ ಜತೆ ಅವರ ಕೈ ಕೂಡಾ ಇದೆ.

ಈ ಹಿಂದೆ ಅದಿತಿ ಫೋಟೊಶೂಟ್‌ ಮಾಡಿಸಿಕೊಂಡಿದ್ದರು. ಕೊನೆಗೂ ಈಡೇರಿದ ನನ್ನ ಪುಟ್ಟ ಆಸೆ ಎಂದು ಬರೆದಿರುವ ಅದಿತಿ ಪ್ರಭುದೇವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಯಶಸ್ವಿ ಜತೆ 2022ರ ನವೆಂಬರ್‌ 28ರಂದು ಅದಿತಿ ಅವರ ಮದುವೆ ನಡೆದಿತ್ತು.

‘ಧೈರ್ಯಂ’, ‘ಬಜಾರ್’, ‘ಸಿಂಗ’, ‘ರಂಗ ನಾಯಕಿ’, ‘ಬ್ರಹ್ಮಚಾರಿ’, ‘ಆನ’ ,‘ತೋತಾಪುರಿ’, ‘ಗಜಾನನ ಆ್ಯಂಡ್‌ ಗ್ಯಾಂಗ್’, ‘ಓಲ್ಡ್ ಮಾಂಕ್’, ‘ಚಾಂಪಿಯನ್’, ‘ತ್ರಿಬಲ್ ರೈಡಿಂಗ್’, ‘ಅಂದೊಂದಿತ್ತು ಕಾಲ’, ‘ಮಾಫಿಯಾ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ.
Exit mobile version